Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕುಖ್ಯಾತ ಕಳ್ಳನ ಬಂದಿಸಿದ ಶಹರ ಠಾಣೆ ಪೊಲೀಸರು

ಕುಖ್ಯಾತ ಕಳ್ಳನ ಬಂದಿಸಿದ ಶಹರ ಠಾಣೆ ಪೊಲೀಸರು

ಹುಬ್ಬಳ್ಳಿ: ಬೀಗ ಹಾಕಿದ‌ ಮನೆಗಳನ್ನು ಟಾರ್ಗೆಟ್ ಮಾಡಿ‌ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಕಳ್ಳನನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಹತ್ತಿಮತ್ತೂರ ತಾಂಡಾದ ಗಣೇಶ ಶಂಕರ ಲಮಾಣಿ ಎಂದು ಗುರುತಿಸಲಾಗಿದೆ. ಬಂಧಿತನಿಂದ 7,41,000 ಚಿನ್ಮಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ.ಹುಬ್ಬಳ್ಳಿ ರೇಲ್ವೆ ನಿಲ್ದಾಣದ ಬಳಿಯಿರುವ ಮೆಡಿಕಲ್ ಶಾಪ್​ ಮಾಲೀಕ ದಿನೇಶ ಜೈನ್ ಮನೆಯಲ್ಲಿ

ಮೇ 6ರ ರಾತ್ರಿ ಕಳ್ಳತನ ಮಾಡಿ ಪರಾರಿಯಾಗಿದ್ದ. ತಕ್ಷಣ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿ ಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಶಹರ್ ಪೊಲೀಸ್ ಠಾಣೆಯಲ್ಲಿ ಮಾತನಾಡಿದ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ್ ಶಹರ ಪೊಲೀಸ್ ಠಾಣೆಯ ಎಸಿಪಿ,

ಆರ್.ಕೆ.ಪಾಟೀಲ, ಪಿಐ ಆನಂದ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಕಳ್ಳತನ ಮಾಡಿದ ಗಣೇಶ ಲಮಾಣಿ ಎಂಬಾತನನ್ನು ಬಂಧಿಸಿ ಆತನಿಂದ ಹಣ,‌ಬಂಗಾರ, ಬೆಳ್ಳಿ ವಶಪಡಿಸಿಕೊಂಡಿದ್ದು ಆರೋಪಿಯನ್ನು ನ್ಯಾಯಾಲಯದಲ್ಲಿ ವಶಕ್ಕೆ ನೀಡಲಾಗಿದೆ ಎಂದರು.ಇನ್ನು ಈ ಒಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳಾದ ಚಂದ್ರು ಚಲವಾದಿ.ಕೃಷ್ಣ ಕಟ್ಟಿಮನಿ. ಎಮ್ ಅಯ್ಯನಗೌಡರ.ಎಸ್ ಬಿ ಕಟ್ಟಿಮನಿ.ಎಸ್ ವ್ಹಿ ಯರಗುಪ್ಪಿ.ಪಿ ಎಲ್ ಗೋವಿಂದಪ್ಪನವರ.ನಂದೇರ ಸಹಿತ ಅನೇಕರು ಭಾಗವಹಿಸಿದ್ದ ಸಿಬ್ಬಂದಿಗಳಿಗೆ ಪೊಲೀಸ ಆಯುಕ್ತರು ಬಹುಮಾ ನೀಡಿ ಗೌರವಿಸಿದ್ದಾರೆ

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!