Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಸೇವಕನಿಗೆ ಥಳಿತ: ಗಂಭೀರ ಗಾಯ.

ಕ್ಷುಲ್ಲಕ ಕಾರಣಕ್ಕೆ ದೇವಸ್ಥಾನದ ಸೇವಕನಿಗೆ ಥಳಿತ: ಗಂಭೀರ ಗಾಯ.

 

 

ಹುಬ್ಬಳ್ಳಿ:  ದೇವಸ್ಥಾನದಲ್ಲಿ ಸೇವೆಯನ್ನು ಮಾಡಿಕೊಂಡಿದ್ದ ವ್ಯಕ್ತಿಗೆ ಕ್ಷುಲಕ ಕಾರಣಕ್ಕೆ ಹಿಗ್ಗಾ -ಮುಗ್ಗ ಥಳಿಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಇಲ್ಲಿನ ಉಣಕಲ್ ಗ್ರಾಮದ ಉಳುವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ.ಉಣಕಲ್ ಗ್ರಾಮದ ನಿವಾಸಿ ಶಿವಾನಂದ ಗಂಭ್ಯಾಪುರ ಹಲ್ಲೆ ಮಾಡಿದ ವ್ಯಕ್ತಿ ಆಗಿದ್ದು, ಸವದತ್ತಿ ಜಿಲ್ಲೆಯ ಬಸಪ್ಪ ಗುಡಿ ಹಲ್ಲೆಗೆ ಒಳಗಾದವನಾಗಿದ್ದಾನೆ. ಇತ ಕಳೆದ 9 ವರ್ಷಗಳಿಂದ ಉಣಕಲ್ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದನು. ಕಳೆದ ಕೇಲವು ದಿನಗಳ ಹಿಂದೆಯೂ ಕೂಡಾ ಎಂದಿನಂತೆ ದೇವಸ್ಥಾನದ ಕಸ ಕೂಡಿಸುತ್ತಿದ್ದಾಗ ಶಿವಾನಂದ ಮಾದವಪೂರನೊಂದಿಗೆ ಕ್ಷುಲಕ ಕಾರಣಕ್ಕೆ ಜಗಳ ಆಗಿ ಇದರಿಂದ ಕುಪಿತಗೊಂಡ ಶಿವಾನಂದ ರಾತ್ರಿ ವೇಳೆಯಲ್ಲಿ ಬಂದು ಬಸಪ್ಪನಿಗೆ ಮನಬಂದಂತೆ ಕಾಲಿನಿಂದ ಒದ್ದು ಗಾಯಗೊಳಿಸಿದ್ದಾನೆ. ಪರಿಣಾಮ ಕಿಡ್ನಿ ಹಾಗೂ ಎದೆಗೆ ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡ ಬಸಪ್ಪ ನನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾನೆ. ಇನ್ನೂ ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

*ಘಟನೆ ಹಿನ್ನೆಲೆ:-* ಬಸಪ್ಪ ಗುಡಿ ಎಂಬಾತ ಕಳೆದ 9 ವರ್ಷಗಳಿಂದ ಉಳುವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಾ ಇದ್ದು, ಎಂದಿನಂತೆ ಇತ ಕೆಲವು ದಿನಗಳ ಹಿಂದೆ ದೇವಸ್ಥಾನದ ಕಸ ಗುಡಿಸುತ್ತಿದ್ದಾಗ ಶಿವಾನಂದ ಗಂಭ್ಯಾಪುರನಿಗೆ ಸ್ವಲ್ಪ ಸರಿದು ಕೂಡು ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿ ಶಿವಾನಂದ ಕುಪಿತಗೊಂಡು ಬಸಪ್ಪನೊಂದಿಗೆ ತಂಟೆ ತೆಗೆದಿದ್ದಾನೆ.‌ ಆಗ ಸ್ಥಳದಲ್ಲೇ ಇದ್ದ ಪೂಜಾರಿಗಳು, ಭಕ್ತರು ಜಗಳ ಬಿಡಿಸಿ ಕಳಿಸಿದ್ದಾರೆ. ಆದರೆ ಶಿವಾನಂದ ಇದನ್ನು ಇಷ್ಟಕ್ಕೆ ಬಿಡದೇ ರಾತ್ರಿ ವೇಳೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಬಂದು ಬಸಪ್ಪನಿಗೆ ಹಿಗ್ಗಾ ಮುಗ್ಗ ಕಾಲಿನಿಂದ ಒದ್ದಿದ್ದಾನೆ. ಇದರಿಂದಾಗಿ ಬಸಪ್ಪನ ಎದೆ, ಕಿಡ್ನಿ ಭಾಗಕ್ಕೆ ಗಾಯಗಳಾಗಿವೆ. ನಂತರ ಮರುದಿನ ಬಸಪ್ಪನ ಸ್ಥಿತಿ ಕಂಡು ಸ್ಥಳೀಯರು ವೈದ್ಯರಿಗೆ ತೋರಿಸಿ ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇನ್ನೂ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಈ ಬಗ್ಗೆ ಈವರೆಗೆ ಆರೋಪಿಯನ್ನು ಹಿಡಿಯಲು ಹಿಂದೆಟ್ಟು ಹಾಕುತ್ತಿದ್ದು, ಕೂಡಲೇ ಆರೋಪಿಯನ್ನು ಹಿಡಿದು ಶಿಕ್ಷೆ ಕೊಡಿಸಬೇಕೆಂದು ಕುಟುಂಬಸ್ಥರ ಆಗ್ರಹಿಸಿದ್ದಾರೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!