Hiring Reporter’s For more Information Contact Above Number 876 225 4007 . Program producer
Home / Breaking News / ವಾಣಿಜ್ಯ ನಗರದ ಗಲ್ಲಿ ಗಲ್ಲಿಗಳಲ್ಲಿ ವಿದೇಶಿ ಸಿಗರೇಟ್ ಗಳ ಘಾಟು

ವಾಣಿಜ್ಯ ನಗರದ ಗಲ್ಲಿ ಗಲ್ಲಿಗಳಲ್ಲಿ ವಿದೇಶಿ ಸಿಗರೇಟ್ ಗಳ ಘಾಟು

Spread the love

ಹುಬ್ಬಳ್ಳಿ:ಪ್ರಖ್ಯಾತಿ-ಕುಖ್ಯಾತಿಗಳೆರಡನ್ನು ಸಮಾನವಾಗಿ ಸರಿದೂಗಿಸಿಕೊಂಡು ಶ್ರೇಣಿಕೃತ ಹಂತದಲ್ಲಿ ಸಾಗುತ್ತಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ವಿದೇಶಿ ಸಿಗರೇಟ್ ಮಾರಾಟಕ್ಕೆ ಅಂಕುಶವಿಲ್ಲದಂತಾಗಿದೆ. ಪರಿಣಾಮ ಗಲ್ಲಿ, ಗಲ್ಲಿಗಳಲ್ಲಿ ಹಾಗೂ ಗೂಡ ಅಂಗಡಿಗಳಲ್ಲಿ ವಿದೇಶಿ ಸಿಗರೇಟ್ ಮಾರಾಟ ಹಾಗೂ ಸೇವನೆ ಪ್ರಕ್ರಿಯೆ ಎಗ್ಗಿಲ್ಲದೆ ಸಾಗಿದೆ. ಕಡಿವಾಣ ಮಾತ್ರ ಮರಿಚಿಕೆಯಾಗಿದೆ.

ಅವಳಿ ನಗರದಲ್ಲಿ ಗಾಂಜಾ ಮಾರಾಟಗಾರರ ಬಂಧನದ ಪ್ರಕರಣ ವಾರಕ್ಕೆ ಕನಿಷ್ಠ ಒಂದಾದರೂ ದಾಖಲಾಗುತ್ತಿದೆ. ಹೀಗಿದ್ದರೂ ಪೊಲೀಸ್ ಇಲಾಖೆ ಮಾತ್ರ ವಿದೇಶಿ ಸಿಗರೇಟ್ ಹಾಗೂ ಗಾಂಜಾ ಮಾರಾಟ ಪ್ರಕ್ರಿಯೆಗೆ ಕಡಿವಾಣ ಹಾಕಲು ಮುಂದಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಿದ್ಯಾಕಾಶಿ ಖ್ಯಾತಿಯ ಹಾಗೂ ವಾಣಿಜ್ಯ ನಗರಿ ಹುಬ್ಬಳ್ಳಿ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿಗಳು, ಉದ್ಯೋಗ ಸಂಸ್ಥೆಗಳ ಉದ್ಯೋಗಿಗಳನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಗಾಂಜಾ ಹಾಗೂ ವಿದೇಶಿ ಸಿಗರೇಟ್ ಮಾರಾಟ ಜಾಲದ ಆಳ-ಅಗಲ ಪೊಲೀಸ್ ಇಲಾಖೆಗೆ ತಿಳಿಯದ ಸಂಗತಿಯೇನಲ್ಲ.

ಪೊಲೀಸರ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ವಿದೇಶಿ ಸಿಗರೇಟ್ ದಂಧೆ ಅವಳಿ ನಗರದಲ್ಲಿ ನಡೆಯುತ್ತಲೇ ಇದೆ. ಅಲ್ಲದೇ ಸಾಮಾನ್ಯ ಸಿಗರೇಟಗಳಿಗಿಂತ ವಿದೇಶಿ ಸಿಗರೇಟಗಳಲ್ಲಿ ನಿಕೋಟಿನ್ ಪ್ರಮಾಣ ಜಾಸ್ತಿಯಿದ್ದು, ಮಾನವನ ದೇಹಕ್ಕೆ ಹಾನಿಕಾರಕವಾದ ಕೆಮಿಕಲ್ ಕೂಡ ಇಲ್ಲಿ ಬಳಸಿ ತಯಾರಿಸಿರುವ ಸಿಗರೇಟಗೆ ಧೂಮಪಾನ ಪ್ರೀಯರು ಮುಗಿಬಿದ್ದು ಖರೀದಿಸುತ್ತಾರೆ.

ಭಾರತೀಯ ಮಾದರಿಯನ್ನು ಹೋಲುವ ವಿದೇಶಿ ಸಿಗರೇಟಗಳು ಸಂಪೂರ್ಣ ಭಾರತೀಯ ಮಾರುಕಟ್ಟೆಯನ್ನು ಆವರಿಸಿಕೊಂಡಿದೆ. ಭಾರತೀಯ ಸುಂಕ ಹಾಗೂ ತೆರಿಗೆ ವಂಚನೆಗೆ ಕಂಡುಕೊಂಡಿರುವ ವಾಮ ಮಾರ್ಗವಾಗಿದೆ ಎಂದು ಕೂಡ ಹೇಳಬಹುದು.

ಡಿಜೆ ಅರಮ್ ಬ್ಲಾಕ್ ಹಾಗೂ ಗುಡಾಂಗ್ ಗರಮಗಳಂತ ಸಿಗರೇಟ್ ಧೂಮಪಾನ ಪ್ರೀಯರನ್ನು ತನ್ನ ದಾಸರನ್ನಾಗಿಸಿಕೊಂಡಿದೆ. ಅಲ್ಲದೇ ಈ ಮಾಫಿಯಾದ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ವಿದೇಶಿ ಸಿಗರೇಟಗಳೇ ಹೀಗೆ ರಾಜಾರೋಷವಾಗಿ ಭಾರತಕ್ಕೆ ಆಗಮಿಸುತ್ತಿದ್ದು ಶಸ್ತ್ರಾಸ್ತ್ರಗಳು ಆಗಮಿಸುವುದು ದೊಡ್ಡ ವಿಷಯವೆನಲ್ಲ.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!