Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ನಾಲೆಯ ದುರಸ್ತಿ ಕಾರ್ಯ ಮಾಡಲು ಗ್ರಾಮಸ್ಥರ ಒತ್ತಾಯ.

ನಾಲೆಯ ದುರಸ್ತಿ ಕಾರ್ಯ ಮಾಡಲು ಗ್ರಾಮಸ್ಥರ ಒತ್ತಾಯ.

ಮಂಡ್ಯ: ಅಕ್ಕಿಹೆಬ್ಬಾಳು ಹೋಬಳಿಯ ಬಸವನಹಳ್ಳಿ ಗ್ರಾಮದ ಬಳಿ ಹೇಮಾವತಿ ನಾಲೆಯೊಳಗೆ ಅಡ್ಡಲಾಗಿ ಗಿಡಗಂಟಿಗಳು ಬೆಳಿದಿದ್ದು ದುರಸ್ತಿ ಕಾಣದ ಪರಿಣಾಮ
ನೀರು ಉಕ್ಕಿ ಹರಿದು ಬಸವನಹಳ್ಳಿ ಗ್ರಾಮಕ್ಕೆ ನೀರು ನುಗ್ಗಿ ಗ್ರಾಮದ ಹಲವು ಮನೆಗಳು ಕುಸಿದು ಬೀಳುವ ಅಪಾಯ ಎದುರಿಸುತ್ತಿವೆ.ಪ್ರತಿ ಬಾರಿ ಮಳೆ ಸುರಿದ ವೇಳೆ ಇದೇ ರೀತಿ ನೀರು ಗ್ರಾಮಕ್ಕೆ ನುಗ್ಗಿ ಅನಾಹುತ ಸಂಭವಿಸುತ್ತಿದೆ.
ಮನೆಗಳ ಸುತ್ತಲೂ ನೀರು ನಿಂತಿದ್ದು ಮನೆಗಳ ಗೋಡೆಗಳು ತೊಯ್ದು ಕುಸಿಯುವ ಬೀತಿ ಎದುರಾಗಿದೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯೂ ಸಹ ಇಲ್ಲದ ಕಾರಣ ಕಾಲುವೆಯ ನೀರು ಗ್ರಾಮ ಮುಖ್ಯ ಬೀದಿಯಲ್ಲಿಯೇ ಹರಿಯುತ್ತಿದೆ ಹಾಗಾಗಿ ಕೂಡಲೇ ಹೇಮಾವತಿ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಯನ್ನು ದುರಸ್ತಿ ಪಡಿಸಿ ನೀರು ಕಾಲುವೆಯಲ್ಲಿ ಮುಂದಕ್ಕೆ ಹೋಗುವಂತೆ ಗ್ರಾಮಕ್ಕೆ ನುಗ್ಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಂತೆ ಮನೆಗಳು ಗೋಡೆ ಕುಸಿದು ಬಿದ್ದು ಹೋದರೆ ಅದಕ್ಕೆ ಹೇಮಾವತಿ ನೀರಾವರಿ ಅಧಿಕಾರಿಗಳೇ ಸಂಪೂರ್ಣ ಹೊಣೆಗಾರರಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ಹಾಗೂ ಆಲಂಬಾಡಿಕಾವಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಸವನಹಳ್ಳಿ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿ ನೀರು ಬೀದಿಯಲ್ಲಿ ಹಾಗೂ ವಾಸದ ಮನೆಗಳಿಗೆ ನುಗ್ಗದಂತೆ ತುರ್ತು ಕ್ರಮ ವಹಿಸಬೇಕು ಎಂದು ಬಸವನಹಳ್ಳಿ ಗ್ರಾಮಸ್ಥರಾದ
ಮುರುಳಿ, ಸಂಗಪ್ಪ, ಮಹಾದೇವಪ್ಪ ಮತ್ತಿತರರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!