Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಟಿ20 ಪಂದ್ಯಕ್ಕೂ ಮೊದಲು ಧೋನಿ ಬಳಿ ಟಿಪ್ಸ್ ಪಡೆದ ರಿಷಬ್ ಪಂತ್.

ಟಿ20 ಪಂದ್ಯಕ್ಕೂ ಮೊದಲು ಧೋನಿ ಬಳಿ ಟಿಪ್ಸ್ ಪಡೆದ ರಿಷಬ್ ಪಂತ್.

 

ನವದೆಹಲಿ: ನವೆಂಬರ್​ 3ರಿಂದ ಬಾಂಗ್ಲಾದೇಶದ ವಿರುದ್ಧ ಮೂರು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದ್ದು, ಈಗಾಗಲೇ ರೋಹಿತ್​ ಶರ್ಮಾ ನೇತೃತ್ವದಲ್ಲಿ 15 ಸದಸ್ಯರ ಟೀಂ ಇಂಡಿಯಾ ಪ್ರಕಟಗೊಂಡಿದೆ.ಚುಟುಕು ಕ್ರಿಕೆಟ್​​ನಲ್ಲಿ ಮತ್ತೊಮ್ಮೆ ಎಂಎಸ್​ ಧೋನಿಗೆ ಕೈಬಿಟ್ಟಿರುವ ಆಯ್ಕೆ ಸಮಿತಿ ಯಂಗ್​ ವಿಕೆಟ್​ ಕೀಪರ್​ಗಳಾದ ರಿಷಭ್​ ಪಂತ್​ ಹಾಗೂ ಕೇರಳದ ಸಂಜು ಸ್ಯಾಮ್ಸನ್​ಗೆ ಮಣೆ ಹಾಕಿದೆ. ಧೋನಿ ಉತ್ತರಾಧಿಕಾರಿ ಎಂಬ ಹೆಸರು ಪಡೆದುಕೊಂಡಿರುವ ರಿಷಭ್​ ಪಂತ್​ ನಮ್ಮ ಮೊದಲ ಆದ್ಯತೆ ಎಂದು ಈಗಾಗಲೇ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ ಹೇಳಿಕೆ ಸಹ ನೀಡಿದ್ದಾರೆ. ಇದೀಗ ಎಂಎಸ್​ ಧೋನಿ ಭೇಟಿ ಮಾಡಿರುವ ರಿಷಭ್​ ಪಂತ್​​ ಕೆಲ ಗಂಟೆ ಅವರೊಂದಿಗೆ ಕಳೆದಿದ್ದಾರೆ.
ಟಿ-20 ಕ್ರಿಕೆಟ್​ ಹಾಗೂ ಟೆಸ್ಟ್​ ಸರಣಿಯಲ್ಲಿ ಅವಕಾಶ ಪಡೆದುಕೊಂಡಿರುವ ರಿಷಭ್​ ಸರಣಿ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಕ್ರಿಕೆಟ್​ ಲೆಜೆಂಡಾ ಎಂಎಸ್​ ಧೋನಿ ಭೇಟಿಯಾಗಿದ್ದು, ಅವರೊಂದಿಗೆ ಪೋಟೋ ಶೇರ್​ ಮಾಡಿದ್ದಾರೆ. ಇದೇ ವೇಳೆ ಅವರೊಂದಿಗೆ ವಿಕೆಟ್​ ಕೀಪಿಂಗ್​ ಬಗ್ಗೆ ಕೆಲವೊಂದು ಟಿಪ್ಸ್​​ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Share

About Vijayalakshmi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!