Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಕರ್ನಾಟಕದಲ್ಲಿ ಕನ್ನಡ ಕಟ್ಟುವಲ್ಲಿ ರಾಜರುಗಳ ಕೊಡುಗೆ ಅಪಾರ.

ಕರ್ನಾಟಕದಲ್ಲಿ ಕನ್ನಡ ಕಟ್ಟುವಲ್ಲಿ ರಾಜರುಗಳ ಕೊಡುಗೆ ಅಪಾರ.

ಮಂಡ್ಯ: ನಮ್ಮ ತಾಯಿ ಭಾಷೆ ಕನ್ನಡವಾಗಿದ್ದು, ಈ ಭಾಷೆಯನ್ನು , ಹಿಂದೆ ನಮ್ಮ ರಾಜ್ಯವನ್ನು ಆಳಿದ ರಾಜರುಗಳಾದ ವಿಜಯನಗರ ಸಾಮ್ರಾಜ್ಯದ ದೊರೆಗಳು, ಇಮ್ಮಡಿ ಪುಲಿಕೇಶಿ ಅಂತಹ ರಾಜರುಗಳು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಪ್ರಾದ್ಯಾಪಕರಾದ ತಿಮ್ಮೆಗೌಡರು ತಿಳಿಸಿದರು.
ತಾಲ್ಲೂಕು ಆಡಳಿತ ವತಿಯಿಂದ ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಲಾದ 64 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ನಾಡಿನ ಅನೇಕ ಕವಿಗಳು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. ಆದರೆ ಅಂದಿನ ಕನ್ನಡಕ್ಕೂ, ಇಂದಿನ ಕನ್ನಡಕ್ಕೂ ತುಂಬಾ ವ್ಯತ್ಯಾಸವಿದೆ ಎಂದರು.
ಉಪವಿಭಾಗದಿಕಾರಿ ಶೈಲಜಾ ಅವರು ಕನ್ನಡ ನಾಡಿನ ಬಗ್ಗೆ ಇತಿಹಾಸದ ಹಿನ್ನಲೆ ಬಗ್ಗೆ ಮಾತನಾಡಿದರು. ನಂತರ ವಿವಿಧ ಕಲೆಯಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಯಿತು.ಪತ್ರಕರ್ತ ರಘುವೀರ, ಪ್ರಚಾರ ರಾಜ ಜಲೇಂದ್ರ, ರಕ್ಷಿತ್ ಹಾಗೂ ಇನ್ನಿತರರಿಗೆ ಸನ್ಮಾನಿಸಲಾಯಿತು.
ನಂತರ ಎಸಿ. ಎಸ್ ಟಿ. ಜಾಗೃತಿ ಸಮಿತಿ ಸದಸ್ಯ ಬ್ಯಾಡರಹಳ್ಳಿ ಪ್ರಕಾಶ್ ಮಾತನಾಡಿ, ಇಲ್ಲಿನ ಸ್ಥಳೀಯ ಶಾಸಕರು ಅದ ಸಿ. ಎಸ್. ಪುಟ್ಟರಾಜು ಅವರು ರಾಷ್ಟ್ರೀಯ ಹಬ್ಬದಗಳ ಕಾರ್ಯಕ್ರಮಕ್ಕೆ ಯಾವ ಕಾರ್ಯಕ್ರಮಕ್ಕೂ ಬರುವುದಿಲ್ಲ ಯಾಕೆ ಇಂತಹ ನಾಡ ಹಬ್ಬದ ಕಾರ್ಯಕ್ರಮಕ್ಕೆ ಬರಲಿಲ್ಲ ಅಂದ್ರೆ ಏನು ಅರ್ಥ . ಇವರ ಒಂದು ಬೇಜವಾಬ್ದಾರಿತನ ಹೇಗಿದೆ ಎಂದು ಈ ಕಾರ್ಯಕ್ರಮಕ್ಕೆ ಗೈರು ಹಾಜರಿ ಆಗಿರುದರಲ್ಲಿ ಗೊತ್ತಾಗುತ್ತೆ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ್. ತಾಲೂಕು ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಕಾಂತಾರಾಜು ತಹಸೀಲ್ದಾರ್ ಪ್ರಮೋದ್ ಎಸ್ ಪಾಟೀಲ್ತಾ. ತನಕ್ಪಂಚಾಯತ್ ಸದಸ್ಯರುಗಳದ ನಿಂಗೆ ಗೌಡ. ಶೋಭಾಕುಮಾರ್. ರಾದಮ್ಮ ಕೆಂಪೇಗೌಡ ಇತರರು ಉಪಸ್ಥಿತರಿದ್ದರು.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!