Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಮನೆ ಕಳ್ಳತನ ಮಾಡುತ್ತಿದ್ದವರ ಬಂಧನ: 12 ಲಕ್ಷ ಮೌಲ್ಯದ ಚಿನ್ನಾಭರಣ ವಶ.

ಮನೆ ಕಳ್ಳತನ ಮಾಡುತ್ತಿದ್ದವರ ಬಂಧನ: 12 ಲಕ್ಷ ಮೌಲ್ಯದ ಚಿನ್ನಾಭರಣ ವಶ.

 

ಹುಬ್ಬಳ್ಳಿ: ನಗರದಲ್ಲಿ ಮನೆಗಳ ಕಳತನ ಮಾಡುತ್ತಿದ್ದ ಇಬ್ಬರನ್ನು ವಿದ್ಯಾನಗರ ಪೋಲಿಸರು ಬುಧವಾರ ಬಂಧಿಸಿ, ಅವರಿಂದ ಅಂದಾಜು 12 ಲಕ್ಷ ರೂ ಮೌಲ್ಯದ 283 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ. ಇನ್ನೂ ಮನೆಗಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಇಲ್ಲಿನ ಹಳೇಹುಬ್ಬಳ್ಳಿ ಜಂಗ್ಲಿಪೇಟೆಯ ನಂದೀಶ ಊರ್ಪು ಬೆಂಕಿ ವಿ.ಸಂಕ್ರಪ್ಪನವರ ಹಾಗೂ ಕೇಶ್ವಾಪುರ ಉದಯನಗರ ಹೂಗಾರ ಪ್ಲಾಟ್ ನ ಕಾರ್ತಿಕ ಊರ್ಫ್ ಕಾರ್ಯಾ ಬಿ.ಬೈಚನಳ ಬಂಧಿತರಾಗಿದ್ದಾರೆ.
ಇಲ್ಲಿನ ವಿದ್ಯಾನಗರ ಶಿರೂರ ಪಾರ್ಕ್ ನ ನೇಕಾರ ಭವನ ಬಳಿ ಬಂಧಿತ ನಂದೀಶ್ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೋಲಿಸರು ಹಿಡಿದು ವಿಚಾರಿಸಿದಾಗ, ತನ್ನೊಂದಿಗೆ ಕಾರ್ತಿಕ ಸೇರಿ ಉಣಕಲ್ ಸಾಯಿ ಕಾಲೋನಿ, ಸಿದ್ದಕಲ್ಯಾಣ ನಗರ, ಕಲ್ಮೇಶ್ವರ ನಗರ, ಕಾಳಿದಾಸ ನಗರ, ಭಾರತಿ ಕಾಲೋನಿ, ಚಂದ್ರನಾಥ ನಗರದಲ್ಲಿ ರಾತ್ರಿ ವೇಳೆ ಕೀಲಿ ಹಾಕಿದ ಮನೆಗಳನ್ನು ಪರಿಶೀಲಿಸಿ ಕಳ್ಳತನ ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ. ಬಂಧಿತರಿಂದ ಒಟ್ಟು ಆರು ಮನೆಗಳಲ್ಲಿ ಕಳ್ಳತನ ಮಾಡಿದ್ದ 12 ಲಕ್ಷ ರೂ ಮೌಲ್ಯದ ಚಿನ್ನ ಬೆಳ್ಳಿ ಸಾಮಗ್ರಿಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಕೊಂಡಿದ್ದಾರೆ.

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!