Hiring Reporter’s For more Information Contact Above Number 876 225 4007 . Program producer
Home / Breaking News / ರೈತ ಸಮುದಾಯಕ್ಕೆ ಶಾಕಿಂಗ್ ನ್ಯೂಸ್

ರೈತ ಸಮುದಾಯಕ್ಕೆ ಶಾಕಿಂಗ್ ನ್ಯೂಸ್

Spread the love

ಬೆಂಗಳೂರು : ರಾಜ್ಯದ ರೈತರಿಗೆ ಗಣಕೀಕೃತ ಹಕ್ಕು ಬದಲಾವಣೆ ಪಹಣಿಗಳನ್ನು ಒದಗಿಸುವಂತ ಶುಲ್ಕದಲ್ಲಿ ಕಂದಾಯ ಇಲಾಖೆ ಏರಿಕೆ ಮಾಡಿದ್ದು, ಈ ಮೊದಲು ಮ್ಯುಟೇಶನ್ ಸ್ಥಿತಿಯ ವಿವರದ ಪ್ರತಿ ಪಡೆಯಲು ಇದ್ದಂತ ರೂ.15 ಶುಲ್ಕವನ್ನು ರೂ.25ಕ್ಕೆ ಏರಿಕೆ ಮಾಡಿದೆ. ಅಲ್ಲದೇ ಮ್ಯುಟೇಶನ್ ಉದೃತ ಪ್ರತಿ ಪಡೆಯಲು ವಿಧಿಸಲಾಗಿದ್ದಂತ ರೂ.15ರ ಶುಲ್ಕವನ್ನು ಸಹ ರೂ.25ಕ್ಕೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಈ ಕುರಿತಂತೆ ಕಂದಾಯ ಇಲಾಖೆ(ಭೂಮಿ ಮತ್ತು ಯು ಪಿ ಓ ಆರ್) ಸರ್ಕಾರದ ಅಧೀನ ಕಾರ್ಯದರ್ಶಿ ಆರ್ ಶಿವಕುಮಾರ್ ಆದೇಶ ಹೊರಡಿಸಿದ್ದು, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ 14ನೇ ವಿಧಾನ ಸಭೆಯ 5ನೇ ವರದಿಯಂತೆ ಬಳಕೆದಾರರಿಂದ ಸಂಗ್ರಹಿಸಲಾಗುತ್ತಿರುವ ಶುಲ್ಕದ ಪರಿಷ್ಕರಣೆ ಹಾಗೂ ಸದ್ಬಳಕೆಯ ಕುರಿತು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯಲ್ಲಿ ಚರ್ಚಿಸಲಾದಂತೆ, ಬಳಕೆದಾರರ ಶುಲ್ಕಗಳನ್ನು ಪರಿಷ್ಕರಿಸಿ, ಮೂರು ವರ್ಷಗಳು ಮೀರಿದ್ದಲ್ಲಿ, ಅವುಗಳ ಪರಿಷ್ಕರಣೆಗಾಗಿ ಸಂಬಂಧ ಪಟ್ಟ ಆಡಳಿತ ಇಲಾಖೆಗಳು ಪ್ರಸ್ತಾವನೆ ಸಲ್ಲಿಸುವಂತೆ ಕೋರಲಾಗಿತ್ತು.

ಸರ್ಕಾರದ ಆದೇಶಗಳಲ್ಲಿ ಮ್ಯುಟೇಶನ್ ಸ್ಥಿತಿಯ ವಿವರಗಳನ್ನು ಹಾಗೂ ಮ್ಯುಟೇಶನ್ ಉದೃತ ಭಾಗಗಳನ್ನು ಪಡೆಯಲು ರೂ.15 ಶುಲ್ಕವನ್ನು ನಿಗಧಿಪಡಿಸಿ ಆದೇಶಹೊರಡಿಸಲಾಗಿತ್ತು.

ಇಂತಹ ಶುಲ್ಕವನ್ನು 2000ನೇ ಸಾಲಿನಿಂದ ಹೆಚ್ಚಿಸಿರದೇ ಇರುವುದರಿಂದ, ಇದೀಗ ಪ್ರಸ್ತುತ ಶುಲ್ಕವನ್ನು ಮ್ಯುಟೇಶನ್ ಸ್ಥಿತಿ ವಿವರದ ಪ್ರತಿಗಾಗಿ ರೂ.15ರಿಂದ ರೂ.15ಕ್ಕೆ, ಮ್ಯುಟೇಶನ್ ಉದೃತ ಪ್ರತಿ ಪಡೆಯಲು ರೂ.15ರಿಂದ ರೂ.25ಕ್ಕೆ ಶುಲ್ಕವನ್ನು ಏರಿಕೆ ಮಾಡಿ ಆದೇಶಿಸಿದ್ದಾರೆ. ಹೀಗಾಗಿ ಇನ್ಮುಂದೆ ಮ್ಯುಟೇಶನ್ ಸ್ಥಿತಿ ಪ್ರತಿ ಹಾಗೂ ಮ್ಯುಟೇಶನ್ ಉದೃತ ಪ್ರತಿ ಪಡೆಯಲು ರೂ.25 ಶುಲ್ಕ ಪಾವತಿಸಬೇಕಾಗಿದೆ.

Check Also

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

Spread the love ನವ ದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!