Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಪಾಚಿ ಕೀಳಲು ಹೋದ ಯುವಕನ ದುರಂತ ಅಂತ್ಯ.

ಪಾಚಿ ಕೀಳಲು ಹೋದ ಯುವಕನ ದುರಂತ ಅಂತ್ಯ.

 

ಗುಂಡ್ಲುಪೇಟೆ: ಅರಣ್ಯದೊಳಗಿನ ಪಾಚಿ ಸಂಗ್ರಹಕ್ಕೆಂದು ಹೋಗಿದ್ದ ಆದಿವಾಸಿ ಯುವಕನೊರ್ವ ಆಯತಪ್ಪಿ ಮರದ ಮೇಲಿಂದ ಬಿದ್ದು ಸಾವೀಗೀಡಾಗಿರುವ ದಾರುಣ ಘಟನೆ ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಮೂಲೆಹೊಳೆ ಸಮೀಪದ ಮದ್ದೂರು ಕಾಲೋನಿಯಲ್ಲಿ ನಡೆದಿದೆ.
ಮೃತ ಯುವಕ ರಾಮಕೃಷ್ಣ ಎನ್ನಲಾಗಿದ್ದು , ಬಂಡೀಪುರ ಅರಣ್ಯ ವ್ಯಾಪ್ತಿಯ ಮೊಸಲೆಕೊಳ್ಳಿ ಎಂಬ ಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ. ಯುವಕನು ಲ್ಯಾಮ್ಪ್ ಸೊಸೈಟಿಗೆ ಪಾಚಿ ಸಂಗ್ರಹ ಮಾಡಿ ಕಳುಹಿಸುತ್ತಿದ್ದ ಎನ್ನಲಾಗಿದೆ‌.
ಈ ಹಿನ್ನಲೆಯಲ್ಲಿ ಮೃತ ಯುವಕನ ಕುಟುಂಬಸ್ಥರು ಸೂಕ್ತ ಪರಿಹಾರಕ್ಕಾಗಿ ಶವವಿಟ್ಟು ಜಿಲ್ಲಾ ಪರಿಶಿಷ್ಟ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕಾಗಮಿಸಿದ ಜಿ.ಪ.ಕಲ್ಯಾಣಾಧಿಕಾರಿ ಹೊನ್ನೇಗೌಡ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ ನಂತರ ಶವ ಸಂಸ್ಕಾರ ನಡೆಸಲಾಯಿತು.

ವರದಿ : ಮಹದೇವಪ್ರಸಾದ್ ಯಡಹುಂಡಿ.. ಗುಂಡ್ಲುಪೇಟೆ. ಬಿಗ್ ಟಿವಿ ನ್ಯೂಸ್. ‌

Share

About ramu BIG TV NEWS, Kolar

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!