Hiring Reporter’s For more Information Contact Above Number 876 225 4007 . Program producer
Home / Breaking News / ತೊಟ್ಟಲು ತೊಗುತ್ತಾ ಪರೀಕ್ಷೆಗೆ ಹಾಜರಾದ ತಾಯಿ

ತೊಟ್ಟಲು ತೊಗುತ್ತಾ ಪರೀಕ್ಷೆಗೆ ಹಾಜರಾದ ತಾಯಿ

Spread the love

ಧಾರವಾಡ: ಜೀವನದಲ್ಲಿ ಗುರಿ ಮುಟ್ಟುವ ಛಲ ಇದ್ದರೇ ಯಾವುದೇ ಅಡ್ಡಿ ಆತಂಕ ಬಂದರೂ ಸಹ ನಮ್ಮ ಧ್ಯೇಯವನ್ನು ತಲುಪಿದ ಬಹುದು ಎಂಬುವುದಕ್ಕೆ ಈ ಮಹಿಳೆ ಸಾಕ್ಷಿಯಾಗಿದ್ದಾರೆ. ಮದುವೆಯಾದರೆ ಸಾಕು ಜೀವನ ಅರ್ಧ ಮುಗಿದ್ದಂತೆ ಎನ್ನುವ ಯುವತಿಯರಿಗೆ ಈ ಮಹಿಳೆ ಸ್ಫೂರ್ತಿಯೇ ಸರಿ. ಅದೇನು ಅಂತೀರಾ ಈ ಸ್ಟೋರಿ ನೋಡಿ ನೀವು ಬಾವುಕರಾಗುವುದು ಗ್ಯಾರೆಂಟಿ

ಒಂದು ತಿಂಗಳಿನ ಮಗುವನ್ನು ತೊಟ್ಟಲಿನಲ್ಲಿ ತೂಗುತ್ತ, ಒಂದು ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಓದುತ್ತಿರುವ ಈ ಮಹಿಳೆಯ ಹೆಸರು ವೈಶಾಲಿ ವೆಂಕಟೇಶ ಮೊರಬದ. ಹುಬ್ಬಳ್ಳಿಯ ಗಂಗಾಧರ ನಗರದ ನಿವಾಸಿ. ಇವರು ತನ್ನ ಒಂದು ತಿಂಗಳಿನ ಹಸುಕೂಸನ್ನು ಇಟ್ಟುಕೊಂಡು ಪರೀಕ್ಷೆ ಬರೆದು ಹಲವಾರು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ವೈಶಾಲಿ ಅವರು ಧಾರವಾಡ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಂತಿಮ ವರ್ಷದ ಪರೀಕ್ಷೆ ಪ್ರಾರಂಭವಾದ ಹಿನ್ನಲೆಯಲ್ಲಿ ವಿಭಾಗಿಯ ಮುಖ್ಯಸ್ಥರ ಜೊತೆ ಮಾತನಾಡಿಕೊಂಡು ಅನುಮತಿ ಪಡೆದು ಪರೀಕ್ಷೆ ಬರೆದಿದ್ದಾರೆ.

ಪರೀಕ್ಷೆ ಬರೆದ ಮಹಿಳೆ ವೈಶಾಲಿ ಮೊರಬದ

ವೈಶಾಲಿ ಅವರ ಓದಿಗಾಗಿ ತಾವು ಹೇಗೆ ಕಷ್ಟ ಪಡುತ್ತಾರೊ ಅದೇ ರೀತಿಯಾಗಿ ಕುಟುಂಬಸ್ಥರು ಕೂಡ ಅವರಿ ಸಾಥ್ ನೀಡಿ, ಅವರ ಗುರಿ ಮುಟ್ಟಲು ದಾರಿಯಾಗಿದ್ದಾರೆ. ಅಷ್ಟೇ ಅಲ್ಲದೆ ವೈಶಾಲಿ ಅವರ ಮುಂದಿನ ಓದಿಗಾಗಿ ಎಷ್ಟೆ ಕಷ್ಟ ಬಂದರು ಕೂಡ, ಅವಳ ಜೊತೆ ಇದ್ದು, ಅವರ ಮುಂದಿನ ಗುರಿ ತಲುಪಲು ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ…

ಸಹೋದರ ನಾಗರಾಜ ಮೊರಬದ

ತಮ್ಮ ಗುರಿಯನ್ನು ತಲುಪಲು ಜೀವನದಲ್ಲಿ ಕಷ್ಟದೊಂದಿಗೆ ಒಂದು ತಿಂಗಳಿನ ಮಗುವನ್ನು ಇಟ್ಟುಕೊಂಡು ಪರೀಕ್ಷೆ ಬರೆದ ಇವರಿಗೆ ತಮ್ಮ ಮುಂದಿನ ಜೀವನದ ಗುರಿ ಆದಷ್ಟು ಬೇಗ ತಲುಪಲಿ ಎನ್ನುವುದು ನಮ್ಮೆಲ್ಲ ಆಶೆಯ.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!