Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಕುಮಾರಸ್ವಾಮಿ‌ ಅಧಿಕಾರಾವಧಿಯಲ್ಲಿ ಯಶಸ್ವಿಯಾದ ಸಾಲಮನ್ನಾ ಯೋಜನೆ.

ಕುಮಾರಸ್ವಾಮಿ‌ ಅಧಿಕಾರಾವಧಿಯಲ್ಲಿ ಯಶಸ್ವಿಯಾದ ಸಾಲಮನ್ನಾ ಯೋಜನೆ.

ಮಂಡ್ಯ : ಕುಮಾರಸ್ವಾಮಿ ಅವರು 14 ತಿಂಗಳ ಅಧಿಕಾರದಲ್ಲೇ ಕೊಟ್ಟ ಮಾತನ್ನು ಉಳಿಸಿಕೊಂಡು ಸಾಲ ಮನ್ನಾ ಯೋಜನೆ ಸಂಪೂರ್ಣ ಯಶಸ್ವಿಯಾಗಿದೆ ಎಂದು
ಮಂಡ್ಯ ಜಿಲ್ಲಾ ಜೆ ಡಿ ಎಸ್ ಪಕ್ಷದ ಅದ್ಯಕ್ಷರಾದ ಡಿ ರಮೇಶ್ ತಿಳಿಸಿದರು.
ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮದಲ್ಲಿ ಆಯೋಜಿಸಲಾದ ಹೋಬಳಿ ಮಟ್ಟದ ಸಾಲಮುಕ್ತ ರೈತನತ್ತ ಕುಮಾರಣ್ಣ ಚಿತ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಮಾರಣ್ಣನ ಸಾಲಮನ್ನಾದಿಂದ ರೈತರಿಗೆ ಅನುಕೂಲವಾಗಿದ್ದು, ಮುಂದೆ ಬರುವ ಉಪಚುನಾವಣೆಯಲ್ಲಿ ಜೆ ಡಿ ಎಸ್ ಅಭ್ಯರ್ಥಿಗಳನ್ನೇ ಗೆಲ್ಲಿಸುವ ಮೂಲಕ ಕುಮಾರಣ್ಣನಿಗೆ ಶಕ್ತಿ ತುಂಬುಕ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ ಎಲ್ ದೇವರಾಜು ಮಾತಡಾಡಿ ಕಾಂಗ್ರೇಸ್ ಪಕ್ಷದ ಮಾಜಿ ಶಾಸಕರಾದ ಕೆ.ಬಿ ಚಂದ್ರಶೇಖರ್, ರೈತರ ಸಾಲ ಮನ್ನಾ ಆಗಿಲ್ಲಾ ಎಂದು ಹೇಳುತ್ತಿದ್ದಾರೆ ನಮ್ಮಲ್ಲಿ ತಾಲೂಕಿನ ಎಷ್ಟು ರೈತ ಕುಟುಂಬಗಳಿಗೆ ಸಾಲ ಮನ್ನಾ ಹಾಗಿದೆ ಎಂದು ಪಟ್ಟಿ ಕೊಡುತ್ತೇವೆ ಅದರಲ್ಲಿ ಫಲಾನುಭಾವಿ ಹೆಸರು ವಿಳಾಸ, ದೂರಾವಣಿ ಸಂಖ್ಯೆ ಇದೆ ಯಾರಿಗಾದ್ರು ಪೋನ್ ಮೂಲಕ ವಿಚಾರಿಸಿ ತಿಳಿಯಲಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪುಟ್ಡಸ್ವಾಮಿಗೌಡ್ರು, ಹೆಚ್ ಟಿ ಮಂಜು, ರಾಮದಾಸ್, ಮುಖಂಡರಾದ ಅಕ್ಕಿಹೆಬ್ಬಾಳು ರಘು, ತಾಲ್ಲೂಕು ಜೆ ಡಿ ಎಸ್ ಅದ್ಯಕ್ಷರಾದ ಜಾನಕಿರಾಮು, ಹೋಬಳಿ ಅದ್ಯಕ್ಷರಾದ ಕಾಯಿ ಮಂಜೇಗೌಡ, ಎ ಪಿ ಎಂ ಸಿ ಅದ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್, ನಿರ್ದೇಶಕರಾದ ಲೋಕೇಶ್, ನರಸೇಗೌಡ, ಮಖಂಡರಾದ ಬಸ್ ಕೃಷ್ಣೇಗೌಡ, ಅಕ್ಕಿಹೆಬ್ಬಾಳು ರಘು, ಐಕನಹಳ್ಳಿ ಕೃಷ್ಣೇಗೌಡ್ರು, ಕೋಟಹಳ್ಳಿ ಶ್ರೀನಿವಾಸ್, ಕಡಹೆಮ್ಮಿಗೆ ಧನಂಜಯ, ಶ್ರೀನಿವಾಸ್, ಸೇರಿಂದತೆ ನೂರಾರು ಕಾರ್ಯಕರ್ತರು ಇದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!