Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಟಿಕ್​ಟಾಕ್​ಅನ್ನು ಮೀರಿಸಿ ಮೊದಲ ಸ್ಥಾನ ಪಡೆದ ಟೆಲಿಗ್ರಾಂ

ಟಿಕ್​ಟಾಕ್​ಅನ್ನು ಮೀರಿಸಿ ಮೊದಲ ಸ್ಥಾನ ಪಡೆದ ಟೆಲಿಗ್ರಾಂ

ನವದೆಹಲಿ: ‘ವಾಟ್ಸ್​ಆಯಪ್​’ಗೆ ಪ್ರತಿಸ್ಪರ್ಧಿಯಾದ ಮೆಸೇಜಿಂಗ್ ಆಯಪ್ ‘ಟೆಲಿಗ್ರಾಂ’, ಜನವರಿ ತಿಂಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಡೌನ್ಲೋಡ್​ ಆದ ನಾನ್-ಗೇಮಿಂಗ್ ಆಯಪ್​ ಆಗಿ ಹೊರಹೊಮ್ಮಿದೆ. ಸೆನ್ಸಾರ್ ಟವರ್​ ನೀಡಿರುವ ವರದಿಯ ಪ್ರಕಾರ 2021 ರ ಜನವರಿಯಲ್ಲಿ ಟೆಲಿಗ್ರಾಂ 63 ಮಿಲಿಯನ್ ಇನ್​ಸ್ಟಾಲ್​ಗಳನ್ನು ಕಂಡಿದ್ದು, ಗೂಗಲ್ ಪ್ಲೇ ಸ್ಟೋರ್​ನಲ್ಲಿ ಈವರೆಗೆ ‘ಟಿಕ್​ಟಾಕ್’​ ಆಯಪ್​ಗಿದ್ದ ಮೊದಲ ಸ್ಥಾನವನ್ನು ತಾನು ಪಡೆದುಕೊಂಡಿದೆ.

2020ರ ಡಿಸೆಂಬರ್ ತಿಂಗಳಲ್ಲಿ 9 ನೇ ಸ್ಥಾನದಲ್ಲಿದ್ದ ಟೆಲಿಗ್ರಾಂ ಜನವರಿ ತಿಂಗಳಲ್ಲಿ ದಿಢೀರನೇ ಮೊದಲ ಸ್ಥಾನಕ್ಕೇರಿದೆ. ಮತ್ತು ಒಟ್ಟು ಡೌನ್ಲೋಡ್​ ಸಂಖ್ಯೆಯಲ್ಲಿ ಶೇ.24 ರಷ್ಟು ಭಾರತೀಯ ಬಳಕೆದಾರರದ್ದೇ ಆಗಿದೆ. ಹೀಗಾಗಿ ವಾಟ್ಸ್​ಆಯಪ್​ನ ಹೊಸ ಪ್ರೈವೆಸಿ ಪಾಲಿಸಿಯ ಹಿನ್ನೆಲೆಯಲ್ಲಿ ಭಾರತೀಯ ಬಳಕೆದಾರರು ಪರ್ಯಾಯ ಮೆಸೇಂಜಿಂಗ್ ಆಯಪ್​ಗಳಿಗಾಗಿ ಹುಡುಕಾಡಿದ್ದು, ಟೆಲಿಗ್ರಾಂನ ಈ ಸಾಧನೆಗೆ ಇಂಬು ನೀಡಿರುವುದು ಸ್ಪಷ್ಟವಾಗಿದೆ.

Share

About Admin BIG TV NEWS

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!