Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ: 5600 ದಂಡ ವಸೂಲಿ

ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳ ಮೇಲೆ ದಾಳಿ: 5600 ದಂಡ ವಸೂಲಿ

Spread the love

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ಪೋಲಿಸ್​ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಶಾಲಾ‌‌ ಕಾಲೇಜು‌ ಬಳಿ ಇರುವ ಪಾನ್ ಶಾಪ್ ಅಂಗಡಿಗಳ ಮೇಲೆ ದಾಳಿ ನಡೆಸಿ ಒಟ್ಟು 36 ಪ್ರಕರಣಗಳನ್ನು ದಾಖಲಿಸಿ 5,600 ರೂ. ದಂಡ ವಿಧಿಸಿ ನೋಟಿಸ್ ನೀಡಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಂಬಾಕು ಉತ್ಪನ್ನ ಮಾರಟ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಲ್ಯಾಮಿಂಗಟನ್, ರಸ್ತೆ, ನೆಹರು ಮೈದಾನ, ಜನತಾಬಜಾರ್​, ದಾಜಿಬಾನ್ ಪೇಟೆಯಲ್ಲಿರುವ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ಮತ್ತು ಬಾರ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ಕೊಟ್ಟಾ ಕಾಯ್ದೆ -2003ರ ಅಡಿಯಲ್ಲಿ ದಾಳಿ ಮಾಡಿ, ಸೆಕ್ಷನ್- 4 ಪ್ರಕಾರ 12 ಪ್ರಕರಣ ದಾಖಲಿಸಿ 3100‌ರೂ ದಂಡ ಹಾಗೂ ಮತ್ತು ಸೆಕ್ಷನ್ 4- 20 ಪ್ರಕರಣ, 6 (a) ಅಡಿಯಲ್ಲಿ 8 ಪ್ರಕರಣ ದಾಖಲಿಸಿ 900 ರೂ ದಂಡ ವಿಧಿಸಲಾಗಿದೆ. ಕೊಟ್ಟಾ 2003 ರ ಕಾಯ್ದೆ ಸೆಕ್ಷನ್ 4 ಹಾಗೂ 6 (B) 8 ಪ್ರಕರಣ 16,000 ರೂ ಒಟ್ಟು 36 ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ಅಂಗಡಿ ಮಾಲೀಕರಿಗೆ ಕಡ್ಡಾಯವಾಗಿ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ನಿಷೇಧದ ನಾಮಫಲಕಗಳನ್ನು ಹಾಕುವಂತೆ ಎಚ್ಚರಿಕೆ ನೀಡಿ ಮತ್ತು ಶಾಲಾ ಕಾಲೇಜು ಬಳಿ ಯಾವುದೇ ತರಹದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಸಲಹೆಗಾರರಾದ ಎಮ್.ಐ.ಕಲ್ಲಪ್ಪನವರ ಅಂಕೀತ ಅಧಿಕಾರಿಗಳಾದ ಹೆಚ್ ಬಿ.ಶಿವಕುಮಾರ್, ಹುಬ್ಬಳ್ಳಿ ತಾಲೂಕು ಆರೋಗ್ಯ ಅಧಿಕಾರಿ ಓಂಕಾರ್ ಗೌಡ ಮತ್ತು ಪೋಲಿಸ್​ ಇಲಾಖೆಯ ಸಿಬ್ಬಂದಿ ವರ್ಗದ ದಾಳಿಯಲ್ಲಿ ಇತರರು ಇದ್ದರು.

Check Also

ಸುಲಭ ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಖ್ಯ ಮಾಹಿತಿ

Spread the loveಬೆಂಗಳೂರು: ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದೊಂದಿಗೆ ಇಂಡಿಯನ್ ಬ್ಯಾಂಕ್ ಬಡ್ಡಿ ದರ ಇಳಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!