Breaking News
Hiring Reporter’s For more Information Contact Above Number 876 225 4007 . Program producer
Home / Tag Archives: ಹುಬ್ಬಳ್ಳಿ ಸುದ್ದಿ

Tag Archives: ಹುಬ್ಬಳ್ಳಿ ಸುದ್ದಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ತನ್ನ ನಿಗಮವನ್ನು ವಿಲಿನಗೊಳಿಸಿ ಸರ್ಕಾರಿ ನೌಕಕರನ್ನು ಘೋಷಿಸಲಿ: ರಾಜಯೋಗಿಂದ್ರ ಸ್ವಾಮಿ

ಹುಬ್ಬಳ್ಳಿ,ನ.28- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳನ್ನು ಸರ್ಕಾರದಲ್ಲಿ ವಿಲಿನಗೊಳಿಸಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವ ಬಗ್ಗೆ ಮೂರುಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ರಾಜ್ಯ ಸರಕಾರದ ಗಮನಕ್ಕೆ ತರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಸುಮಾರು ವರ್ಷಗಳಿಂದ ಕರ್ನಾಟಕ ರಾಜ್ಯ ‌ರಸ್ತೆ ಸಾರಿಗೆ ಸಂಸ್ಥೆಯೂ ಸಾರ್ವಜನಿಕ ಸೇವೆಗಾಗಿ ಖಾಕಿ ಸಮವಸ್ತ್ರ ಧರಿಸುವ ಮೂಲಕ ಕಂಕಣಬದ್ದರಾಗಿದ್ದು, ಈಗಾಗಲೇ …

Read More »

ನಕಲಿ ವೈದ್ಯರ ಹಾವಳಿ : ಅಧಿಕಾರಿಗಳಿಂದ ದಾಳಿ

ಹುಬ್ಬಳ್ಳಿ,ನ.27- ಧಾರವಾಡ ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ನಕಲಿ ವೈದ್ಯರಿಗೆ ಬಿಸಿ ಮುಟ್ಟಿಸುವ ಹಿನ್ನೆಲೆಯಲ್ಲಿ ನಕಲಿ ವೈದ್ಯಾಧಿಕಾರಿಗಳ ಕ್ಲಿನಿಕ್ ಗಳಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕುಂದಗೋಳ ತಾಲೂಕಿನಲ್ಲಿ ನಕಲಿ ವೈದ್ಯರ ಕ್ಲಿನಿಕ್ ನೇಲೆ ದಾಳಿ ನಡೆಸಿದರು. ಕುಂದಗೋಳ ತಾಲೂಕಿನಾದ್ಯಂತ ನಕಲಿ ವೈದ್ಯರ ಕ್ಲಿನಿಕ್ ಮೇಲೆ ತಹಶೀಲ್ದಾರ ಹಾಗೂ ಇನ್ಸ್ ಪೆಕ್ಟರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಇನ್ನೂ ತಹಶೀಲ್ದಾರ ಬಸವರಾಜ ಮೆಳವಂಕಿ ಹಾಗೂ ಕುಂದಗೋಳ ಇನ್ಸ್ …

Read More »

ಪುರುಷರ ಬ್ಯೂಟಿ ಪ್ಯಾಸೆಂಟ್ ನಲ್ಲಿ ದ್ವೀತಿಯ ಸ್ಥಾನ : ಪ್ರಮಥ್ ಭಟ್

  ಹುಬ್ಬಳ್ಳಿ:- ಅಂತರಾಷ್ಟ್ರೀಯ ಮಟ್ಟದಲ್ಲಿ ನ.22, 23 ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪುರುಷರ ಬ್ಯೂಟಿ ಪ್ಯಾಸೆಂಟ್ ನಲ್ಲಿ ಪ್ರಥಮ ಸ್ಟಾರ್ ಕಂಪನಿಯ ರಾಜೀವ್ ಪವಾರ ದ್ವೀತಿಯ ಸ್ಥಾನವನ್ನು ಹಾಗೂ ನರಸಿಂಹ ಮೂರ್ತಿ ಏಳನೇ ಸ್ಥಾನ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರ, ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಮಥ್ ಭಟ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲೂಮ್ ಫೇರ್ ಪ್ರೋಡಕ್ಷನ್ ಪ್ರಸ್ತುತ ಪಡಿಸಿರುವ ಮ್ಯಾನ್ ಹಂಟ್ ಇಂಡಿಯಾ …

