Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಡಿ. 1 ಕ್ಕೆ ಯುಗಳ ಗೀತೆ ಕಾರ್ಯಕ್ರಮಕ್ಕೆ ಧ್ವನಿ‌ ಪರೀಕ್ಷೆ.

ಡಿ. 1 ಕ್ಕೆ ಯುಗಳ ಗೀತೆ ಕಾರ್ಯಕ್ರಮಕ್ಕೆ ಧ್ವನಿ‌ ಪರೀಕ್ಷೆ.

 

ಹುಬ್ಬಳ್ಳಿ: ಕನ್ನಡ ರಾಜ್ಯೋತ್ಸವವನ್ನು ವಿನೂತನ ಶೈಲಿಯಲ್ಲಿ ಆಚರಿಸುವ ಹಿನ್ನಲೆಯಲ್ಲಿ ಡಾ.ರಾಜ್ ಕುಮಾರ ಅವರು ನಟಿಸಿ, ಹಾಡಿರುವ ಚಲನಚಿತ್ರಗಳ ಯುಗಳಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಭಾಗವಹಿಸಲಿಚ್ಛಿಸುವ ಗಾಯಕ – ಗಾಯಕಿಯರ ಧ್ವನಿ ಪರೀಕ್ಷೆಯನ್ನು ಡಿ. 1 ರಂದು ಬೆಳಿಗ್ಗೆ 10 ರಿಂದ ಸ್ಟೇಶನ್ ರೋಡ್ ನ ಲ್ಯಾಮಿಂಗ್ಟನ್ ಶಾಲೆಯಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕ ಸುನೀಲ ಪತ್ರಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಧುರ ಎಂಟರ್ ಟೇನರ್ಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ ಅವರು ಹಾಡಿರುವ ಯುಗಳ ಗೀತೆಗಳನ್ನು ಇಂದಿನ‌ ಪೀಳಿಗೆಗೆ ಪರಿಚಯಿಸುವ ಉದ್ದೇಶ ಹೊಂದಿದ್ದು, ಆಸಕ್ತರು ಯಾವುದೇ ವಯಸ್ಸಿನ ಮಿತಿ ಇಲ್ಲದೇ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಧ್ವನಿಪರೀಕ್ಷೆಯಲ್ಲಿ ಅತ್ಯುತ್ತಮ 25 ಪ್ರತಿಭೆಗಳನ್ನು ಆಯ್ಕೆ ಮಾಡಿ ಡಿ.14 ರಂದು ಸವಾಯಿ ಗಂಧರ್ವ ಹಾಲ್ ನಲ್ಲಿ ಗಾಯನ ಕಾರ್ಯಕ್ರಮ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.9448340148, 7019885131 ಸಂಪರ್ಕಿಸಬಹುದು ಎಂದರು.
ಪ್ರೇಮಾ ಹೂಗಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!