Breaking News
Hiring Reporter’s For more Information Contact Above Number 876 225 4007 . Program producer
Home / Breaking News / ವೀರಸಾವರಕರ್ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಫಲ ಅನುಭವಿಸುತ್ತಾರೆ : ಶೆಟ್ಟರ್

ವೀರಸಾವರಕರ್ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಫಲ ಅನುಭವಿಸುತ್ತಾರೆ : ಶೆಟ್ಟರ್

ಹುಬ್ಬಳ್ಳಿ:- ಸಿದ್ದರಾಮಯ್ಯ ಸ್ವತಂತ್ರ ಹೋರಾಟಗಾರರು ಹಾಗೂ ಅಪ್ರತಿಮ ವೀರರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿದ್ದು ಸರಿಯಲ್ಲ. ಇದರ ಪ್ರತಿಫಲವನ್ನು ಸಿದ್ದರಾಮಯ್ಯ ಅವರು ಅನುಭವಿಸುತ್ತಾರೆಂದು ಸಚಿವ ಜಗದೀಶ್ ಶೆಟ್ಟರ್ ಖಾರವಾಗಿ ಟೀಕೆ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವೀರಸಾವರಕರ್ ಬಗ್ಗೆ ಸತ್ಯ ಹೇಳಿದ್ದೇನೆ ಎಂದು ತಿಳಿದಿದ್ದಾರೆ. ಕಾಂಗ್ರೆಸ್ ನವರಿಗೆ ಈ ರೀತಿ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡುವುದು ರೂಢಿಯಾಗಿದೆ. ಇದು ಸಿದ್ದರಾಮಯ್ಯ ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದರು.

ಸಿದ್ದರಾಮಯ್ಯ ಅವರು ಸ್ವತಂತ್ರ ಹೋರಾಟಗಾರರ ಬಗ್ಗೆ ಕೀಳಾಗಿ ಮಾತನಾಡುವದರಿಂದ ನಾಯಕತ್ವ ಹೆಚ್ಚಾಗುತ್ತೆ ಎಂದು ತಿಳಿದಿದ್ದಾರೆ. ಪ್ರತಿಯೊಬ್ಬರ ಬಗ್ಗೆ ಏಕವಚನದಲ್ಲಿ ಮಾತನಾಡುವುದೇ ಅವರ ಸಂಸ್ಕೃತಿಯಾಗಿದೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಅವರ ಬಗ್ಗೆಯೂ ಏಕವಚನದಲ್ಲಿ ಮಾತನಾಡಿದ್ದಾರೆ. ನಾನು ಇದೀಗ ಸಿದ್ದರಾಮಯ್ಯ ಅವರಿಗೆ ಎಲ್ಲಿದಿಯಪ್ಪ ಅಂತಾ ಏಕವಚನದಲ್ಲಿ ಮಾತನಾಡುತ್ತೆನೆ. ಆ ರೀತಿ ಏಕವಚನದಲ್ಲಿ ಮಾತನಾಡಿದರೆ ಸಣ್ಣತನವನ್ನು ಆಗುವುದು. ಇನ್ನಾದರೂ ಸಿದ್ದರಾಮಯ್ಯ ಕೀಳುಮಟ್ಟದಲ್ಲಿ ಮಾತನಾಡುವುದನ್ನು ಬಿಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಫಲ ಅನುಭವಿಸುತ್ತಾರೆ ಎಂದು ಹರಿಹಾಯ್ದಿದ್ದಾರೆ.

Share

About solaragoppa

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!