Read More »

ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿ : ರಂಗರಡ್ಡಿ

ಹುಬ್ಬಳ್ಳಿ,ನ. 27- ಕರ್ನಾಟಕ ರಾಜ್ಯ ಪದವೀಧರರ ಹಿತರಕ್ಷಣಾ ಸಮಿತಿಯಿಂದ ಪದವೀಧರ ವಿವಿಧ ಕುಂದು ಕೊರತೆಗಳನ್ನು ನಿವಾರಿಸುವ ಕೆಲಸ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿ ಆಗಿದ್ದೇನೆಂದು ಸಮಿತಿಯ ಅಧ್ಯಕ್ಷ ಡಿ.ಸಿ.ರಂಗರಡ್ಡಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರ ಹಿತ ರಕ್ಷಣಾ ಸಮಿತಿ ಪದವೀಧರರ ಹಿತದೃಷ್ಟಿಯಿಂದ 2013 ರಲ್ಲಿ ಸ್ಥಾಪಿಸಿ, ಕುಂದು – ಕೊರತೆಗಳನ್ನು ಈಡೇರಿಸಲು ಹೋರಾಟ ಮಾಡುತ್ತಾ …

Read More »

ಬೆಟ್ಟಿಂಗ್ ದಂಧೆ : ನಾಲ್ವರ ಬಂಧನ

ಹುಬ್ಬಳ್ಳಿ, ನ.27- ಮಂಟೂರ ರಸ್ತೆ ಮೌಲಾಲಿ ಜೋಪಡಿ ಬಳಿ ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ನಾಲ್ವರನ್ನು ಶಹರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿ, ಅವರಿಂದ 22.665 ರೂ ವಶಪಡಿಸಿಕೊಂಡಿದ್ದಾರೆ. ರಾಕೇಶ್ ಸಿಂಗ್ರಿ, ಕೃಷ್ಣ ರುದ್ರಪಾದ, ದಾವಲಸಾಬ ಕಟ್ನಳ್ಳಿ ಹಾಗೂ ಸರ್ಫರಾಜ ಅಣ್ಣಿಗೇರಿ ಬಂಧಿತರಾಗಿದ್ದು, ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share

Read More »

ಅವ್ಯವಹಾರ : ತನಿಖೆಗೆ ಗ್ರಾಮಸ್ಥರಿಂದ ಆಗ್ರಹ

ಹುಬ್ಬಳ್ಳಿ, ನ.27- ತಾಲೂಕಿನ ದಾಸ್ತಿಕೊಪ್ಪ ಗ್ರಾ.ಪಂ ನಲ್ಲಿ ಸಾರ್ವಜನಿಕರು ನೀಡಿದ ಲಕ್ಷಾಂತರ ರೂ ತೆರಿಗೆ ಹಣ ದುರ್ಬಳಕೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಕುರಿತು ತನಿಖೆ ಮಾಡಬೇಕೆಂದು ಜಿ.ಪಂ.ಅಧಿಕಾರಿಗಳಿಗೆ ದೂರು ನೀಡಿ ಆಗ್ರಹಿಸಿದ್ದಾರೆ. ದುರ್ಬಳಕೆ ಮಾಡಿಕೊಂಡವರ ವಿರುದ್ದ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. Share

Read More »

ವಿದ್ಯುತ್ ವ್ಯತ್ಯಯ

ಹುಬ್ಬಳ್ಳಿ, ನ.27- ತಾಲೂಕಿನ ಸುಳ್ಳ ಗ್ರಾಮದಲ್ಲಿ ಮಾದರಿ ಗ್ರಾಮ‌ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ನ.28 ರಿಂದ 30 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಸುಳ್ಳ, ಬ್ಯಾಹಟ್ಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. Share

