Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಶಿವಸೇನೆಯ ಪತನದ ಮೊದಲ ಹಂತ ಪ್ರಾರಂಭ: ಜೋಶಿ

ಶಿವಸೇನೆಯ ಪತನದ ಮೊದಲ ಹಂತ ಪ್ರಾರಂಭ: ಜೋಶಿ

ಹುಬ್ಬಳ್ಳಿ:- ಮಹಾರಾಷ್ಟ್ರದಲ್ಲಿ ಶಿವಸೇನೆ ನಡೆ ಖಂಡನೀಯವಾಗಿದ್ದು, ಇದು ಶಿವಸೇನೆಯ ಪತನದ ಮೊದಲ ಹಂತವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಖಾರವಾಗಿ ಟೀಕೆ ಪ್ರತಿಕ್ರಿಯಿಸಿದರು.

ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯಾರು ಅತಿ ಹೆಚ್ಚು ಸ್ಥಾನ ಪಡೆಯುವರೋ ಅವರೇ ಸಿಎಂ ಎಂದು ನೀತೀನ್ ಗಡ್ಕರಿ ಸ್ಪಷ್ಟಪಡಿಸಿದರು. ಆದರೆ ಇದೀಗ ಶಿವಸೇನೆ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿಕೊಂಡು ದ್ರೋಹ ಬಗೆದಿದೆ, ಇದು ನಾಚಿಕೆ ಗೇಡಿನ‌ ಸಂಗತಿಯಾಗಿದೆ ಎಂದರು.

ಇನ್ನೂ ಶಿವಸೇನೆಯ ಠಾಕ್ರೆಯವರು ಕಾಂಗ್ರೆಸ್ ಪಕ್ಷ ಹಾಗೂ ಶರತ್ ಪವಾರ ಚಿಂತನೆಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದವರಾಗಿದ್ದು, ಆದರೆ ಇವತ್ತು ಅದೇ ಶಿವಸೇನೆ ಕಾಂಗ್ರೆಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತಿರುವುದು ಶಿವಸೇನೆಯ ಬಹುದೊಡ್ಡ ದುರಂತ. ಇದು ಶಿವಸೇನೆಯ ಪತನದ ಮೊದಲ ಹಂತವಾಗಿದೆ ಎಂದರು.

ಕೋರ್ಟ್ ತೀರ್ಪಿನ ನಂತರ ಮುಂದಿ‌ನ ನಡೆ: ಅನರ್ಹರ ವಿಚಾರ ನಾಳೆ ಕೋರ್ಟ್ ನಲ್ಲಿ ಅಂತಿಮವಾಗಲಿದ್ದು,  ಅಂತಿಮ ತೀರ್ಪು ಬಂದ ನಂತರ ಮುಂದಿನ ಹೆಜ್ಜೆ ಇಡಲಾಗುವುದು. ಇನ್ನೂ ಯಾರಾದರೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರನ್ನು ಭೇಟಿ ಆದರೆ ಅದರಲ್ಲಿ ಅರ್ಥವಿಲ್ಲ. ಅಲ್ಲದೇ ಯಾರು ದುಡುಕಿನ ನಿರ್ಧಾ ತೆಗೆದುಕೊಳ್ಳಬಾರದು. ಈ ಬಗ್ಗೆ ಸಂಬಂಧಿಸಿದವರೊಂದಿಗೆ ಮಾತನಾಡಿದ್ದೇನೆ ಎಲ್ಲರಿಗೂ ನ್ಯಾಯ ಸಿಗುವ ರೀತಿ ರಾಜ್ಯದ ಬಿಜೆಪಿ ಘಟಕ ನಡೆದುಕೊಳ್ಳವುದು ಎಂದರು.

Share

About Shaikh BIG TV NEWS, Hubballi

Check Also

ಹಿರಿಯ ಅಧಿಕಾರಿ ಕಿರುಕುಳಕ್ಕೆ ಬೇಸತ್ತು ಡೆತ್ ನೋಟ್ ಬರೆದಿಟ್ಟು ವೈದ್ಯಕೀಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ…!

ಹುಬ್ಬಳ್ಳಿ: ವೈದ್ಯಕೀಯ ಸಿಬ್ಬಂದಿಯೊಬ್ಬರು ಡೇತ್‌ ನೋಟ್ ಬರೆದಿಟ್ಟು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿಯ ಪ್ರಾಥಮಿಕ …

Leave a Reply

Your email address will not be published. Required fields are marked *

error: Content is protected !!