Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಎಚ್ ಡಿಕೆ ಇದ್ದಾಗ ಉತ್ತರ ಕರ್ನಾಟಕಕ್ಕೆ ಮಲತಾಯಿ ದೋರಣೆ: ಶ್ರೀಮಂತ ಪಾಟೀಲ ಆರೋಪ

ಎಚ್ ಡಿಕೆ ಇದ್ದಾಗ ಉತ್ತರ ಕರ್ನಾಟಕಕ್ಕೆ ಮಲತಾಯಿ ದೋರಣೆ: ಶ್ರೀಮಂತ ಪಾಟೀಲ ಆರೋಪ

ಚಿಕ್ಕೋಡಿ:- ಕಾಗವಾಡ ಮತಕ್ಷೇತ್ರದ ಬಿಜೆಪಿ ಅಬ್ಯರ್ಥಿ ಶ್ರೀಮಂತ ಪಾಟೀಲ ಇಂದು ಅಥಣಿ ತಾಲೂಕಿನ ಗುಂಡೇವಾಡಿ ,ಪಾರ್ಥನಳ್ಳಿ,ಚಮಕೇರಿ,ಬಳ್ಳಿಗೇರಿ ಮೊದಲಾದ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.

         ಈ ವೇಳೆ ಡಿಸಿಎಮ್ ಲಕ್ಷ್ಮಣ ಸವದಿ,ಕುಡಚಿ ಶಾಸಕ ಪಿ ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಶ್ರೀಮಂತ ಪಾಟೀಲ ಪರ ಮತಯಾಚಿಸಿದರು.

             ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀಮಂತ ಪಾಟೀಲ, ನನಗೆ ಬಣ್ಣದ ಮತ್ತು ಅಲಂಕಾರದ ಮಾತುಗಳು ಬರುವದಿಲ್ಲ,ನಾನು ಜನಪರ ಕೆಲಸ ಮಾಡುವ ಸಲುವಾಗಿ ಸ್ಪರ್ಧಿಸಿ ವಿಧಾನಸೌಧಕ್ಕೆ ಹೋಗಿದ್ದೆ ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸ್ಪಂದನೆ ಸಿಗದ ಕಾರಣ ಜನರಿಗೆ ಚುನಾವಣೆ ವೇಳೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದೆ ಸ್ವಾಭಿಮಾನದಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಬೇಕಾಯಿತು ಎಂದರು..

            ಇನ್ನೂ ಕಾಗವಾಡ ಮತಕ್ಷೇತ್ರದಲ್ಲಿ ಶ್ರೀಮಂತ ಪಾಟೀಲ ಪರ ಪ್ರಚಾರದ ವೇಳೆ ಮಾತನಾಡಿದ ಡಿಸಿಎಮ್ ಲಕ್ಷ್ಮಣ ಸವದಿ, ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರಿದರು, ಇದನ್ನು ನಾವು ಕುಮಾರಸ್ವಾಮಿ ಅವರನ್ನು ಕೇಳಿದ್ದೇವೆ, ನೀವು ಕರ್ನಾಟಕದ ಸಿಎಮ್ ಆಗಿದ್ದೀರೋ ಅಥವಾ ನಾಲ್ಕು ಜಿಲ್ಲೆಗಳಿಗೆ ಮಾತ್ರ ಸಿ ಎಮ್ ಆಗಿದ್ದೀರೊ ಎಂದು ಪ್ರಶ್ನಿಸುವ ಸ್ಥಿತಿ ನಿರ್ಮಾಣವಾಗಿತ್ತು,ಈ ಭಾಗದ ಏತನೀರಾವರಿ ಕಾರ್ಯರೂಪಕ್ಕೆ ಬರುತ್ತಿಲ್ಲ ಅನ್ನುವ ಕಾರಣಕ್ಕಾಗಿ ಮತ್ತು ಅಭಿವೃದ್ಧಿ ಗಾಗಿ ಶ್ರೀಮಂತ ಪಾಟೀಲ ಸೇರಿದಂತೆ ಹದಿನೇಳು ಜನ ರಾಜಿನಾಮೆ ನೀಡಿ ಬಿಜೆಪಿ ಪಕ್ಷ ಸೇರಿದರು ಎನ್ನುವ ಮೂಲಕ ಟಾಂಗ್ ಎಚ್ ಡಿ ಕೆಗೆ ಟಾಂಗ್ ನೀಡಿದರು.

 

Share

About Shaikh BIG TV NEWS, Hubballi

Check Also

Featured Video Play Icon

ಮಕ್ಕಳ ಶಿಕ್ಷಣಕ್ಕೆ ಕೊಳ್ಳಿ ಇಟ್ಟ ಸೊಸೈಟಿ?? | Children crying to protect their school | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!