Read More »

ಶಿಕ್ಷಣ ಇಲಾಖೆಯ ನಿರ್ದೇಶಕರು, ಆಯುಕ್ತರ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ,ನ.16-ಕರ್ನಾಟಕ ಶಿಕ್ಷಣ ಇಲಾಖೆಯು ಹೊರಡಿಸಿರುವ ಸುತ್ತೋಲೆ ಕೈಪಿಡಿಯಲ್ಲಿ ಡಾ.ಅಂಬೇಡ್ಕರ್ ಅವರು ಸಂವಿಧಾನ ರಚಿಸಿಲ್ಲ ಎಂಬ ವಿವಾದವನ್ನು ಹುಟ್ಟು ಹಾಕಿದ್ದು, ಕೂಡಲೇ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು ಮತ್ತು ಆಯುಕ್ತರನ್ನು ವಜಾಗೊಳಿಸುವಂತೆ ಆಗ್ರಹಿಸಿ ಜೈ ಭೀಮ ‌ಅಖಿಲ ಭಾರತ ದಲಿತ ಹೋರಾಟ ಸಮಿತಿಯ ಸಹಯೋಗದಲ್ಲಿಂದು ನಗರದ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿಲ್ಲ ಎಂದು ಹೇಳುವುದು ದೇಶದ ಪ್ರಜಾಪ್ರಭುತ್ವಕ್ಕೆ ಹಾಗೂ ದೇಶದ ಪವಿತ್ರ ಸಂವಿಧಾನಕ್ಕೆ …

Read More »

ಐಆರ್ ಡಿಎಐ 2019 ರ ಕರಡನ್ನು ಮರುಪರಿಶೀಲನೆ ಮಾಡಲಿ : ಹೆಗಡೆ

ಹುಬ್ಬಳ್ಳಿ,ನ.16-ಕೇಂದ್ರ ಸರ್ಕಾರದ ಅಂಗಸಂಸ್ಥೆ ಯಾದ ಐಆರ್ ಡಿಎಐ ವಿಮಾ ಕಂಪನಿಗಳನ್ನು ನಿಯಂತ್ರಣ ಮಾಡುತ್ತಿದ್ದು, ಇದೀಗ 2019 ರ ಕರಡನ್ನು ಸಿದ್ದಪಡಿಸಿದ್ದು, ಈ ಕರಡಿನಿಂದ ಸ್ವತಂತ್ರ ಸರ್ವೇಯರ್ ಅನ್ಯಾಯವಾಗುತ್ತಿದ್ದು, ಅಲ್ಲದೇ ಬಹುಪಾಲು ಜನರು ಕೆಲಸ ಕಳೆದುಕೊಳ್ಳುವ ಭಿತ್ತಿಯಲ್ಲಿದ್ದಾರೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಶುರೆನ್ಸ್ ಸರ್ವೇಯರ್ಸ್ ಆ್ಯಂಡ್ ಲಾಸ್ ಅಸೇಸ್ಸೋರ್ಸ್ ನ ಎಮ್‌ ನಾರಾಯಣ ಹೆಗಡೆ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೊಸ ಕರಡು ನಿಯಮ ಜಾರಿಯಾದರೆ ಖಾಸಗಿ …

Read More »

