Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಚಾಮರಾಜನಗರ / ಕರ್ನಾಟಕ ಪಬ್ಲಿಕ್ ಶಾಲೆಗೆ ತಹಶೀಲ್ದಾರ ನಂಜುಂಡಯ್ಯ ಭೇಟಿ.‌

ಕರ್ನಾಟಕ ಪಬ್ಲಿಕ್ ಶಾಲೆಗೆ ತಹಶೀಲ್ದಾರ ನಂಜುಂಡಯ್ಯ ಭೇಟಿ.‌

ಗುಂಡ್ಲುಪೇಟೆ: ತಾಲೂಕಿನ ಹಂಗಳ ಗ್ರಾಮದ ಕರ್ನಾಟಕ ಪಭ್ಲಿಕ್ ಶಾಲೆಗೆ ತಹಸೀಲ್ದಾರ್ ನಂಜುಂಡಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು..ಬಿಸಿಯೂಟ ,ಧಾನ್ಯ ಸಂಗ್ರಹ ಕೊಠಡಿ, ಮಕ್ಕಳ ಹಾಜರಾತಿಯನ್ನು ಪರಿಶೀಲಿಸಿದರು, ನಂತರ ಮಾತನಾಡಿ ಪ್ರತಿದಿನವೂ ತಪ್ಪದೆ ಶಾಲೆಗೆ ಬರುವ ಮೂಲಕ ಉತ್ತಮ ಶಿಕ್ಷಣ ಪಡೆಯುವಂತೆ ಸಲಹೆ ನೀಡಿದರು, ಮಕ್ಕಳ ಭವಿಷ್ಯ ಶಿಕ್ಷಕರ ಮೇಲಿದ್ದು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡುವಂತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದರು..

ಈ ಶಾಲೆಯು ಫಲಿತಾಂಶ ಗಳಿಕೆಯಲ್ಲಿ ಉತ್ತುಂಗದಲ್ಲಿದ್ದು ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿರುವುದು ತಾಲೂಕಿಗೆ ಹಾಗೂ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ..

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಬಲ್ಲ ಮತ್ತು ಅವುಗಳಿಗಿಂತ ಭಿನ್ನವಾಗಿವಾರುವ ಈ ಶಾಲೆಯು ಸರ್ಕಾರಿ ಶಾಲೆ ಎಂದರೆ ಅಸಡ್ಯೇ ತೋರುವ ಪೋಷಕರಿಗೆ ಅರಿವಿನ ಪಾಠವನ್ನು ಕಲಿಸಿದಂತಾಗಿದೆ ಎಂದು ಶಾಲೆಯನ್ನು ಕುರಿತು ಶ್ಲಾಘನೆ ವ್ಯಕ್ತಪಡಿಸಿದರು…

ಹಂದಿಗಳ ಸಾಕಣೆ ಸ್ಥಳದ ಸ್ಥಳಾಂತರಕ್ಕೆ ಮನವಿ: ಶಾಲೆಯ ಹಿಂಬದಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕೆಲವರು ಹಂದಿಗಳನ್ನು ಸಾಕಿ ಪೋಷಣೆ ಮಾಡುತ್ತಿದ್ದು ಶಾಲಾ ಕಾಂಪೌಂಡ್ ಸೇರಿಕೊಂಡಂತೆ ಹಂದಿಗಳ ಕೊಟ್ಟಿಗೆ ಇರುವುದರಿಂದ ಕೆಟ್ಟ ವಾಸನೆ ಬರುತ್ತಿದ್ದು ಮಕ್ಕಳಿಗೆ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ, ಇದರ ಜೊತೆಗೆ ಬಿಸಿಯೂಟ ತಯಾರಿಸಲು ತುಂಬಾ ತೊಂದರೆ ಉಂಟಾಗುತ್ತಿದೆ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಈ ಹಂದಿ ಕೊಟ್ಟಿಗೆಗಳನ್ನು ಬೇರೆಡೆಗೆ ತೆರವುಗೊಳಿಸಿಕೊಡಬೇಕೆಂದುಶಿಕ್ಷಕರು ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು , ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಅವರು ಗ್ರಾಮದ ಪಿಡಿಒ ಅವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು..ಈ ಸಂಧರ್ಭದಲ್ಲಿ ಶಿಕ್ಷಕರಾದ ಪಿ.ನಾಗೇಂದ್ರ, ಪ್ರಭಾ, ಅನಿತಾ, ಸಹಾಯಕಿ ದೇವಮ್ಮ ಇದ್ದರು..

ಶಾಲೆಯ ಕಾಂಪೌಂಡ್ ಗೆ ಹೊಂದಿಕೊಂಡಂತೆ ಹಂದಿಗಳ ಸಾಕಣೆ ನಡೆಸಲಾಗುತ್ತಿದ್ದು ಇದರಿಂದ ಶಾಲಾ ಸುತ್ತಲೂ ಕೆಟ್ಟ ವಾಸನೆ ಬರುತ್ತಿದೆ , ಇದರಿಂದ ಬಿಸಿಯೂಟ ತಯಾರಿಸಲು ತೊಂದರೆಯಾಗುತ್ತಿದೆ , ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಲಕ್ಷಣಗಳು ಕಂಡುಬರುತ್ತಿರುವುದರಿಂದ ಹಂದಿ ಸಾಕಣೆ ಸ್ಥಳದ ಸ್ಥಳಾಂತರ ಮಾಡಿದರೆ ಒಳ್ಳೆಯದು…

ಗಣೇಶ್ ..
ಎಸ್ ಡಿಎಂಸಿ ಅಧ್ಯಕ್ಷ
ಹಂಗಳ..

ವರದಿ :ಮಹದೇವಪ್ರಸಾದ್ ಯಡಹುಂಡಿ

Share

About Admin BIG TV NEWS

Check Also

ತಹಶೀಲ್ದಾರ ಮತ್ತು ಸಿಬ್ಬಂದಿ ವರ್ಗದಿಂದ ಸ್ವಚ್ಚತಾ ಕಾರ್ಯ.

ಗುಂಡ್ಲುಪೇಟೆ: ತಾಲೂಕಿನ ತಹಸೀಲ್ದಾರ್ ಕಛೇರಿಯ ಆವರಣದಲ್ಲಿ ಸ್ವಚ್ಛತೆ ಅಭಿಯಾನದಡಿ ತಹಸೀಲ್ದಾರ್ ನಂಜುಂಡಯ್ಯ ಮತ್ತು ಸಿಬ್ಬಂದಿ ವರ್ಗ ಸ್ವಯಂ ಅಂಗಳಕ್ಕಿಳಿದು ಶ್ರಮಧಾನ …

Leave a Reply

Your email address will not be published. Required fields are marked *

error: Content is protected !!