Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ದಾವಣಗೆರೆ / ರಾಜೇಶ್ ಪರ ತೇಜಸ್ವಿ ಬಿರುಸಿನ ಪ್ರಚಾರ.

ರಾಜೇಶ್ ಪರ ತೇಜಸ್ವಿ ಬಿರುಸಿನ ಪ್ರಚಾರ.

ದಾವಣಗೆರೆ: ಪತ್ರಕರ್ತ ಹಾಗೂ ಜೆಡಿಎಸ್ ಅಭ್ಯರ್ಥಿ ರಾಜೇಶ್ ಅವರು ದಾವಣಗೆರೆ ನಗರದ ಡಿಸಿಎಂ ಟೌನ್ ಶೀಪ್ ನಲ್ಲಿ ಭರ್ಜರಿ ಪ್ರಚಾರ ನಡೆಸಿದರು‌.
ರೈತಮುಖಂಡ ಹಾಗೂ ಜಿಲ್ಲಾ ಪಂಚಾಯತ ಸದಸ್ಯ ತೇಜಸ್ವಿ ಪಟೇಲ್ ರಾಜೇಶ ಪರ ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು.
ರಾಜೇಶ್ ಓರ್ವ ಸಾಮಾಜಿಕ ಕಾಳಜಿ ಇರುವ ಯುವಕ. ಮೇಲಾಗಿ ವಾರ್ಡನಲ್ಲಿ ಉತ್ಸಾಹದಲ್ಲಿ ಪ್ರಚಾರ ಮಾಡುತ್ತಿದ್ದಾನೆ. ಹಣದಿಂದಲೇ ಎಲ್ಲವೂ ಅಲ್ಲ ರಾಜೇಶ್ ಒಳ್ಳೆಯ ಯುವಕ ಎನ್ನುವ ಕಾರಣಕ್ಕೆ ನಾನು ಪ್ರಚಾರಕ್ಕೆ ಬಂದಿರುವೆ. ಅವರ ಗೆಲುವು ನಿಶ್ಚಿತ ಎಂದು ತೇಜಸ್ವಿ ಪಟೇಲ್ ಹೇಳಿದರು. ಕ
ಕೆಬಿ ಬಡಾವಣೆಯಲ್ಲಿ ರಾಜೇಶ್ ಹುಟ್ಟು ಬೆಳೆದಿದ್ದು. ಕಳೆದ ೧೪ ವರ್ಷಗಳಿಂದ ಡಿಸಿಎಂ ಟೌನ್ ಶೀಪ್ ನಲ್ಲಿ ವಾಸವಾಗಿದ್ದಾರೆ. ಹೀಗಾಗಿ ಈ ಪ್ರದೇಶದ ಪ್ರತಿಯೊಂದು ಮನೆಮನೆಗೂ ರಾಜೇಶ್ ಪರಿಚಯವಿದೆ. ಅವರು ರಾಜಕೀಯಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಮುಂದಾಗಿದ್ದಾರೆ ಅವರಿಗೆ ಒಳ್ಳೆಯದಾಗಲಿ.
ಅಭ್ಯರ್ಥಿ ರಾಜೇಶ್ ಪತ್ನಿ ನ್ಯಾಮ
ನ್ಯಾಯವಾದಿ ಲಾವಣ್ಯರಾಜೇಶ್ ಹಿರಿಯ ಜೆಡಿಎಸ್ ಮುಖಂಡ ಮಟ್ಟಿಕಲ್ಲ ಸ್ವಾಮೀ ಸೇರಿದಂತೆ ನೂರಾರು ಜನ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ರಾಜೇಶ್ ಪರ ಜಯಘೋಷ ಹಾಕಿದರು‌.
ತೆರದ ವಾಹನದಲ್ಲಿ ದಾವಣಗೆರೆ ನಗರದ ಕೆಬಿ ಬಡಾವಣೆ ಹಾಗೂ ಡಿಸಿಎಂ ಟೌನ್ ಶೀಪ್ ನಲ್ಲಿ ಜೆಡಿಎಸ್ ಅಭ್ಯರ್ಥಿ ರಾಜೇಶ್ ಬಿರುಸಿನ ಪ್ರಚಾರ ನಡೆಸಿದರು.

Share

About Vijayalakshmi

Check Also

ಬೆಂಬಲ ಬೆಲೆಯೊಂದಿಗೆ ಭತ್ತ ಖರೀದಿ ಸಿದ್ದತೆಗೆ ಡಿಸಿ ಸೂಚನೆ.

ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ನಿರ್ಧರಿಸಲಾಗಿದ್ದು, ರೈತರು ಮತ್ತು ಅಕ್ಕಿ ಗಿರಣಿಗಳ ನೋಂದಣಿ ಹಾಗೂ ಖರೀದಿ …

Leave a Reply

Your email address will not be published. Required fields are marked *

error: Content is protected !!