Hiring Reporter’s For more Information Contact Above Number 876 225 4007 . Program producer
Home / Breaking News / ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ: ಮೋದಿ ಚಾಲನೆ.

ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ: ಮೋದಿ ಚಾಲನೆ.

Spread the love

ನವದೆಹಲಿ: ದೇಶದಲ್ಲಿ ಪಾರದರ್ಶಕ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ’ ವೇದಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಪಾರದರ್ಶಕ ತೆರಿಗೆ ವ್ಯವಸ್ಥೆ ಮತ್ತು ದೇಶದಲ್ಲಿ ತೆರಿಗೆ ಸುಧಾರಣೆಯ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಆದಾಯ ತೆರಿಗೆ ಇಲಾಖೆಯು ತೆರಿಗೆ ಅಧಿಕಾರಿಗಳ ಮತ್ತು ತೆರಿಗೆ ಪಾವತಿದಾರರ ಹಕ್ಕು ಮತ್ತು ಜವಾಬ್ದಾರಿಗಳನ್ನು ತಿಳಿಸುವ ‘ತೆರಿಗೆದಾರರ ಚಾರ್ಟರ್’ ಎಂಬ ನೂತನ ವ್ಯವಸ್ಥೆ ಅಳವಡಿಸಿಕೊಳ್ಳಲಿದೆ. 

ಫೇಸ್​​ಲೆಸ್​ ಮೌಲ್ಯಮಾಪನ ಸೇವೆಯು ತೆರಿಗೆದಾರರ ಚಾರ್ಟರ್​ನಲ್ಲಿ ಇಂದಿನಿಂದ ಜಾರಿಗೆ ಬರುತ್ತಿದ್ದು, ಫೇಸ್​​ಲೆಸ್​ ಮನವಿ ಸೇವೆ ಸೆಪ್ಟೆಂಬರ್ 25ರಿಂದ ಲಭ್ಯವಿರಲಿದೆ. ಭಾರತದಾದ್ಯಂತ ಫೇಸ್​ಲೆಸ್​ ನಿರ್ವಹಣಾ ತಂಡಗಳು ಐಟಿ ಆದಾಯವನ್ನು ಪರಿಶೀಲಿಸಲಿವೆ ಮತ್ತು ಕುಂದುಕೊರತೆಗಳನ್ನು ಪರಿಹರಿಸುತ್ತವೆ.

ಮೌಲ್ಯಮಾಪನ ಮತ್ತು ತೆರಿಗೆದಾರರ ಚಾರ್ಟರ್ ಇಂದಿನಿಂದ ಜಾರಿಗೆ ಬಂದಿದೆ. ಪಂಡಿತ್​ ದೀನ ​ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆಯ ಸೆಪ್ಟೆಂಬರ್ 25ರಿಂದ ಫೇಸ್​​ಲೆಸ್​ ಕೋರಿಕೆ ಜಾರಿಗೆ ತರಲಾಗುವುದು. ತೆರಿಗೆ ವ್ಯವಸ್ಥೆಯು ನ್ಯಾಯೋಚಿತ ಮತ್ತು ನಿರ್ಭಯತೆಯ ತೆರಿಗೆದಾರರ ವಿಶ್ವಾಸ ವೃದ್ಧಿಸಲಿದೆ. ಈ ಹೊಸ ವ್ಯವಸ್ಥೆಯಡಿ ಯಾವುದೇ ಕಿರುಕುಳ ಇರುವುದಿಲ್ಲ ಎಂದು ಪ್ರಧಾನಿ ತಿಳಿಸಿದ್ದಾರೆ.

Check Also

Featured Video Play Icon

ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರ ಅಸಮಾಧಾನ

Spread the love

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!