Hiring Reporter’s For more Information Contact Above Number 876 225 4007 . Program producer
Home / Breaking News / ಚಿಕ್ಕ ವಯಸ್ಸಿನಲ್ಲಿ ಫಿನ್‌ಲೆಂಡ್‌ ಪ್ರಧಾನಿಯಾದ ಬಾಲಕಿ..!

ಚಿಕ್ಕ ವಯಸ್ಸಿನಲ್ಲಿ ಫಿನ್‌ಲೆಂಡ್‌ ಪ್ರಧಾನಿಯಾದ ಬಾಲಕಿ..!

Spread the love

16 ವರ್ಷದ ಬಾಲಕಿ ಫಿನ್‌ಲೆಂಡ್‌ನ ಪ್ರಧಾನಿಯಾಗಿದ್ದಾಳೆ . ಆವಾ ಮುರ್ಟೊ ಒಂದು ದಿನ ತನ್ನ ಸ್ಥಾನಕ್ಕೆ ಬರಲು ಹಾಲಿ ಪ್ರಧಾನಿ ಮರಿನ್ ತಮ್ಮ ಸ್ಥಾನದಿಂದ ಸರಿದಿದ್ದಾರೆ. ಹವಾಮಾನ ಮತ್ತು ಮಾನವ ಹಕ್ಕುಗಳ ಸಂಬಂಧ ಸಕ್ರಿಯವಾಗಿ ಅಭಿಯಾನಗಳನ್ನು ಮಾಡಿದ 16 ವರ್ಷದ ಬಾಲಕಿ ಫಿನ್‌ಲೆಂಡ್‌ನ ಪ್ರಧಾನಿಯಾಗಿದ್ದಾಳೆ.

ಲಿಂಗ ತಾರತಮ್ಯವನ್ನು ಕೊನೆಗೊಳಿಸಲು ಹಾಲಿ ನಾಯಕಿ ಸನ್ನಾ ಮರಿನ್ ಅವರ ಹೋರಾಟದ ಭಾಗವಾಗಿ ಇಂತಹದೊಂದು ಬೆಳವಣಿಗೆ ಫಿನ್‌ಲೆಂಡ್‌ನಲ್ಲಿ ನಡೆದಿದೆ. 16ರ ಬಾಲಕಿ ಆವಾ ಮುರ್ಟೊಗೆ ಒಂದು ದಿನ ತನ್ನ ಸ್ಥಾನಕ್ಕೆ ಬರಲು ಹಾಲಿ ಪ್ರಧಾನಿ ಮರಿನ್ ತಮ್ಮ ಸ್ಥಾನದಿಂದ ಸರಿದಿದ್ದಾರೆ. ಇದೇ ಸಮಯದಲ್ಲಿ ಅವರು ರಾಜಕಾರಣಿ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಎತ್ತಿ ತೋರಿಸಿದರು.

ಅಂತಾರಾಷ್ಟ್ರೀಯ ಗಲ್ರ್ಸ್ ಟೇಕ್ ಓವರ್ ಕಾರ್ಯಕ್ರಮದಲ್ಲಿ ಇದು ನಾಲ್ಕನೇ ಸಲ ಫಿನ್‌ಲೆಂಡ್ ಭಾಗಿಯಾಗಿದೆ. ರಾಜಕೀಯ ನಾಯಕರು ಮತ್ತು ಪ್ರಮುಖ ಆಡಳಿತ ಅಂಗಗಳ ಸ್ಥಾನಕ್ಕೆ ಒಂದು ದಿನದ ಮಟ್ಟಿಗೆ ದೇಶಾದ್ಯಂತ ಇರುವ ಬಾಲಕಿಯರಲ್ಲಿ ಆಯ್ದವರನ್ನು ನೇಮಿಸಲಾಗುತ್ತದೆ.

ಈ ವರ್ಷ ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳಲ್ಲಿ ಡಿಜಿಟಲ್ ಕೌಶಲ್ಯ ಮತ್ತು ತಾಂತ್ರಿಕ ಅವಕಾಶಗಳನ್ನು ಉತ್ತೇಜಿಸುವುದರ ಬಗ್ಗೆ ಗಮನಹರಿಸಲಾಗಿದೆ. ಕೀನ್ಯಾ, ಪೆರು, ಸುಡಾನ್ ಮತ್ತು ವಿಯೆಟ್ನಾಂ ದೇಶಗಳು ಇದೇ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತವೆ.

ಪ್ರಧಾನಿಯಾಗಿ ಮಾತನಾಡಿದ ಮುರ್ಟೋ ನಿಮ್ಮ ಮುಂದೆ ಇಲ್ಲಿ ಮಾತನಾಡುತ್ತಿರುವುದು ಸಂತೋಷದ ಸಂಗತಿ. ಆದರೂ, ಒಂದು ರೀತಿಯಲ್ಲಿ, ನಾನು ಇಲ್ಲಿ ನಿಲ್ಲಬೇಕಾಗಿ ಬರಬಾರದಿತ್ತು ಎಂದು ನಾನು ಬಯಸುತ್ತೇನೆ. ಹುಡುಗಿಯರ ಸ್ವಾಧೀನದಂತಹ ಅಭಿಯಾನಗಳು ಇನ್ನು ಮುಂದೆ ಅಗತ್ಯವಿಲ್ಲ ಎಂದಿದ್ದಾರೆ.

Check Also

ಭಾರತೀಯ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್​ಗೆ ಹೃದಯಾಘಾತ!

Spread the love ನವ ದೆಹಲಿ: ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್ ಹೃದಯಾಘಾತಕ್ಕೆ ಒಳಗಾಗಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!