Breaking News
Hiring Reporter’s For more Information Contact Above Number 876 225 4007 . Program producer
Home / ತಂತ್ರಜ್ಞಾನ / ಕರ್ನಾಟಕ / ಸ್ವಾಸ್ಥ್ಯ ಸಮಾಜ ನಿರ್ಮಿಸಲು ಪೊಲೀಸರ ಕೊಡುಗೆ ಅಪಾರ : ಡಿಸಿ

ಸ್ವಾಸ್ಥ್ಯ ಸಮಾಜ ನಿರ್ಮಿಸಲು ಪೊಲೀಸರ ಕೊಡುಗೆ ಅಪಾರ : ಡಿಸಿ

ಮಂಡ್ಯ:- ಸ್ವಾಸ್ಥ್ಯ ಸಮಾಜ ನಿರ್ಮಿಸಲು ಪೊಲೀಸರ ಕೊಡುಗೆ ಅಪಾರ. ದೇಶಕ್ಕಾಗಿ, ಜನರಿಗಾಗಿ ಹಾಗೂ ಈ ಸಮಾಜದ ಒಳಿತಿಗಾಗಿ ತಮ್ಮ ಧೈರ್ಯ, ಶೌರ್ಯ ಹಾಗೂ ವೀರತ್ವದಿಂದ ದೇಶವನ್ನು ಸಂರಕ್ಷಣೆ ಮಾಡಿ, ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಪೊಲೀಸರನ್ನು ನಾವೆಲ್ಲರೂ ಸದಾ ಸ್ಮರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ಮಂಡ್ಯ ಜಿಲ್ಲಾ ಪೊಲೀಸ್ ಕಮಿಷ್ನರೇಟ್ ವತಿಯಿಂದ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ  ಅವರು ಮಾತನಾಡಿದರು.

ದಿನದ 24 ಗಂಟೆಯು ಸಹ ಜನಸಾಮಾನ್ಯರಿಗೆ ಸ್ಪಂದಿಸಿ, ಕಾನೂನಿನ ಸಂರಕ್ಷಣೆ ಮಾಡುವಲ್ಲಿ ಪೊಲೀಸರ ಪಾತ್ರ ಬಹಳ ಪ್ರಮುಖವಾಗಿದೆ. ದೇಶದ ಸೈನಿಕರು ಹೊರಗಡೆಯಿಂದ ಬರುವ ವೈರಿಗಳಿಂದ ಹಾಗೂ ಶತ್ರುಗಳಿಂದ. ನಮ್ಮನ್ನು ರಕ್ಷಣೆ ಮಾಡಿದರೆ, ಪೊಲೀಸರು ನಮ್ಮ ದೇಶದಲ್ಲೇ ಇರುವ ನಾನಾ ರೀತಿಯ ವೈರಿಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತಾ ಬರುತ್ತಿದ್ದಾರೆ ಎಂದು ಹೇಳಿದರು.

ಭಯೋತ್ಪಾದನೆ ಹಾಗೂ ಡಕಾಯಿತರಿಂದ ಸಮಾಜದಲ್ಲಿ ಸ್ವಾಸ್ಥ್ಯವನ್ನು ತರಬೇಕಾದರೆ ಪೊಲೀಸರ ನಿಸ್ವಾರ್ಥ ಸೇವೆ ನಿಜವಾಗಲೂ ಅವಿಸ್ಮರಣೀಯವಾದದ್ದು. ವ್ಯಕ್ತಿ-ವ್ಯಕ್ತಿಗಳ ಹಾಗೂ  ಸಮುದಾಯಗಳ ನಡುವೆ ಆದಂತಹ ಸಂಘರ್ಷಕ್ಕೆ ಪೊಲೀಸರು ಹಾಗೂ ಪೊಲೀಸ್ ಸಿಬ್ಬಂದಿಗಳು ಮೊದಲು ಸ್ಪಂದಿಸುತ್ತಾರೆ. ಒಟ್ಟು 292 ಜನ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಮ್ಮ ದೇಶ ಸದೃಢಗೊಳ್ಳಬೇಕು,  ನಮ್ಮ ಜನರು ಸಂರಕ್ಷಣೆಗೊಳ್ಳಬೇಕು ಎಂಬ ಉದ್ದೇಶದಿಂದ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಸ್ಮರಿಸಿದರು.

ಇಂದು ಇಡೀ ವಿಶ್ವದಲ್ಲಿ ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ಹಾಗೂ ಆರ್ಥಿಕವಾಗಿ ಮುಂದುವರಿಯುತ್ತಿರುವ ದೇಶವಾಗಿದೆ. ಇದಕ್ಕೆ ನಮ್ಮ ಆಡಳಿತ ವ್ಯವಸ್ಥೆ ಎಷ್ಟು ಕಾರಣವೋ,ಅಷ್ಟೇ ಪೊಲೀಸ್ ವ್ಯವಸ್ಥೆಯು ಕೂಡ ಕಾರಣ. ಇಂತಹ ಅತ್ಯಂತ  ಕೊಡುಗೆಯನ್ನು ನೀಡಿ ನಮಗೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಒಂದು. ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಿರುವ ಎಲ್ಲ ಪೊಲೀಸ್ ಹುತಾತ್ಮರಿಗೆ ಮತ್ತೊಮ್ಮೆ ನನ್ನ ನಮನ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾವ, ಪೊಲೀಸ್ ಅಧೀಕ್ಷಕರಾದ ಶೋಭಾ ರಾಣಿ ಹಾಗೂ ಪೊಲೀಸರು ಉಪಸ್ಥಿತರಿದ್ದರು.

Share

About solaragoppa

Check Also

ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಮಂಡ್ಯ ಮಾಕವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ದೇವೇಗೌಡ (55)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ .ಬ್ಯಾಂಕ್,ಟ್ರ್ಯಾಕ್ಟರ್. ಇತರೆ ಕೈ ಸಾಲ ಸೇರಿ 8 …

Leave a Reply

Your email address will not be published. Required fields are marked *

error: Content is protected !!