Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಪೋನ್ ಕರೆ ಸ್ವೀಕರಿಸದ ಕಾರಣಕ್ಕೆ ಸಾವಿಗಿಡಾದ ನಿಶ್ಚಿತಾರ್ಥ ಜೋಡಿಗಳು

ಪೋನ್ ಕರೆ ಸ್ವೀಕರಿಸದ ಕಾರಣಕ್ಕೆ ಸಾವಿಗಿಡಾದ ನಿಶ್ಚಿತಾರ್ಥ ಜೋಡಿಗಳು

ಹುಬ್ಬಳ್ಳಿ,ನ.28-ಪ್ರೀಯಕರ ಫೋನ್ ಕರೆ ಸ್ವೀಕರಿಸುತ್ತಿಲ್ಲಾ ಎಂಬ ಕಾರಣಕ್ಕೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಯುವಕ ಕೂಡಾ ನೇಣಿಗೆ ಶರಣಾದ ಘಟನೆ ಕರ್ಕಿ ಬಸವೇಶ್ವರ ನಗರದಲ್ಲಿ ನಡೆದಿದೆ.
ರೇಖಾ (19) ವಿಷಸೇವಿಸಿದ ಯುವತಿಯಾಗಿದ್ದು , ವಿಷ್ಣು ಪಗಲಾಪುರ (20 ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಇವರಿಬ್ಬರು ಕಳೆದ ಐದಾರು ವರ್ಷಗಳಿಂದ ಪರಸ್ಪರ ‌ಪ್ರೀತಿ ಮಾಡುತ್ತಿದ್ದರು. ಮನೆಯವರ ವಿರೋಧದ ನಡುವೆ ಕಳೆದ ಐದು ತಿಂಗಳ ಹಿಂದೆ ಇಬ್ಬರ ಮನೆಯವರು ನಿಶ್ಚಿತಾರ್ಥ ಮಾಡಿದ್ದರು. ಅಲ್ಲದೇ ಏ. 24 ರಂದು ಮದುವೆ ದಿನಾಂಕವನ್ನು ನಿಶ್ಚತ ಮಾಡಲಾಗಿತ್ತು. ಆದರೆ ಬುಧವಾರ ರೇಖಾ, ವಿಷ್ಣುಗೆ ದಿನವೀಡಿ ಫೋನ್ ಕರೆ ಮಾಡಿದ್ದಾಳೆ. ಆದರೆ ವಿಷ್ಣು ಫೋನ್ ಕರೆ ಸ್ವೀಕರಿಸಿಲ್ಲ. ಈ ಒಂದು ಕಾರಣಕ್ಕೆ ಮನನೊಂದ ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ವಿಷಯ ತಿಳಿಯುತ್ತಿದಂತೆ ತನ್ನ ಅಜ್ಜಿಯ ಮನೆಗೆ ತೆರಳಿದ ವಿಷ್ಣು ನೇಣಿಗೆ ಕೊರಳೊಡಿದ್ದಾನೆ. ಈ ಸಂಬಂಧ ಬೆಂಡಿಗೇರಿ‌‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!