Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ನೌಕರರ ಕೆಲಸದ ಅವಧಿ ಏರಿಕೆಯಾಗುವ ಸಾಧ್ಯತೆ.

ನೌಕರರ ಕೆಲಸದ ಅವಧಿ ಏರಿಕೆಯಾಗುವ ಸಾಧ್ಯತೆ.

ನವದೆಹಲಿ: ಉದ್ಯೋಗಿಗಳು, ನೌಕರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಇನ್ನು ಮುಂದೆ ನೌಕರರ ಕೆಲಸದ ಅವಧಿಯನ್ನು ದಿನಕ್ಕೆ 9 ಗಂಟೆಗೆ ಏರಿಕೆ ಮಾಡುವ ಸಾಧ್ಯತೆಯಿದೆ.
ಕೆಲಸದ ಅವಧಿ ಪ್ರಸ್ತುತ 8 ಗಂಟೆ ಇದ್ದು ಇದನ್ನು 9 ಗಂಟೆಗೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಚಿಸಿರುವ ಕರಡು ವೇತನ ಸಂಹಿತೆಯಲ್ಲಿ ಈ ಕುರಿತ ಪ್ರಸ್ತಾವನೆ ಇದೆ.
ಈ ಪ್ರಸ್ತಾವನೆಯ ಪ್ರಕಾರ ಕೆಲಸದ ಅವಧಿಯನ್ನು 8 ಗಂಟೆಯಿಂದ 9 ಗಂಟೆಗೆ ಏರಿಕೆ ಮಾಡುವುದು, ವೇತನ ನಿರ್ಧಾರ ಮಾಡುವಾಗ ಭೌಗೋಳಿಕ ವರ್ಗೀಕರಣ ಅನುಸರಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಹೇಳಲಾಗಿದೆ.
ಹೆಚ್ಚಿನ ಅವಧಿ ಕೆಲಸ ಮಾಡುವುದನ್ನು ಸೆಕ್ಷನ್ 51 ನೇ ವಿಧಿಯಲ್ಲಿ ನಿರ್ಬಂಧಿಸಲಾಗಿದೆ. ಈಗ ಕೇಂದ್ರ ಸರ್ಕಾರ ಕೆಲಸದ ಅವಧಿ ಹೆಚ್ಚಿಸಲು ಮುಂದಾಗಿರುವುದಕ್ಕೆ ನೌಕರರ ವಲಯದಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

Share

About ramu BIG TV NEWS, Kolar

Check Also

ಟ್ರಂಪ್ ನೀತಿ ರದ್ದುಗೊಳಿಸಿದ ಜೋ ಬೈಡನ್.

ವಾಷಿಂಗ್ಟನ್: ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಭಾಗವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್, ಡೊನಾಲ್ಡ್ …

Leave a Reply

Your email address will not be published. Required fields are marked *

error: Content is protected !!