Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಬೆಳಗಾವಿ / ಅನರ್ಹ ಶಾಸಕರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ: ಸವದಿ.

ಅನರ್ಹ ಶಾಸಕರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ: ಸವದಿ.

 

ಬೆಳಗಾವಿ:- ಅನರ್ಹ ಶಾಸಕರ ಕುರಿತು ಚಿಂತಿಸುವ ಅವಶ್ಯಕತೆ ನಮಗಿಲ್ಲವೆಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳುವ ಮೂಲಕ ಅನರ್ಹ ಶಾಸಕರಿಗೆ ಶಾಕ್ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಈ ಕ್ಷಣದವರೆಗೆ ಅನರ್ಹರಿಗೂ ಬಿಜೆಪಿಗೂ ಸಂಬಂಧವಿಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಅನರ್ಹ ಶಾಸಕರ ಬಗ್ಗೆ ನಾವು ಚಿಂತಿಸುವ ಅಗತ್ಯವಿಲ್ಲ ಎಂದು ಸವದಿ ಅನರ್ಹ ಶಾಸಕ ಶಾಕ್ ನೀಡಿದ್ದಾರೆ.
ಇನ್ನೂ ಅನರ್ಹರು ಬಿಜೆಪಿ ಪಕ್ಷಕ್ಕೆ ಬರುವ ಕುರಿತು ಎಲ್ಲಿಯೂ ಹೇಳಿಲ್ಲ. ಸ್ಪೀಕರ್ ಅನರ್ಹಗೊಳಿಸಿದಕ್ಕೆ ಕೋರ್ಟ್ ಗೆ ಹೋಗಿದ್ದಾರೆ ಅಷ್ಟೇ. ತಮಗೆ ನ್ಯಾಯಬೇಕೆಂದು ಕೋರ್ಟ್ ಮೋರೆ ಹೋಗಿದ್ದಾರೆ ಅವರ ಜೊತೆಗೆ ಕಾಂಗ್ರೆಸ್ ನವರೂ ಕೂಡಾ ನ್ಯಾಯ ಬೇಕೆಂದು ಹೋಗಿದ್ದಾರೆ. ಇದು ಅನರ್ಹ ಶಾಸಕರು, ಕಾಂಗ್ರೆಸ್ ನಡುವಿನ ಗಲಾಟೆಯಾಗಿದ್ದು, ಇದಕ್ಕೂ ನಮಗೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದಾರೆ.

Share

About Vijayalakshmi

Check Also

ಹೊಸ ವರ್ಷದ ಸಂಭ್ರಮಾಚರಣೆಗೆ ಕಡಿವಾಣ ಅಗತ್ಯ.

ಬೆಳಗಾವಿ : ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕಡಿವಾಣ ಹಾಕುವ ಅಗತ್ಯ ಇದೆ ಎಂದು ಗೃಹ …

Leave a Reply

Your email address will not be published. Required fields are marked *

error: Content is protected !!