Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಟಿ- 20 ಸರಣಿ: ಆಸ್ಟ್ರೇಲಿಯಾಗೆ ಜಯ ತಂದ ಸ್ಟೀವ್ ಸ್ಮಿತ್.

ಟಿ- 20 ಸರಣಿ: ಆಸ್ಟ್ರೇಲಿಯಾಗೆ ಜಯ ತಂದ ಸ್ಟೀವ್ ಸ್ಮಿತ್.

ಕೆನ್‌ಬೆರಾ: ಸ್ಥಿರ ಪ್ರದರ್ಶನ ನೀಡುತ್ತಿರುವ ಸ್ಟೀವ್‌ ಸ್ಮಿತ್ ಅವರ ಕಳಂಕರಹಿತ ಅಜೇಯ 80 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ಟ್ವೆಂಟಿ-20 ಸರಣಿಯ ಎರಡನೇ ಪಂದ್ಯದಲ್ಲಿ ಮಂಗಳವಾರ ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತು.
ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಪಡೆದರು. ಮೊದಲ ಪಂದ್ಯ ಮಳೆಯಿಂದ ಸ್ಥಗಿತಗೊಂಡಿತ್ತು. ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯ ಪರ್ತ್‌ನಲ್ಲಿ ಶುಕ್ರವಾರ (ನ. 8) ನಡೆಯಲಿದೆ.
ಆಸ್ಟ್ರೇಲಿಯಾ ಟ್ವೆಂಟಿ-20 ಸರಣಿಯಲ್ಲಿ ಸತತ ಏಳು ಪಂದ್ಯಗಳಲ್ಲಿ ಸೋಲರಿಯದ ಸಾಧನೆಗೆ ಪಾತ್ರವಾಗಿದೆ.
ಪಾಕಿಸ್ತಾನ 20 ಓವರುಗಳಲ್ಲಿ 6 ವಿಕೆಟ್‌ಗೆ 150 ರನ್‌ ಗಳಿಸಿತು. ಟಿ-20 ಬ್ಯಾಟಿಂಗ್‌ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ನಾಯಕ ಬಾಬರ್‌ ಆಜಂ ರನೌಟ್ ಆಗುವ ಮೊದಲು 38 ಎಸೆತಗಳಲ್ಲಿ 50 ರನ್‌ ಹೊಡೆದರು.

Share

About ramu BIG TV NEWS, Kolar

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!