Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಶೀಘ್ರದಲ್ಲೇ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ: ಬಿಎಸ್ ವೈ ಭವಿಷ್ಯ.

ಶೀಘ್ರದಲ್ಲೇ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ: ಬಿಎಸ್ ವೈ ಭವಿಷ್ಯ.

ಹುಬ್ಬಳ್ಳಿ: ಕಾಂಗ್ರೆಸ್ ಮುಕ್ತ ಭಾರತ ಶೀಘ್ರದಲ್ಲೇ ಆಗಲಿದ್ದು, ಅಲ್ಲದೇ ಅದು ಸಾಕಾರಗೊಳಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಸಭೆ ನಡೆಸಲಾಗುತ್ತಿದ್ದು, ಬಿಜೆಪಿಯ ಪ್ರಮುಖರೊಂದಿಗೆ ಬೆಳಿಗ್ಗೆಯಿಂದ ಸಂಜೆವರೆಗೆ ದೀರ್ಘ ಕಾಲದ ಸಮಾಲೋಚನೆ ನಡೆಸುತ್ತೇವೆ. ಚುನಾವಣೆಗೆ ಬೇಕಾಗುವ ಎಲ್ಲ ಗಣತಂತ್ರ ರೂಪಿಸಲಾಗುವುದು. ಕಾಂಗ್ರೆಸ್ ನಾಯಕತ್ವ ಇಲ್ಲದ ಪಾರ್ಟಿ ಆಗಿದ್ದು,
ಶೀಘ್ರವೇ ಭಾರತ ಕಾಂಗ್ರೆಸ್ ಮುಕ್ತಗೊಳಲಿದೆ ಎಂದಿದ್ದಾರೆ.
ರಾಜ್ಯದಲ್ಲಿ ಉಂಟಾದ ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಯಾವುದೇ ಹಣಕಾಸಿನ ಕೊರತೆಯಿಲ್ಲ. ಈ ಹಿಂದೆ ನೆರೆ ಉಂಟಾದಾಗ ರೂಪಿಸಲಾದ ಸೂಕ್ತ ಪರಿಹಾರವನ್ನು ಒದಗಿಸುವಂತೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಇನ್ನೂ ಸಿದ್ದರಾಮಯ್ಯ ಸ್ವೀಕಾರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿದ್ದು, ಅದು ಅವರಿಗೆ ಯೋಗ್ಯವಲ್ಲ. ದೇಶದ ಇತಿಹಾಸದಲ್ಲಿ ಯಾರೊಬ್ಬರೂ ಸ್ವೀಕಾರ ವಿರುದ್ದ ಏಕವಚನದಲ್ಲಿ ಮಾತನಾಡಿದ್ದು ಇಲ್ಲ. ಇದು ಅವರಿಗೆ ಶೋಧೆ ತರುವುದಿಲ್ಲ‌. ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು. ಅಲ್ಲದೇ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇವೆ. ಇನ್ನೂ ಮುಂದಾದರು ಸಿದ್ದರಾಮಯ್ಯ ನಾಲಿಗೆ ಬೀಗಿ ಹಿಡಿದು ಮಾತನಾಡಲಿ ಎಂದರು.
ಇನ್ನೂ ವೀರ ಸಾವರಕರ್ ಬಗ್ಗೆ ಎಬಿಸಿಡಿ ಗೊತ್ತಿಲ್ಲದ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಾರೆ. ಅವರು ಅಂಡಮಾನ್ ಗೆ ಹೋಗಿ ಸಾವರ್ಕರ್ ಅನುಭವಿಸಿದ ಶಿಕ್ಷೆ ಏನೂ ಎಂಬುದನ್ನು ತಿಳಿದುಬರಲಿ. ಆಗ ಅವರ ತ್ಯಾಗ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

Share

About Vijayalakshmi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!