Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಚಾರಣಿಗರ ಸ್ವರ್ಗ ಏಕಶಿಲಾ ದುರ್ಗಮ ನಾರಾಯಣದುರ್ಗ ಬೆಟ್ಟ.

ಚಾರಣಿಗರ ಸ್ವರ್ಗ ಏಕಶಿಲಾ ದುರ್ಗಮ ನಾರಾಯಣದುರ್ಗ ಬೆಟ್ಟ.

 

ಮಂಡ್ಯ: ಶೀಳನೆರ ರಾಯಸಮುದ್ರ ಗ್ರಾಮದ ಪಕ್ಕದಲ್ಲಿರುವ ನಾರಾಯಣದುರ್ಗ ಬೆಟ್ಟವು ಸಾಹಸಪ್ರಿಯರು ಹಾಗೂ ಚಾರಣಿಗರನ್ನು ಕೈ ಬೀಸಿ ಕರೆಯುತ್ತಿದೆ.
ಕೇಂದ್ರದಿಂದ ಮೇಲುಕೋಟೆಯ ಮಾರ್ಗವಾಗಿ 10 ಕಿ.ಮೀ ದೂರದಲ್ಲಿ ನೀತಿಮಂಗಲ ಸರ್ಕಲ್ ಗ್ರಾಮವು ಸಿಗುತ್ತದೆ ಅಲ್ಲಿಂದ ಬಲಕ್ಕೆ ತಿರುಗಿ ರಾಮಸಮುದ್ರ ಗ್ರಾಮದಿಂದ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಿಂದ ಎರಡು ಕಿ.ಮೀ ದುರ್ಗಮ ಅರಣ್ಯದ ಮಾರ್ಗದಲ್ಲಿ ಕಡಿದಾದ ಏಕಶಿಲಾ ಬೆಟ್ಟವನ್ನು ಹತ್ತಿದರೆ ಆಗುವ ರೋಮಾಂಚನ ಹಾಗೂ ಸಾಹಸವು ವರ್ಣಿಸದಳವಾಗಿದೆ.
ಚಾರಣಿಗರ ಸ್ವರ್ಗವೆಂದೇ ಸುಪ್ರಸಿದ್ಧವಾಗಿರುವ ದುರ್ಗಮವಾದ ನಾರಾಯಣದುರ್ಗ ಬೆಟ್ಟವನ್ನು ಹತ್ತಲು ಎಂಟೆದೆಯೇ ಬೇಕಾಗಿದೆ.
ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಈ ಅಪರಿಚಿತ ಬೆಟ್ಟವು ಪ್ರಕೃತಿಯ ಮಡಿಲಿನಲ್ಲಿದ್ದು ಹಲವಾರು ಜಿಂಕೆ, ಚಿರತೆ, ಕಾಡುಕೋಣಗಳು, ನವಿಲುಗಳು ಸೇರಿದಂತೆ ವನ್ಯಜೀವಿಗಳನ್ನು ಕಾಣಬಹುದಾಗಿದೆ.ನಾರಾಯಣದುರ್ಗ ಬೆಟ್ಟವನ್ನು ಏರಿದರೆ ಬೆಟ್ಟದ ಮೇಲೆ ಭೀಮನು ಮಂಡಿಯೂರಿ ತಿರುವಿದ ಕೊಳ, ವೀರಭದ್ರೇಶ್ವರ ದೇವರ ಗುಡಿಯಿದೆ.ಪ್ರಚಾರದಿಂದ ವಂಚಿತವಾಗಿರುವ ನಾರಾಯಣದುರ್ಗ ಬೆಟ್ಟವು ಚಾರಣಿಗರನ್ನು ಕೈಬೀಸಿ ಕರೆಯುತ್ತಿದೆ.

Share

About Bora nayak BIG TV NEWS, Mandya

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!