Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಖಾಸಗಿ ಬಸ್ ಅಪಘಾತ : ಆರು ಜನರ ಸಾವು.

ಖಾಸಗಿ ಬಸ್ ಅಪಘಾತ : ಆರು ಜನರ ಸಾವು.

 

ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದು ಆರು ಜನ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು‌ ಜಿಲ್ಲೆಯ‌ ಕೊರಟಗೆರೆ ತಾಲ್ಲೂಕಿನ ಜಟ್ಟಿ ಅಗ್ರಹಾರ ಬಳಿ ನಡೆದಿದೆ. ಪಾವಗಡದಿಂದ ತುಮಕೂರಿಗೆ ಬರುತ್ತಿದ್ದ ವಿಜಯಲಕ್ಷ್ಮಿ ಖಾಸಗಿ ಬಸ್ ಅಗ್ರಹಾರ ಬಳಿ ರಸ್ತೆಯಲ್ಲೆ ಪಲ್ಟಿಯಾಗಿದೆ. ಘಟನೆಯಲ್ಲಿ ಆರು ಜನ ಪ್ರಯಾಣಿಕರು ಮೃತಪಟ್ಟಿದ್ದು ಹಲವರಿಗೆ ಗಂಭೀರವಾಗಿ ಗಾಯಗಳಾಗಿದೆ. ಗಾಯಾಳುಗಳನ್ನ ಸ್ಥಳೀಯರ ನೆರವಿನಿಂದ ತುಮಕೂರು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಕೊರಟಗೆರೆ ಪೋಲಿಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಕೊನಾ ವಂಶಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

108 ಆ್ಯಂಬುಲೆನ್ಸ್ ಪಂಕ್ಚರ್…

ಇನ್ನೂ ಅಪಘಾತ ನಡೆದ ತಕ್ಷಣ ಆ್ಯಂಬುಲೆನ್ಸ್ ಗೆ ಜನರು ಕರೆ ಮಾಡಿದ್ದಾರೆ…ಆದರೆ ಕೊರಟಗೆರೆ 108 ಆ್ಯಂಬುಲೆನ್ಸ್ ಪಂಕ್ಚರ್ ಆಗಿ ನಿಂತಿದ್ದು ಕರೆ ಬಂದ ನಂತರ ಟೈರ್ ಬದಲಾಯಿಸುತ್ತಿದ್ದು ಕಂಡು ಬಂದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು‌ 108 ಸಿಬ್ಬಂದಿಯ ನಿರ್ಲಕ್ಷ್ಯ ಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಖಾಸಗಿ ಬಸ್ ಗಳ ಅತೀ ವೇಗ ಅಡ್ಡಾದಿಡ್ಡಿ ಚಾಲನೆಗೆ ಕಡಿವಾಣ ಹಾಕದ ಪೋಲಿಸರು.

ತುಮಕೂರು ಪಾವಗಡ ಮಾರ್ಗದಲ್ಲಿ ಖಾಸಗಿ ಬಸ್ ಗಳ ಹಾವಳಿ ಹೆಚ್ಚಾಗಿದೆ. ಈ ರಸ್ತೆಯಲ್ಲಿ ಸರ್ಕಾರಿ ಬಸ್ ಗಳ ಸಂಚಾರ ಕಡಿಮೆಯಿದ್ದು…ಖಾಸಗಿ ಬಸ್ ಗಳದ್ದೆ ಕಾರುಬಾರು. ಖಾಸಗಿ ಬಸ್ ಗಳ ಚಾಲಕರು ಈ ಮಾರ್ಗದಲ್ಲಿ ಅತೀವೇಗವಾಗಿ ಅಡ್ಡಾದಿಡ್ಡಿಯಾಗಿ ಬಸ್ ಗಳನ್ನ ಚಾಲನೆ ಮಾಡುತ್ತಿದ್ದರು. ಇದರಿಂದ ಅದೇಷ್ಟೋ ಪಾದಾಚಾರಿಗಳು, ಬೈಕ್ ಸವಾರರರು ಮೃತಪಟ್ಟಿರುವ ಪ್ರಕರಣಗಳು ಸಾಕಷ್ಟಿದೆ. ಈ ಬಗ್ಗೆ ಸಾರ್ವಜನಿಕರು ಖಾಸಗಿ ಬಸ್ ಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ರು ಪೋಲಿಸರು, ಆರ್ ಟಿ ಓ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ‌.

Share

About Manjunath

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!