Hiring Reporter’s For more Information Contact Above Number 876 225 4007 . Program producer
Home / Breaking News / 54 ವರ್ಷ ಹಿಂದೆ ಕಳಿಸಿದ್ದ ರಾಕೆಟ್‌ ಮತ್ತೆ ಭೂಮಿಯತ್ತ!

54 ವರ್ಷ ಹಿಂದೆ ಕಳಿಸಿದ್ದ ರಾಕೆಟ್‌ ಮತ್ತೆ ಭೂಮಿಯತ್ತ!

Spread the love

ವಾಷಿಂಗ್ಟನ್‌: ಭೂಮಿಗೆ ಇನ್ನು ಕೆಲವೇ ದಿನಗಳಲ್ಲಿ ಬಂದು ಅಪ್ಪಳಿಸುತ್ತದೆ ಎಂಬ ಭೀತಿ ಸೃಷ್ಟಿಸಿದ್ದ, ಅಂತರಿಕ್ಷದಲ್ಲಿ ಅತಿ ವೇಗವಾಗಿ ಸಾಗಿಬರುತ್ತಿದ್ದ ನಿಗೂಢ ಆಕಾಶಕಾಯದ ನಿಜ ಸ್ವರೂಪ ಪತ್ತೆಯಾಗಿದೆ. ಅದು, 54 ವರ್ಷಗಳ ಹಿಂದೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಚಂದ್ರನಲ್ಲಿಗೆ ಕಳುಹಿಸಿದ್ದ ರಾಕೆಟ್‌ನ ಮೇಲ್ಭಾಗವಾಗಿದ್ದು, ಆಗ ನಾಪತ್ತೆಯಾಗಿದ್ದ ಅದು ಈಗ ಪುನಃ ಭೂಮಿಯತ್ತ ಬರುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಎಚ್ಚರಿಸಿದ್ದ ವಿಜ್ಞಾನಿಗಳು: ಕೆಲವು ದಿನಗಳ ಹಿಂದೆ, ದೈತ್ಯ ವಸ್ತುವೊಂದು ವೇಗವಾಗಿ ಭೂಮಿಯ ಕಡೆಗೆ ನುಗ್ಗಿ ಬರುತ್ತಿದೆ ಎಂಬ ಮಾಹಿತಿಯೊಂದನ್ನು ಹವಾಯ್‌ ತಾರಾಲಯದ ವಿಜ್ಞಾನಿಗಳು ಹಂಚಿಕೊಂಡಿದ್ದರು. ಇದರಿಂದಾಗಿ, ಜಗತ್ತಿನ ನಾನಾ ಭಾಗಗಳಲ್ಲಿರುವ ಅಬ್ಸರ್ವೇಟರಿಗಳಲ್ಲಿರುವ ದೂರದರ್ಶಕಗಳೆಲ್ಲವೂ ಹವಾಯ್‌ ವಿಜ್ಞಾನಿಗಳು ಸೂಚಿಸಿದ್ದ ದಿಕ್ಕಿನ ಕಡೆಗೆ ತಿರುಗಿಕೊಂಡಿದ್ದವು.ಆಗಿನಿಂದಲೂ ಅದನ್ನು ಪತ್ತೆ ಹಚ್ಚುವ ಕಾರ್ಯ ಸಾಗಿತ್ತು.

ಮುಂದೇನು?: 26 ಅಡಿ ಇರುವ ಆ ರಾಕೆಟ್‌ನ ಭಾಗ, ಭೂಮಿಯ ಗುರುತ್ವಾಕರ್ಷಣೆ ಬಲಕ್ಕೊಳಪಟ್ಟು ಗಂಟೆಗೆ 2,400 ಕಿ.ಮೀ. ವೇಗದಲ್ಲಿ ಭೂಮಿಯ ಕಡೆ ನುಗ್ಗುತ್ತಿದೆ. ತೀರಾ ಹತ್ತಿರಕ್ಕೆ ಬಂದಾಗ ಅದನ್ನು ನಿಗ್ರಹಿಸುವ ಪರಿ ನಿರ್ಧರಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!