Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕಾರಿನಲ್ಲಿದ್ದ ಕೆರೆ ಹಾವು ಹಿಡಿದ ಉರಗ ತಜ್ಞ.

ಕಾರಿನಲ್ಲಿದ್ದ ಕೆರೆ ಹಾವು ಹಿಡಿದ ಉರಗ ತಜ್ಞ.

 

ಹುಬ್ಬಳ್ಳಿ: ಮನೆಯ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ಕೆರೆ ಹಾವು ಸೇರಿಕೊಂಡಿದ್ದ ಘಟನೆ ಹುಬ್ಬಳ್ಳಿಯ ಜವಳಿ ಗಾರ್ಡನ್ ಸಮೀಪದಲ್ಲಿ ಕಂಡು ಬಂದಿದೆ.
ಇನ್ನೂ ಜವಳಿ ಗಾರ್ಡನಿನ ಸಮೀಪವಿರುವ ಎಸ್.ಡಿ ಹುಬ್ಬಳ್ಳಿ ಎಂಬುವರಿಗೆ ಸೇರಿದ ದಾನೇಶ್ವರಿ ನಿಲಯದ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ‌ ಇಂಜಿನ್ ಭಾಗದಲ್ಲಿ ಕೆರೆ ಹಾವು ಸೇರಿಕೊಂಡಿತ್ತು ಎನ್ನಲಾಗಿದೆ.
ಮುಂಜಾನೆ ಕಾರ್ ತೊಳೆದ ನಂತರ ಕಂಡು ಬಂದ ಕೆರೆ ಹಾವು ನೋಡಿದ ಮಾಲಿಕರು ಕಾರಿನ ಬಾಗಿಲು ಹಾಕಿದ್ದಾರೆ.
ನಂತರ ಹುಬ್ಬಳ್ಳಿಯ ಉರಗ ಪ್ರೇಮಿ ಸಂಗಮೇಶ ಚಕ್ರಸಾಲಿಯವರಿಗೆ ಕರೆ ಮಾಡಿ ಕರೆಸಿಕೊಂಡು, ಕಾರ್ ಇಂಜಿನ್ ಬ್ಯಾನೆಟ್ ತೆಗೆದು ಪರಿಶೀಲನೆ ಮಾಡುವ ವೇಳೆ ಕಾರಿನಲ್ಲಿ ಹಾವು ಸೇರಿಕೊಂಡಿದ್ದು ಕಂಡು ಬಂದಿದೆ.
ತಕ್ಷಣವೇ ಸ್ನೇಕ್ ಕಿಂಗ್ ಸಂಗಮೇಶ ಚಕ್ರಸಾಲಿ ಹಾವು ಹಿಡಿದ ಕಾಡಿಗೆ ಬಿಡಲಾಯಿತು. ಎಂದು ತಿಳಿದುಬಂದಿದೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಮನೆಯ ಸುತ್ತಲೂ ಹೆಚ್ಚು ಹಸಿರು ಕಸ ಬೆಳೆದಿರುವ ಕಾರಣದಿಂದ ಕಾರಿನಲ್ಲಿ ಇಲಿ ಹಿಡಿಯಲು ಸೇರಿಕೊಂಡಿದೆ ಎಂದು ಸ್ಥಳಿಯರು ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!