ಶಿಕ್ಷಕರಿಗೆ ಎರಡು ತಿಂಗಳಿಂದ ವೇತನವಿಲ್ಲ

ಹುಬ್ಬಳ್ಳಿ,ನ.16-ಧಾರವಾಡ ತಾಲೂಕಿನ ಗ್ರಾಮೀಣ ಮತ್ತು ಶಹರದ ಶಿಕ್ಷಕರಿಗೆ ಎರಡು ತಿಂಗಳಿಂದ ವೇತನ ಪಾವತಿ ಆಗಿಲ್ಲ. ಕೂಡಲೇ ಈ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಶುಕ್ರವಾರ ಜಿಪಂ ಸಿಇಒ ಡಾ.ಬಿ.ಸಿ. ಸತೀಶ ಅವರಿಗೆ ಮನವಿ ಸಲ್ಲಿಸಲಾಯಿತು. ವೇತನ ಸಿಗದೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಶಿಕ್ಷಕರು ಮಾನಸಿಕವಾಗಿ ಶಾಲಾ ಕೆಲಸದಲ್ಲಿ ತೊಡಗಿಕೊಳ್ಳಲು ತೊದರೆಯಾಗುತ್ತಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಕೇಳಿದರೆ ಸ್ಪಷ್ಟ ಭರವಸೆ ಸಿಗುತ್ತಿಲ್ಲಎಂದು ಬೇಸರ …

Read More »

ಕೀರ್ತನೆಗಳು ಮನೆ-ಮನಗಳಿಗೆ ತಲುಪುವ ಕಾರ್ಯವಾಗಲಿ: ಕಡಿವಾಲ

ಹುಬ್ಬಳ್ಳಿ:-ಕನಕದಾಸರ ಕೀರ್ತನೆ ಕವಿತೆಗಳನ್ನು ನಾವು ಮನೆ-ಮನಗಳಿಗೆ ತಲುಪಿಸುವ ಕಾರ್ಯ ಮಾಡಿದಲ್ಲಿ ಕನಕದಾಸರಂತಹ ಮಹಾನ್ ವ್ಯಕ್ತಿಗಳ ದಾಸಶ್ರೇಷ್ಟತೆ ಎಲ್ಲರಿಗೂ ಅರ್ಥವಾಗುತ್ತದೆ ಎಂದು ಕನಕದಾಸ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ಹೇಳಿದರು. ನಗರದ ಕನಕದಾಸ ಶಿಕ್ಷಣ ಸಮಿತಿಯ ವತಿಯಿಂದ ಬಿ.ಇಡಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಮಾನವ ಕನಕದಾಸರ 532ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿ, ಶಸ್ತ್ರ-ಶಾಸ್ತ್ರ ವಿದ್ಯೆಯಲ್ಲಿ ಪಾಂಡಿತ್ಯ ಹೊಂದಿ ಕರ್ನಾಟಕದ ದಾಸ ಸಾಹಿತ್ಯದಲ್ಲಿ ಅಜರಾಮರವಾಗಿ ಉಳಿದವರು ಕನಕದಾಸರು ಎಂದು ತಿಳಿಸಿದರು. ನಮ್ಮಲ್ಲಿ …

Read More »

ಪತ್ರಿಕೋದ್ಯಮದ ಉತ್ಸಾಹ ಪತ್ರಕರ್ತರಲ್ಲಿ ಪ್ರತಿದಿನವೂ ಚಿಗುರೊಡೆಯಬೇಕು: ಬಿ.ವಿ.ಮಲ್ಲಿಕಾರ್ಜುನ

ಹುಬ್ಬಳ್ಳಿ,ನ.15- ಪತ್ರಿಕೋದ್ಯಮದ ಉತ್ಸಾಹ ಪತ್ರಕರ್ತರಲ್ಲಿ ದಿನದಿಂದ ದಿನಕ್ಕೆ ವೃದ್ಧಿಸಬೇಕು. ಪತ್ರಕರ್ತರ ಕಾರ್ಯ ಸಮಾಜಿಕ ಕಳಕಳಿಯನ್ನು ಒಳಗೊಂಡಿರಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಐ ಎಫ್ ಡಬ್ಲೂ ಜೆ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನ ತಿಳಿಸಿದರು. ಇಲ್ಲಿನ ಪತ್ರಿಕಾ ಭವನದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮದ ಸೌಭಾಗ್ಯಯನ್ನು ಅನುಭವಿಸಿದಾಗ ಮಾತ್ರ ಪತ್ರಿಕೋದ್ಯಮದ ಜೀವನ ಸಾರ್ಥಕತೆ ಪಡೆಯಲು ಸಾಧ್ಯ. ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಮುದ್ರಣ …

