Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಪೌರ ಕಾರ್ಮಿಕರ ಜೀವಕ್ಕಿಲ್ಲಾ ಬೆಲೆ..!

ಪೌರ ಕಾರ್ಮಿಕರ ಜೀವಕ್ಕಿಲ್ಲಾ ಬೆಲೆ..!

ಹುಬ್ಬಳ್ಳಿ-ಕೊರೋನಾದಿಂದಾಗಿಯೇ ಇಡೀ ದೇಶವೇ ತತ್ತರಿಸಿದೆ. ಆದರೂ ಕೂಡಾ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ತಮ್ಮ ಜೀವವನ್ನು ಪಣಕಿಟ್ಟು ಕರ್ತವ್ಯ ನಿರ್ವಹಿಸಿದ್ದರೂ ಅಧಿಕಾರಿಗಳು ಮಾತ್ರ ಅವರಿಗೆ ಯಾವುದೇ ತರಹದ ಮುಂಜಾಗ್ರತಾ ಕ್ರಮಗಳ ಕಿಟ್ ವಿತರಣೆ ಮಾಡದೇ ಬೆಜವಾಬ್ದಾರಿ ತನ ತೋರುತ್ತಿದೆ..

ಹೌದು, ಮುಂಜಾನೆ , ರಾತ್ರಿ ಎನ್ನದೇ ತಮ್ಮ ಜೀವವನ್ನು ಲೇಕಿಸದೇ ಕೆಲಸ ಮಾಡಿದ್ದರೂ ಕೂಡಾ ಅವರಿಗೆ ಬೆಲೆ ಸಿಗುತ್ತೀಲ್ಲಾ. ಕೊವೀಡ್ ಸಮಯದಲ್ಲಿ
ಗುಣಮಟ್ಟದ ಮಾಸ್ಕ್, ಸ್ಯಾನೀಟೈಸರ್
ಕೂಡ ಪೌರ ಕಾರ್ಮಿಕರಿಗೆ ನೀಡುತ್ತೀಲ್ಲಾ. ಮಹಾನಗರದ ಪಾಲಿಕೆಯ ಕೊರೋನಾ ವಾರಿಯರ್ಸ್ ಸೇವೆ ನಿಸ್ವಾರ್ಥವಾಗಿದ್ದು ತಮ್ಮ ಜೀವವನ್ನು ಪಣಕಿಟ್ಟು ಕೆಲಸಮಾಡಿದ್ದರು ಅಧಿಕಾರಗಳು ತಿರುಗಿ ನೋಡುತ್ತಿಲ್ಲಾ ಇನ್ನೂ ಪೌರ ಕಾರ್ಮಿಕರು ಕೊರೊನಾ ವಾರಿಯರ್ಸ್‌ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರ ಘೋಷಣೆ ಮಾಡಿದರು ಸಹ ಅವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ.

ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮೀರಿಗೆ ಕೇವಲ ಒಂದು ಒಂದು ಮಾಸ್ಕ್ ಕೊಡುತ್ತಿದ್ದಾರೆ. ಗುಣಮಟ್ಟ ವಿಲ್ಲದೆ ಸ್ಯಾನೀಟೈಸರ್ ನೀಡಿದ್ದಾರಂತೆ,ಕೊವೀಡ್ ಮುಂಜಾಗ್ರತಾ ಹಾಗೂ ಸೌಲಭ್ಯ ಇಲ್ಲದೇ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತೀದ್ದಾರೆ. ಪಾಲಿಕೆ ಅಧಿಕಾರಗಳಿಗೆ ತಮ್ಮ ನೋವು ನ್ನು ಹೇಳಲು ಕರೆ ಮಾಡಿದ್ದರೆ ಮೊಬೈಲ್ ಯಾವಾಗಲೂ ಆಫ್ ಇರುತ್ತದೆ ಎಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನೂ ಇವರ ಗೋಳು ಕೇಳವವರು ಯಾರು ಎಂಬುವುದು ಗೊತ್ತಾಗುತ್ತೀಲ್ಲಾ ಆದ್ದರಿಂದ ಪೌರ ಕಾರ್ಮಿಕರಿಗೆ ಮಾಸ್ಕ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ನೀಡಿದರೆ ಅವರು ಸಹ ಆರೋಗ್ಯದಿಂದ ಜೀವನ ಸಾಗಿಸಬಹುದಾಗಿದೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ಪೌರ ಕಾರ್ಮಿಕರು ಕೊರೊನಾ ವಾರಿಯರ್ಸ್‌ ಎಂದು ಘೋಷಣೆ ಮಾಡಿದರು ಸಹ ಅವರ ಪರಿಸ್ಥಿತಿ ನೋಡದ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದು ಕೂಡಲೇ ಅವರಿಗೆ ಎಲ್ಲ ಮುಂಜಾಗ್ರತಾ ಕ್ರಮಗಳ ಕಿಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ..

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!