Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಶೀಘ್ರದಲ್ಲೇ ರಾಜ್ಯ ‘ಸಚಿವ ಸಂಪುಟ’ ವಿಸ್ತರಣೆ : ಯಾರಿಗೆಲ್ಲಾ ಒಲಿಯಲಿದೆ ‘ಸಚಿವ ಸ್ಥಾನ’ ಗೊತ್ತಾ.?

ಶೀಘ್ರದಲ್ಲೇ ರಾಜ್ಯ ‘ಸಚಿವ ಸಂಪುಟ’ ವಿಸ್ತರಣೆ : ಯಾರಿಗೆಲ್ಲಾ ಒಲಿಯಲಿದೆ ‘ಸಚಿವ ಸ್ಥಾನ’ ಗೊತ್ತಾ.?

Spread the love

ಬೆಂಗಳೂರು : ಕೊರೋನಾ ಕಂಟ್ರೋಲ್ ನಡುವೆಯೂ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ತೆರೆ ಮರೆಯಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿದೆ. ನೂತನ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವವರಿಂದ ಸಚಿವ ಸ್ಥಾನದ ಒತ್ತಡ ಸಿಎಂ ಮೇಲೆ ಹೇರಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ರಾಜ್ಯದಲ್ಲಿ ಶೀಘ್ರವೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ವಿಸ್ತರಣೆಯಾದ್ರೇ.. ಯಾರಿಗೆಲ್ಲಾ ಸಚಿವ ಸ್ಥಾನ ಸಿಗಲಿದೆ ಎನ್ನುವ ಬಗ್ಗೆ ಮುಂದೆ ಓದಿ..

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣದಾದ ಕೆಲಸ ಶಾಸಕರಿಗೆ ಈಗಾಗಲೇ ಮಂತ್ರಿಗಿರಿ ನೀಡಲಾಗಿದೆ. ಇನ್ನುಳಿದಂತೆ ಕೆಲವರಿಗೆ ನೀಡುವುದು ಬಾಕಿ ಇದೆ. ಇಂತಹ ಸರ್ಕಾರದ ಬ್ಯಾಕ್ ಬೋನ್ ಗಳನ್ನು ಈಗಾಗಲೇ ವಿಧಾನಪರಿಷತ್ ಗೂ ಬಿಜೆಪಿ ಆಯ್ಕೆ ಮಾಡಿದೆ.

ಈಗ ರಾಜ್ಯ ಸರ್ಕಾರದ ಮುಂದಿರುವುದು ಸಂಪುಟ ವಿಸ್ತರಣೆಯ ಮೂಲಕ ಸಚಿವ ಸ್ಥಾನ ನೀಡುವುದಾಗಿದೆ.

ಇದಕ್ಕಾಗಿ ತೆರೆ ಮರೆಯಲ್ಲಿ ಕೆಸರತ್ತು ನಡೆಸುತ್ತಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಹೈಕಮಾಂಡ್ ಅವರಿಗೆ ಸಂಪುಟ ವಿಸ್ತರಣೆಗೆ ಅನುಮತಿ ಕೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ರೇ.. ಕೆಲ ಹಿರಿಯ ಸಚಿವರ ತಲೆ ದಂಡ ಆಗುವ ಮೂಲಕ, ಹೊಸಬರಿಗೆ ಅವಕಾಶ ಸಿಗಲಿದೆ ಎಂಬುದಾಗಿ ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

ಇನ್ನೂ ಸಂಪುಟ ವಿಸ್ತರಣೆಯ ಕಸರತ್ತು ಆರಂಭಗೊಂಡು, ವಿಸ್ತರಣೆಯ ಹಂತಕ್ಕೆ ತಲುಪಿದಾಗ ಎಂಟಿಬಿ ನಾಗರಾಜ್, ಆರ್ ಶಂಕರ್, ಅರವಿಂದ್ ಲಿಂಬಾವಳಿ, ಉಮೇಶ್ ಕತ್ತೆ ಹಾಗೂ ಹಾಲಪ್ಪ ಆಚಾರ್ ಅವರಿಗೆ ಸಚಿವ ಸ್ಥಾನ ನೀಡೋದು ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಇವರೊಂದಿಗೆ ಎ ರಾಮದಾಸ್ ಇಲ್ಲವೇ ಅಪ್ಪಚ್ಚು ರಂಜನ್ ಅವರಿಗೂ ಮಂತ್ರಿಗಿರಿ ಧಕ್ಕುವ ಚಾನ್ಸ್ ಇದೆಯಂತೆ.

ಅದೇನೇ ಆದ್ರೂ.. ರಾಜ್ಯ ಸಚಿವ ಸಂಪುಟ ವಿಸ್ತರಣೆ ಆದ್ರೇ.. ಎಂಟಿಬಿ ನಾಗರಾಜ್, ಆರ್ ಶಂಕರ್, ಅರವಿಂದ್ ಲಿಂಬಾವಳಿ, ಉಮೇಶ್ ಕತ್ತಿ, ಹಾಲಪ್ಪ ಆಚಾರ್ ಹಾಗೂ ರಾಮದಾಸ್/ಅಪ್ಪಚ್ಚು ರಂಜನ್ ಅವರು ಸಂಭಾವ್ಯ ಸಚಿವ ಸ್ಥಾನದ ಪಟ್ಟಿಯಲ್ಲಿ ಇದ್ದಾರೆ. ಇವರಿಗೆಲ್ಲಾ ಸಿಗುತ್ತಾ.? ಶೀಘ್ರದಲ್ಲಿಯೇ ಸಚಿವ ಸಂಪುಟ ವಿಸ್ತರಣೆ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Check Also

ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ

Spread the loveಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ‘ರಾಬರ್ಟ್’ ಬಿಡುಗಡೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!