Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಪ್ರತ್ಯೇಕ ಧ್ವಜದ ಚರ್ಚೆ ಅನಗತ್ಯ: ಹೊರಟ್ಟಿ.

ಪ್ರತ್ಯೇಕ ಧ್ವಜದ ಚರ್ಚೆ ಅನಗತ್ಯ: ಹೊರಟ್ಟಿ.

 

ಹುಬ್ಬಳ್ಳಿ: ರಾಜ್ಯದ ಪ್ರತ್ಯೇಕ ಧ್ವಜದ ಕುರಿತು ವಿನಾಕಾರಣ ಚರ್ಚೆ ಬೇಡಾ ಎಂದು ಜೆಡಿಎಸ್ ಮುಖಂಡ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ರಾಜ್ಯಕ್ಕೆ ಪ್ರತ್ಯೇಕ ಧ್ವಜ ವಿವಾದಕ್ಕೆ ಸಿಲುಕಬೇಡಿ ಎಂದು ಹೇಳಿದ್ದೆ.‌ ಅಲ್ಲದೇ ಕನ್ನಡದ ಧ್ವಜದ ಬಗ್ಗೆ ಇದೀಗ ವಿನಾಕಾರಣ ಚರ್ಚೆ ಬೇಡ ಎಂದರು.
*ಜೆಡಿಎಸ್ ಮುಖಂಡರ ಬಂಡಾಯ ಶಮನ:* ನಮ್ಮ ಜೆಡಿಎಸ್ ಪಕ್ಷದಲ್ಲಿ ಬಂಡಾಯ ಬಹುತೇಕ ಶಮನವಾಗಿದೆ. ನಾವೆಲ್ಲಾ ದೇವೇಗೌಡರನ್ನು ಭೇಟಿ ಮಾಡಿದ್ದೇವೆ. ದೇವೆಗೌಡರ ಜೊತೆಗೆ ನಾನು ನಡೆಸಿದ ಮೀಟಿಂಗ್ ಬಗ್ಗೆ ತಿಳಿಸಿದ್ದೇವೆ. ಅವರು 6-7 ಕ್ಕೆ ಮತ್ತೊಂದು ಸಭೆ ನಡೆಸುವುದಾಗಿ ಹೇಳಿದ್ದಾರೆ. ನಮ್ಮದೂ ಈಗ ಸರ್ಕಾರನೂ ಎನೂ ಇಲ್ಲ. ಮಂತ್ರಿ ಮಾಡಿ ಬೋರ್ಡ ಕೊಡಿ ಅಂತಾ ಕೇಳೋಕು ಆಗಲ್ಲ. ದೇವೆಗೌಡರಿಗೆ ನಮ್ಮ ಬಗ್ಗೆ ಕಾಳಜಿ ಮಾಡಿದ್ದಾರೆ. ಸ್ವಲ್ಪಮಟ್ಟಿಗೆ ಬಂಡಾಯ ಶಮನವಾಗಿದೆ. ನಮ್ಮ ಬೇಡಿಕೆಗಳು ಎನೂ ದೊಡದಾಗಿಲ್ಲ ಎಂದರು.
ಇನ್ನೂ ಶೆಟ್ಟರ್ ವಿದೇಶ ಪ್ರವಾಸ ಕುರಿತು‌ ಮಾತನಾಡಿದ ಅವರು, ನಾವೂ 11 ಜನ ವಿದೇಶ ಪ್ರವಾಸಕ್ಕೆ ಬರಲ್ಲವೆಂದು ತಿಳಿಸಿದ್ದೇವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಇರುವಾಗ ವಿದೇಶ ಪ್ರವಾಸ ಒಳ್ಳೆಯದಲ್ಲ. ಜಗದೀಶ್ ಶೆಟ್ಟರ್ ಆಗಲಿ ಬೇರೆ ಯಾರೇ ಆಗಲಿ ವಿದೇಶ ಪ್ರವಾಸಕ್ಕೆ ಹೋಗೋದು ಸೂಕ್ತವಲ್ಲ ಎಂದರು.‌

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!