Hiring Reporter’s For more Information Contact Above Number 876 225 4007 . Program producer
Home / Breaking News / ವರ್ಷದ ಬಳಿಕ ಬಯಲಾದ ತಹಶೀಲ್ದಾರನ ‘ ಮುತ್ತಿ’ ನ ಗುಟ್ಟು.

ವರ್ಷದ ಬಳಿಕ ಬಯಲಾದ ತಹಶೀಲ್ದಾರನ ‘ ಮುತ್ತಿ’ ನ ಗುಟ್ಟು.

Spread the love

ಕೊಪ್ಪಳ : ಒಂದು ವರ್ಷದ ಹಿಂದೆ ಮಹಿಳೆಗೆ ಮುತ್ತು ಕೊಟ್ಟ ದೃಶ್ಯ ಸಿಸಿ ಕ್ಯಾಮರಾದ ವಿಡಿಯೋ ಇಷ್ಟು ದಿನ ಎಲ್ಲಿ ಇತ್ತು. ಸಾರ್ವಜನಿಕರ ಬಾಯಿಯಲ್ಲಿ ಗುಸು ಗುಸು ಮಾತು.

ಹೌದು.. ಕೊಪ್ಪಳ ಜಿಲ್ಲೆ ಕುಷ್ಟಗಿ ತಹಶೀಲ್ದಾರಾಗಿ ಒಂದು ವರ್ಷದ ಹಿಂದೆ ಕಾರ್ಯ ನಿರ್ವವಹಿಸಿದ ಗುರುಬಸವರಾಜ ತಮ್ಮ ಕಚೇರಿಯ ಆರ್.ಆಯ್. ಮಹಿಳಾ ಸಿಬ್ಬಂದಿಗೆ ಮುತ್ತು ಕೊಟ್ಟ ವಿಡಿಯೋ ಹೊರಬಿದ್ದಿದೆ.

ಈ ವೀಡಿಯೋ ಹೊರಬಿದ್ದ ಬೆನ್ನಲ್ಲೇ ಹಲವಾರು ಅನುಮಾನಗಳು
ಎದುರಾಗಿವೆ. ಒಂದು ವರ್ಷ ಹಿಂದಿನ ವೀಡಿಯೋ ಈಗ ಹೇಗೆ ಮುನ್ನೆಲೆಗೆ ಬಂದಿದೆ ಎಂಬುದೇ ಪ್ರಶ್ನೆಯಾಗಿದೆ.‌

ಒಂದು ವರ್ಷದಿಂದ ಈ ವೀಡಿಯೋ ಇಷ್ಟು ದಿನಗಳವರೆಗೆ ಯಾರ ಹತ್ತಿರ ಇತ್ತು ಎಲ್ಲಿ ಇತ್ತು ಇಷ್ಟು ದಿನ ಹೊರಬರಲಾರದ ವಿಡಿಯೋ ಈಗೇಕೆ ಹೊರಬಿದ್ದಿದೆ? ಇದರಲ್ಲಿ ಒಳ ಮರ್ಮ ಅಡಗಿದೆ ಎಂಬ ಅನುಮಾನವೂ ಕುಷ್ಟಗಿ ಪಟ್ಟಣ ಅಲ್ಲದೆ ಜಿಲ್ಲೆಯ ಅನೇಕ ಸಾರ್ವಜನಿಕರ ಬಾಯಲ್ಲಿ ಅನುಮಾನದ ಮಾತುಗಳು ಕೇಳಿಬರುತ್ತಿವೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದೆ.

ಈ ವಿಡಿಯೋವನ್ನು ಇಟ್ಟುಕೊಂಡು ತಹಶೀಲ್ದಾರ್ ಗುರುಬಸವರಾಜನ ಹತ್ತಿರ ಇಷ್ಟು ದಿನ ಹಣವನ್ನು ವಸೂಲಿಗೆ ಹೇಳಿದಿದ್ದರೆ ಅಥವಾ ಇಷ್ಟು ದಿನ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದೀರಾ ಎನ್ನುವ ಅನುಮಾನ ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ.

ಮುತ್ತು ಕೊಟ್ಟ ವಿಡಿಯೋದಲ್ಲಿ ೩೧-೧೧-೨೦೦೦ ೯.೫೪.೫೨ ಸೆಕೆಂಡ್ ಇದೇ ಈ ವಿಡಿಯೋ ಚಿತ್ರಣ ಅಸಲಿ ದಿನಾಂಕ ಯಾವುದು ಮತ್ತು ಯಾವಾಗಿಂದು ಎಂಬ ಪ್ರಶ್ನೆ ಕಾಡುತ್ತಿದೆ.

ಆದರೆ ಈಗಾಗಲೇ ತಹಶೀಲ್ದಾರ ಗುರುಬಸವರಾಜನ ಮೇಲೆ ಆರ್.ಐ ಕುಷ್ಟಗಿ ಪೋಲಿಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ಈ ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ಬಳಿಕವೇ ಸತ್ಯಾಸತ್ಯತೆ ತಿಳಿದು ಬರಲಿದೆ.

Check Also

ತಮಿಳು ಚಿತ್ರರಂಗದ ಖ್ಯಾತ ನಟ ಆತ್ಮಹತ್ಯೆಗೆ ಶರಣು

Spread the loveಚೆನ್ನೈ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳು ಚಿತ್ರರಂಗದ ಉದಯೋನ್ಮುಖ ನಟ ತೆನ್ನರಸು ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!