Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಸ್ನೇಹಿತನ‌ ಜನ್ಮದಿನಾಚರಣೆಗೆ ಹೋದವರು ಜನ್ಮ ಕಳೆದುಕೊಂಡರು

ಸ್ನೇಹಿತನ‌ ಜನ್ಮದಿನಾಚರಣೆಗೆ ಹೋದವರು ಜನ್ಮ ಕಳೆದುಕೊಂಡರು

ಹುಬ್ಬಳ್ಳಿ:- ಅವರೆಲ್ಲ ಪ್ರಾಣಕ್ಕೆ ಪ್ರಾಣ ಕೊಡೋ ಸ್ನೇಹಿತರು. ಒಂದೇ ಕಡೆಯವರು. ಏನೇ ಮಾಡಿದರೂ‌ ಎಲ್ಲರೂ ಸೇರಿ ಖುಷಿ ಖುಷಿಯಾಗಿ ಸೇರಿಕೊಂಡು ಸಂಭ್ರಮ ಪಡುತ್ತಿದ್ದರು. ಇಂದು ಸ್ನೇಹಿತನ ಹುಟ್ಟು ಹಬ್ಬ ಮಾಡಲು ತೆರಳಿದ್ದ ನಾಲ್ವರು ಸ್ನೇಹಿತರು ಕೆರೆಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.
ನೀರಿನಲ್ಲಿ‌ ಮುಳುಗಿರುವ ಶವಗಳನ್ನು ಹೊರ ತೆಗೆಯಲಿಕ್ಕೆ ಸಾಥ್ ನೀಡಿದವರು.‌ಅಲ್ಲಿ ಇಂತ ಹೃದಯ ವಿದ್ರಾವಕ ಘಟನೆಗೆ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದ ಕೆರೆ ಸಾಕ್ಷಿಯಾಗಿದೆ.
ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಸ್ನೇಹಿತರು ನೀರು ಪಾಲಾಗಿದ್ದಾರೆ. ಗಣೇಶಪೇಟೆ ಮಚ್ಚಿಮಾರ್ಕೇಟ್ ನಿವಾಸಿಗಳಾದ
ಹುಬ್ಬಳ್ಳಿಯ ನಿವಾಸಿಗಳಾದ ಅರ್ಮಾನ್ ಮಲ್ಲಿಕ್ ಉಣಕಲ್ (18), ಸುಭಾನ ಹೊನ್ಯಾಳ (18), ಸೋಯಾಲ್ ಸೈಯದ್ (18), ಸುಭಾನಿ (18) ಮೃತರಾಗಿದ್ದು, ಇವರು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಏಳು ಜನ ಸ್ನೇಹಿತರು ಸೇರಿಕೊಂಡು ತಮ್ಮ ಸ್ನೇಹಿತ ಹುಟ್ಟು ಹಬ್ಬ ಆಚರಣೆಗೆ ಗುಡಿಹಾಳ ‌ಕೆರೆಗೆ ಹೋಗಿದ್ದರು. ಆದ್ರೆ ಇವರಲ್ಲಿ ಸೋಯಲ್ ಸೈಯದ್ ಈಜಲು ಮೊದಲು ಕೆರೆಗೆ ಇಳಿದಿದ್ದಾನೆ. ಆದ್ರೆ ಆತನಿಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ಮೂವರು ಸ್ನೇಹಿತರು ಕೈ ಕೈ ಹಿಡಿದು ಸೋಯಲ್ ನ ರಕ್ಷಣೆಗೆ ಮುಂದಾಗಿದ್ದಾರೆ. ಆದ್ರೆ ಮೂರು ಜನರು ಕೂಡ ನೀರು ಪಾಲಾಗಿದ್ದಾರೆ.
ಎಲ್ಲರೂ ಒಂದೇ ವಯಸ್ಸಿನ ವರಾಗಿದ್ದು ಯಾವಾಗಲೂ ಕೂಡಿಯೇ ಇರುತ್ತಿದ್ದರು. ತಮ್ಮ ಏರಿಯಾದಲ್ಲಿ ಯಾವುದೇ ಕಾರ್ಯಕ್ರಮ ಇರಲಿ ಎಲ್ಲರೂ ಒಗ್ಗಟ್ಟಾಗಿ ಸೇರಿ ಎಲ್ಲಾ ಕೆಲಸ ಕಾರ್ಯಾ ಮಾಡುತ್ತಿದ್ದರು. ಆದ್ರೆ ಸ್ನೇಹಿತ ಹುಟ್ಟು ಹಬ್ಬದ ಆಚರಣೆಗೆ ತೆರಳಿದ ಸ್ನೇಹಿತರು ನೀರು ಪಾಲಾಗಿರುವದು ಸಮಾಜದ ಬಾಂಧವರು ಹಾಗೂ ಸಂಬಂಧಿಗಳಲ್ಲಿ ದುಖ‌ ಮಡುಗಟ್ಟುವಂತೆ ಮಾಡಿದೆ.
ಏನೇ ಆಗಲಿ ಹಿದ್ ಮಿಲಾದ ಮಾರನೇ ದಿನ ಸ್ನೇಹಿತ‌ರು ವಿದಿಯಾಟಕ್ಕೆ ಯುವಕರ ಸಾವು ಯುವಕರ ಕುಟುಂಬಗಳನ್ನು ಕಣ್ಣೀರಿನಲ್ಲಿ‌ ಕೈತೊಳೆಯುವಂತೆ ಮಾಡಿದ್ದು ವಿಪರ್ಯಾಸ.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!