Breaking News
Hiring Reporter’s For more Information Contact Above Number 876 225 4007 . Program producer
Home / Breaking News / ರಾಜ್ಯದ ಮೊದಲ ಸಂಪೂರ್ಣ ಮಹಿಳಾ ಗರುಡ ತಂಡ ತರಬೇತಿ ಪ್ರಾರಂಭ

ರಾಜ್ಯದ ಮೊದಲ ಸಂಪೂರ್ಣ ಮಹಿಳಾ ಗರುಡ ತಂಡ ತರಬೇತಿ ಪ್ರಾರಂಭ

ಬೆಂಗಳೂರು: ರಾಜ್ಯದ ನಾನಾ ಹಳ್ಳಿಗಳಿಂದ ಬಂದ ಹದಿನೇಳು ಯುವತಿಯರು ದಿನಕ್ಕೆ 12 ಗಂಟೆಗಳ ಕಾಲ ಗುಂಡು ಹಾರಿಸುವ, ಸ್ಫೋಟಕಗಳನ್ನು ನಿಭಾಯಿಸುವದು, ರಾಪೆಲ್, ಹಗ್ಗದ ನಡಿಗೆ, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಅಗತ್ಯವಾದ ತರಬೇತಿ ಪಡೆಯುತ್ತಿದ್ದಾರೆ. ಅವರು ಬೇರಾರೂ ಆಗಿರದೆ ಕರ್ನಾಟಕ ಪೊಲೀಸ್ ಇಲಾಖೆಯ ಸಂಪೂರ್ಣ ಮಹಿಳಾ ಗರುಡ ಕಮಾಂಡೋಗಳ ಮೊದಲ ಬ್ಯಾಚ್ ಆಗಿದೆ. ವಿಶೇಷ ಕಾರ್ಯಾಚರಣಾ ತಂಡ ಗರುಡ, ಕರ್ನಾಟಕದ ಸ್ವ ಭಯೋತ್ಪಾದನಾ ವಿರೋಧಿ ಪಡೆ 2010 ರಲ್ಲಿ ರಚನೆಯಾಯಿತು, ಮತ್ತು ಈ ವರ್ಷ ಮೊದಲ ಬಾರಿಗೆ ಇಲಾಖೆಯು 50 ಮಹಿಳೆಯರಿಗೆ ತಂಡದ ಸೇರ್ಪಡೆಗಾಗಿ ತರಬೇತಿ ನೀಡಲಿದೆ. ಈ 17 ಮಹಿಳೆಯರಿಗಾಗಿ ಬೆಂಗಳೂರಿನ ಭಯೋತ್ಪಾದನಾ ನಿಗ್ರಹ ಕೇಂದ್ರದಲ್ಲಿ ಪೂರ್ವ ನಿರ್ದೇಶನ ತರಬೇತಿ ನೀಡಲಾಗಿತ್ತಿದೆ. ಉಪನಿರ್ದೇಶಕ ಲೆಫ್ಟಿನೆಂಟ್ ಕರ್ನಲ್ ರೋಹಿತ್ ನಾಯಕ್ ಮತ್ತು ಅವರ ತಂಡದ ಪೊಲೀಸ್ ಅಧೀಕ್ಷಕಿ ಎಂ ಎಲ್ ಮಧುರಾ ವೀಣಾ ಅವರ ನೇತೃತ್ವದಲ್ಲಿ ಈ ತರಬೇತಿ ನಡೆದಿದೆ.

Share

About Shaikh BIG TV NEWS, Hubballi

Check Also

ಹಿರಿಯ ಅಧಿಕಾರಿ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ವೈದ್ಯಕೀಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ…!

ಹುಬ್ಬಳ್ಳಿ: ವೈದ್ಯಕೀಯ ಸಿಬ್ಬಂದಿಯೊಬ್ಬರು ಡೇತ್‌ ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿಯ ಪ್ರಾಥಮಿಕ …

Leave a Reply

Your email address will not be published. Required fields are marked *

error: Content is protected !!