Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಸಿದ್ದರಾಮಯ್ಯ ಕೆಳಗೆ ಬಿದ್ದರು ಮೀಸೆ ಮಣ್ಣಾಗಲ್ಲ ಎಂಬ ಜಾಯಮಾನದವರು : ಶ್ರೀರಾಮಲು ಆರೋಪ

ಸಿದ್ದರಾಮಯ್ಯ ಕೆಳಗೆ ಬಿದ್ದರು ಮೀಸೆ ಮಣ್ಣಾಗಲ್ಲ ಎಂಬ ಜಾಯಮಾನದವರು : ಶ್ರೀರಾಮಲು ಆರೋಪ

ಚಿತ್ರದುರ್ಗ:- ಸಿದ್ದರಾಮಯ್ಯ ಅವರು ಕೆಳಗೆ ಬಿದ್ದರು ಮೀಸೆ ಮಣ್ಣಾಗಿಲ್ಲ ಎನ್ನುವ ಜಾಯಮಾನ, ಅವರ ಪ್ರಚೋದನಾಕಾರಿ ಹೇಳಿಕೆಗಳಿಂದಲ್ಲೇ ಮೈತ್ರಿ ಸರ್ಕಾರ ಅಂತ್ಯಕ್ಕೆ ಕಾರಣವಾಯಿತು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮಲು ಗಂಭೀರವಾಗಿ ಆರೋಪಿಸಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಯಾವ ವಿಷಯದಲ್ಲೂ ಸಮಾಧಾನ ಇರಲ್ಲಾ. ಅವರ ಪ್ರಚೋದನಾ ಹೇಳಿಕೆಗಳಿಂದಲ್ಲೇ ಮೈತ್ರಿ ಸರ್ಕಾರ ಉರುಳಿತು ಎಂದರು.
ಇನ್ನೂ ದೇಶದಲ್ಲಿ ಮೋದಿ ಅಲೆ ಹೆಚ್ಚಾಗಿದ್ದು, ಅಲ್ಲದೇ ಮಹಾರಾಷ್ಟ್ರ, ಹರಿಯಾಣದಲ್ಲಿನ ಮುಖ್ಯಮಂತ್ರಿಗಳು ಕೂಡಾ ಜನಪ್ರೀಯತೆ ಹೊಂದಿದ್ದು, ಮೋದಿ ಜೊತೆ ದೇಶದಲ್ಲಿ ಕಲಮ ಅರಳುವುದು. ರಾಜ್ಯದಲ್ಲಿ ಮೂರು ವರ್ಷ ಅಷ್ಟೇ ಅಲ್ಲದೇ ಇನ್ನೂ ಇಪ್ಪತ್ತು ವರ್ಷ ಆದರೂ ಬಿಜೆಪಿ ಬರುವುದು ಎಂದರು.
ಡಿ.ಕೆ.ಶಿವಕುಮಾರ ಬಗ್ಗೆ ನಾನು ಮನಸ್ಸಿಂದಾ ಮಾತನಾಡಿಲ್ಲ. ಜೈಲಿಗೆ ಹೋಗಲಿ ಎಂದು ಹೇಳಿದವನು ಅಲ್ಲ. ನ್ಯಾಯಾಲಯದಿಂದ ಜಾಮೀನು ಪಡೆದು ಅವರು ಬಂದಿದ್ದಾರೆ‌. ಕಾನೂನಿನ ಮೇಲೆ ಎಲ್ಲರಿಗೂ ಗೌರವ ಇದೆ. ಕೆಟ್ಟದನ್ನು ಬಯಸುವವರಿಗೆ ಹಿಂದೂಗಳಲ್ಲ. ಕೆಟ್ಟದನ್ನು ಬಯಸುವವರು ಹಿಂದೂಗಳಲ್ಲ. ಕೆಟ್ಟದನ್ನು ಶತೃಗಳಿಗೂ ಬಯಸಲ್ಲ. ದೇವರೇ ಕೈ ಹಿಡಿದು ಕಷ್ಟಗಳಿಂದ ಪರಿಹರಿಸಲಿ. ಕಾನೂನು ದೇವರಿದ್ದಾನೆ ಎಲ್ಲರನ್ನೂ ಕಾಪಾಡುತ್ತಾನೆ.‌ ಡಿಕೆಶಿ ಜೈಲಿಗೆ ಹೋದಾಗ ನಾವು ಹೊರಗೆ ಬರಲಿ ಎಂದು ಪ್ರಾರ್ಥಿಸಿದ್ದೇವೆ ಯಾರಿಗೂ ಕೆಟ್ಟದನ್ನು ಬಯಸಲ್ಲ ಎಂದರು.

Share

About solaragoppa

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!