Hiring Reporter’s For more Information Contact Above Number 876 225 4007 . Program producer
Home / Breaking News / ʼಲಾಕ್‌ ಡೌನ್ʼ‌ ನಿಯಮ ಉಲ್ಲಂಘಿಸಿದ ಲಾಲು ಪುತ್ರನ ವಿರುದ್ಧ ಎಫ್‌ಐಆರ್

ʼಲಾಕ್‌ ಡೌನ್ʼ‌ ನಿಯಮ ಉಲ್ಲಂಘಿಸಿದ ಲಾಲು ಪುತ್ರನ ವಿರುದ್ಧ ಎಫ್‌ಐಆರ್

Spread the love

ಕೊರೊನಾ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ವಿರುದ್ಧ ರಾಂಚಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಸ್ಥಾನಿಕ ಕ್ವಾರಂಟೈನ್‌ ಕೇಂದ್ರವಾಗಿದ್ದ ಹೊಟೇಲ್‌ ಒಂದರಲ್ಲಿ ಅನಧಿಕೃತವಾಗಿ ತೇಜ್‌ ‌ಪ್ರತಾಪ್‌ ಯಾದವ್‌ ಉಳಿದುಕೊಂಡಿದ್ದರು. ಆದ್ದರಿಂದ ಕೊರೊನಾ ನಿಯಮವನ್ನು ಉಲ್ಲಂಘಿಸಿದ ಆರೋಪದಲ್ಲಿ ತೇಜ್‌ ಪ್ರತಾಪ್‌ ಹಾಗೂ ಹೊಟೇಲ್‌ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ರಾಂಚಿ ಸಬ್‌ ಡಿವಿಷನ್‌ ಮ್ಯಾಜಿಸ್ಟ್ರೇಟ್‌ ಲೊಕೇಶ್‌ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

ಬಿಹಾರದ ಮಾಜಿ ಆರೋಗ್ಯ ಸಚಿವರಾಗಿರುವ ತೇಜ್‌ ‌ಪ್ರತಾಪ್‌ ಯಾದವ್‌ ಅವರು, ಕೆಲ್ಲಿ ಬಂಗ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್‌ ಯಾದವ್‌ ಅವರನ್ನು ಭೇಟಿಯಾಗಲು ಹೋಗಿದ್ದರು.

ಬಳಿಕ ರಾಂಚಿಯಲ್ಲಿ ಸ್ನೇಹಿತನನ್ನು ಭೇಟಿಯಾಗಿ ಹೊಟೇಲ್‌ನಲ್ಲಿ ಉಳಿದುಕೊಂಡಿದ್ದರು. ಈ ಸಮಯದಲ್ಲಿ ಯಾವುದೇ ಹೊಟೇಲ್‌ನಲ್ಲಿ ಉಳಿದುಕೊಳ್ಳಲು ಅವಕಾಶವಿಲ್ಲ. ಆದ್ದರಿಂದ ಎಫ್‌ಐಆರ್‌ ದಾಖಲಿಸಲಾಗಿದೆ.

Check Also

ತಮಿಳು ಚಿತ್ರರಂಗದ ಖ್ಯಾತ ನಟ ಆತ್ಮಹತ್ಯೆಗೆ ಶರಣು

Spread the loveಚೆನ್ನೈ: ಕೌಟುಂಬಿಕ ಕಲಹಕ್ಕೆ ಬೇಸತ್ತು ತಮಿಳು ಚಿತ್ರರಂಗದ ಉದಯೋನ್ಮುಖ ನಟ ತೆನ್ನರಸು ಆತ್ಮಹತ್ಯೆಗೆ ಶರಣಾಗಿದ್ದಾರೆ. 2012ರಲ್ಲಿ ಬಿಡುಗಡೆಯಾಗಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!