Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಕನಕದಾಸರ ಚಿಂತನೆ ಹಾಗೂ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು: ಡಾ. ನದಾಫ್

ಕನಕದಾಸರ ಚಿಂತನೆ ಹಾಗೂ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು: ಡಾ. ನದಾಫ್

ಹುಬ್ಬಳ್ಳಿ:-ಭಕ್ತಶ್ರೇಷ್ಠ ಕನಕದಾಸ ಜಯಂತಿಯನ್ನು ಆಚರಣೆಗೆ ಮಾತ್ರಾ ಸೀಮಿತಗೊಳಿಸಬಾರದು. ಅವರ ಚಿಂತನೆ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ನದಾಫ್ ಎಚ್.ಎಚ್. ಹತ್ತಿಮತ್ತೂರು ಹೇಳಿದರು.
ಹುಬ್ಬಳ್ಳಿ‌ ತಾಲೂಕು ಆಡಳಿತ, ತಾಲೂಕು ಪಂಚಾಯತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ವಿಧಾನಸೌಧದ ಸಭಾಭವನದಲ್ಲಿ ಆಯೋಜಿಸಿದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ‌ ಅವರು ಮಾತನಾಡಿದರು.
ಕನಕದಾಸರದು ಬಹುಮುಖ ವ್ಯಕ್ತಿತ್ವ ಕಲಿ, ಆಡಳಿತಗಾರ, ದಾರ್ಶನಿಕ, ತತ್ವಜ್ಞಾನಿ, ವೈದ್ಯ, ಗಣಿತ್ಞ, ಸಾಹಿತಿ, ಭಕ್ತ, ಹೀಗೆ ಕನಕದಾಸರ ಜೀವನಾನುಭ ಹಿರಿದಾದುದು. ಅವರ ಕೃತಿಗಳು ಮಾನವೀಯ ಮೌಲ್ಯಗಳನ್ನು ಸಾರುತ್ತವೆ. ಕನಕದಾಸರ ಸಾಹಿತ್ಯವನ್ನು ಅಧ್ಯಯನ ಮಾಡುವುದರ ಮೂಲಕ ಅವರ ಚಿಂತನಗಳನ್ನು ತಿಳಿಯಬಹುದು. ಕನಕದಾಸರ ಮೊಹನ ತರಂಗಿಣಿ ಕೋಮುದ್ವೇಷ ಮರೆತು, ಪ್ರೀತಿಯ ಮೂಲಕ ಧರ್ಮಸಮನ್ವಯತೆಯನ್ನು ಸಾರುವ ಸಂದೇಶ ಹೊಂದಿದೆ. ರಾಮಧಾನ್ಯ ಚರಿತೆಯ ಮೂಲಕ ಉಳ್ಳವರ ಹಾಗೂ ಇಲ್ಲದವರ ನಡುವಿನ ವರ್ಗ ಸಂಘರ್ಷವನ್ನು ಅಕ್ಕಿ ಹಾಗೂ ರಾಗಿಯ ರೂಪಕದ ಮೂಲಕ ಅದ್ಬುತವಾಗಿ ನಿರೂಪಿಸಿದ್ದಾರೆ ನಳಚರಿತೆಯ ನಳ ಹಾಗೂ ದಮಯಂತಿಯರ ದಾಂಪತ್ಯ ಜೀವನದ ಸಹಬಾಳ್ವೆಯನ್ನು ಚಿತ್ರಿಸುತ್ತದೆ. ಕನಕದಾಸರು ರಚಿಸಿರುವ ಕೀರ್ತನೆ ಹಾಗೂ ಮುಂಡಿಗಿಗಳು ನಮ್ಮ ಜೀವನದ ಹಲವು ವಿಚಾರಗಳಿಗೆ ಮಾರ್ಗದರ್ಶಿಯಾಗಿವೆ. ಕುಲ ಮತದ ಶ್ರೇಷ್ಠತೆ ತೊರೆದು ಸಾಧನೆಗೈದ ಕನಕದಾಸರ ಜೀವನ ನಮಗೆ ಪ್ರೇರಣೆ ಎಂದರು.
ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಜಯಂತಿ ಶುಭಾಶಯ ಕೋರಿದರು. ತಾ.ಪಂ.ಅಧ್ಯಕ್ಷೆ ಚನ್ನಮ್ಮ ಗೊರ್ಲ, ಉಪಾಧ್ಯಕ್ಷ ಗುರುಪಾದಪ್ಪ ಕಮಡೋಳ್ಳಿ, ಇತರೆ ತಾ.ಪಂ. ಸದಸ್ಯರು, ಹಿರಿಯ ಅಧಿಕಾರಿಗಳು ಸಮಾಜದ ಮುಖಂಡರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ನಗರ ತಹಶೀಲ್ದಾರ ‌ಶಶಿಧರ ಮಾಡ್ಯಾಳ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಉಳವಪ್ಪ ಆರ್.ಪೀರಣ್ಣವರ ಸ್ವಾಗತಿಸಿದರು.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!