Read More »

ನ. 17 ಕ್ಕೆ ಲಿಟಲ್ ಚಾಂಪ್ಸ್ ಬ್ಯೂಟಿ ಪೇಜೆಂಟ್ – 2019

ಹುಬ್ಬಳ್ಳಿ, ನ.15- ನಗರದ ದಿ ಫ್ಯಾಷನ್ ಜಂಕ್ಷನ್ , ರಿಲಯನ್ಸ್ ಜೆವೆಲ್ಸ್ ಸಹಯೋಗದಲ್ಲಿ ನ.17 ರಂದು ಲಿಟಲ್ ಚಾಂಪ್ಸ್ ಬ್ಯೂಟಿ ಪೇಜೆಂಟ್ -2019 ನ್ನು ಗೋಕುಲ ರಸ್ತೆಯಲ್ಲಿರುವ ಅರ್ಬನ್ ಓಯಾಸಿಸ್ ಮಾಲ್ ನಲ್ಲಿನ ರಿಲಯನ್ಸ್ ಜೆವೆಲ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸುನೀಲ ರಾಠೋಡ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಆಡಿಷನ್ ನಡೆಯಲಿದ್ದು, 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು …

Read More »

ವಿಧಾನಸಭಾ ಉಪಚುನಾವಣೆಯಲ್ಲಿ ರೈತ ಸಂಘ ಸ್ಪರ್ದಿಸುತ್ತೆ:ಕರಿಗಾರ

ಹುಬ್ಬಳ್ಳಿ,ನ. 15-ರಾಜ್ಯದಲ್ಲಿ ಮುಂದಿನ ತಿಂಗಳು ನಡೆಯಲಿರುವ ಉಪಚುನಾವಣೆಗೆ ಉತ್ತರ ಕರ್ನಾಟಕ ರೈತ ಸಂಘದಿಂದ ಕನಿಷ್ಠ 7 ವಿಧಾನಸಭೆ ಮತಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕ ರೈತ ಸಂಘದಿಂದ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಲಾಗುವುದು ಎಂದು ರಾಜ್ಯ ಅಧ್ಯಕ್ಷ ಬಸವರಾಜ ಕರಿಗಾರ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುವಂತಾಗಿದೆ. ಅಲ್ಲದೇ ಈ ಭಾಗದ ಶಾಸಕರು, ಸಚಿವರು, ಕೇಂದ್ರ …

Read More »

ಶಿಕ್ಷಣ ಇಲಾಖೆಗೆಯಿಂದ ಅಂಬೇಡ್ಕರ್ ಅವರಿಗೆ ಅಪಮಾನ: ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹ

ಹುಬ್ಬಳ್ಳಿ, ನ.15- ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಇಲಾಖೆಯ ವೆಬ್ ಸೈಟ್ ಮೂಲಕ ರಾಜ್ಯದ ಎಲ್ಲ ಶಾಲೆಗಳಲ್ಲಿ ನ.26 ರಂದು ಸಂವಿಧಾನ ದಿನ ಆಚರಿಸಲು ಹೊರಡಿಸಿದ ಸುತ್ತೋಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದು, ಈ ರೀತಿ ಅವಹೇಳನ ಮಾಡಿದ ದುಷ್ಟರ ವಿರುದ್ದ ದೇಶದ್ರೋಹ, ಕೋಮು ಸೌಹಾರ್ಧತೆಗೆ ದಕ್ಕೆ ತಂದ ಪ್ರಕರಣ ದಾಖಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಬೇಕೆಂದು ವಿವಿಧ ದಲಿತ ಸಂಘ – ಸಂಸ್ಥೆಗಳ ಮಹಾಮಂಡಳದ …

Read More »
error: Content is protected !!