Hiring Reporter’s For more Information Contact Above Number 876 225 4007 . Program producer
Home / Breaking News / ರಾಜ್ಯದ ‘ಅನ್ಲಾಕ್ 3’ ಮಾರ್ಗಸೂಚಿ :ಮೂರನೇ ಹಂತದ ಅನ್ ಲಾಕ್ ನಲ್ಲಿ ಏನಿದೆ..?ಏನಿಲ್ಲ..?

ರಾಜ್ಯದ ‘ಅನ್ಲಾಕ್ 3’ ಮಾರ್ಗಸೂಚಿ :ಮೂರನೇ ಹಂತದ ಅನ್ ಲಾಕ್ ನಲ್ಲಿ ಏನಿದೆ..?ಏನಿಲ್ಲ..?

Spread the love

ಬೆಂಗಳೂರು : ರಾಜ್ಯದಲ್ಲಿ ಆಗಸ್ಟ್​​ 1ರಿಂದ ಮೂರನೇ ಹಂತದ ಅನ್​ಲಾಕ್​ ಜಾರಿಗೆ ಬರಲಿದೆ. ಈ ವೇಳೆ ಹಿಂದಿದ್ದ ಕೆಲವು ನಿರ್ಬಂಧಗಳನ್ನು ಸಡಿಲಿಸಿದ್ದು, ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನೇ ಯಥಾವತ್ತಾಗಿ ಜಾರಿಗೊಳಿಸಿರುವ ಸರ್ಕಾರ, ರಾಜ್ಯದಲ್ಲಿ ಹೇರಿಕೆ ಮಾಡಿದ್ದ ನೈಟ್ ಕರ್ಫ್ಯೂ ಮತ್ತು ಸಂಡೇ ಕರ್ಫ್ಯೂ ರದ್ದುಗೊಳಿಸಿದೆ. ಆಗಸ್ಟ್ 1 ರಿಂದ ರಾಜ್ಯದಲ್ಲಿ ಈ ನಿಯಮ ಅನುಷ್ಠಾನಕ್ಕೆ ಬರುತ್ತೆ.

ಆಗಸ್ಟ್ 2ರಿಂದ ಭಾನುವಾರದ ಲಾಕ್‌ಡೌನ್ ರದ್ದಾಗಲಿದೆ ಎಂದು ಸಿಎಂ‌ ಕಚೇರಿ ಸ್ಪಷ್ಟಪಡಿಸಿದೆ. ಕಂಟೈನ್‌ಮೆಂಟ್ ವಲಯ ಬಿಟ್ಟು ಹೊರಗಡೆ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಜಿಮ್ ಹಾಗೂ ಯೋಗ ತರಬೇತಿ ಕೇಂದ್ರಗಳನ್ನು ಆಗಸ್ಟ್​​ 5ರಿಂದ ತೆರೆಯಬಹುದು.

ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಆಗಸ್ಟ್ 31ರವರೆಗೆ ತೆರೆಯುವಂತಿಲ್ಲ. ಅದೇ ರೀತಿ ಸಿನಿಮಾ ಮಂದಿರಗಳು, ಈಜು ಕೊಳ, ಮನರಂಜನಾ ಪಾರ್ಕ್, ಚಿತ್ರಮಂದಿರ, ಬಾರ್, ಸಭಾ ಭವನಗಳಿಗೆ ನಿರ್ಬಂಧ ಮುಂದುವರೆದಿದೆ.

ಅಂತಾರಾಷ್ಟ್ರೀಯ ವಿಮಾನ ಹಾರಾಟ, ಮೆಟ್ರೋ ರೈಲು, ಧಾರ್ಮಿಕ ಸಭೆ, ಸಾರ್ವಜನಿಕ ಸಭೆ-ಸಮಾರಂಭಕ್ಕೆ ಅವಕಾಶ ಇರುವುದಿಲ್ಲ. ಅಂತಾರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಯಾವುದೇ ವಿಶೇಷ ಅನುಮತಿ, ಪಾಸ್​ಗಳ ಅಗತ್ಯ ಇರುವುದಿಲ್ಲ. ಆದರೆ ರಾಜ್ಯಕ್ಕೆ ಬರುವ ಪ್ರಯಾಣಿಕರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯನ್ನು ಅನುಸರಿಸಬೇಕು. ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು 50 ಜನರಿಗಿದ್ದ ಅವಕಾಶದ ವಿಚಾರದಲ್ಲಿ ಯಾವುದೇ ಸಡಿಲಿಕೆ ಮಾಡಿಲ್ಲ.

Check Also

ಹವಾಮಾನ ಇಲಾಖೆಯಿಂದ ರಾಜ್ಯದ ಜನತೆಗೆ ಮಹತ್ವದ ಸೂಚನೆ

Spread the loveಬೆಂಗಳೂರು: ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆಯಾಗುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!