Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಸಿದ್ದರಾಮಯ್ಯ ಕೈ ಪಕ್ಷಕ್ಕೆ ದೊಡ್ಡ ಶನಿ: ಜನಾರ್ಧನ್ ಪೂಜಾರಿ ವಾಗ್ದಾಳಿ.

ಸಿದ್ದರಾಮಯ್ಯ ಕೈ ಪಕ್ಷಕ್ಕೆ ದೊಡ್ಡ ಶನಿ: ಜನಾರ್ಧನ್ ಪೂಜಾರಿ ವಾಗ್ದಾಳಿ.

ಮಂಗಳೂರು: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶನಿ ಎಂದು ಜನಾರ್ದನ ಪೂಜಾರಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಿಯೇ ಹೋಗುವುದು, ಇದು ದೇವರಿಗೂ ಗೊತ್ತಿದೆ.
ಅವರಿಗೆ ಹೆಚ್ಚು ಅಧಿಕಾರ ಕೊಡೋದು ದೊಡ್ಡ ತಪ್ಪು. ಆ ತಪ್ಪು ‌ಮತ್ತೆ ಮಾಡಬೇಡಿ ಅಂತ ಹೈಕಮಾಂಡ್ ಗೂ ಹೇಳ್ತೇನೆ ಎಂದರು. ಹೈಕಮಾಂಡ್ ದೊಡ್ಡ ತಪ್ಪು ‌ಮಾಡುತ್ತಿದೆ, ನಾನು ಹೊಸಬನಲ್ಲ. ಉಪಚುನಾವಣೆ ಬಗ್ಗೆ ಕಾದು ನೋಡುವ, ಇವರು ಬದುಕುವ ಲಕ್ಷಣ ಕಾಣುತ್ತಿಲ್ಲ. ಸಿದ್ದರಾಮಯ್ಯ ಇಷ್ಟರವರೆಗೆ ಎಲ್ಲಿದ್ದರು, ಈಗ ಅವರಿಗೆ ಮಂಗಳೂರಿನಲ್ಲಿ ಕಾಂಗ್ರೆಸ್ ಇದೆ ಅಂತ ಗೊತ್ತಾಗಿದೆ ಎಂದು ಕಿಡಿ ಕಾರಿದರು.
ಅವರು ನಾಳೆ ಮಂಗಳೂರಿಗೆ ಬಂದು ಮಾತನಾಡಲಿ, ಮರುದಿನ ಅದಕ್ಕೆ ಉತ್ತರ ಕೊಡ್ತೇನೆ. ದ.ಕ ಮತ್ತು ಉಡುಪಿ ವಿಧಾನಸಭೆ, ಲೋಕಸಭೆ ಕಾಂಗ್ರೆಸ್ ಸೋಲಿಗೆ ಹಿರಿಯರ ಕಡೆಗಣನೆ ಕಾರಣ. ಈ ಮಾತು ನೂರಕ್ಕೆ‌ ನೂರು ಸತ್ಯ, ಇದರಲ್ಲಿ ಸ್ವಲ್ಪವೂ ಸುಳ್ಳಿಲ್ಲ ಎಂದು ತಿಳಿಸಿದರು.

Share

About SRINIVAS BIG TV NEWS, MANGALORE

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!