Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕಾಂಗ್ರೇಸ್ ನ ಆಡಿಯೋ ಬಾಂಬ್ ಷಡ್ಯಂತ್ರದ ಮೊದಲ ಹಂತ ಟುಸ್ ಪಟಾಕಿ.

ಕಾಂಗ್ರೇಸ್ ನ ಆಡಿಯೋ ಬಾಂಬ್ ಷಡ್ಯಂತ್ರದ ಮೊದಲ ಹಂತ ಟುಸ್ ಪಟಾಕಿ.

ನವದೆಹಲಿ: ಅನರ್ಹ ಶಾಸಕರ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಡಿರುವ ಮಾತುಗಳನ್ನು ಪರಿಗಣಿಸಲಾಗುವುದು. ಆದರೆ ಅದರಲ್ಲಿರುವ ಅಂಶಗಳ ಮೇಲೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಪಪಡಿಸಿದೆ.ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಪೀಠದ ಮುಂದೆ ಇಂದು ಯಡಿಯೂರಪ್ಪ ಅವರ ಆಡಿಯೋ ಪ್ರಕರಣದ ವಾದ-ಪ್ರತಿವಾದ ನಡೆಯಿತು. ಕಾಂಗ್ರೆಸ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಿಜೆಪಿ ಯೋಜನೆ ರೂಪಿಸಿತ್ತು.ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಖುದ್ದಾಗಿ ಉಸ್ತುವಾರಿ ವಹಿಸಿಕೊಂಡು 17 ಮಂದಿ ಶಾಸಕರ ರಾಜೀನಾಮೆಗೆ ಕಾರಣರಾದರು.ಎರಡೂವರೆ ತಿಂಗಳ ಕಾಲ ೧೭ ಮಂದಿ ಶಾಸಕರನ್ನು ಮುಂಬೈನಲ್ಲಿಟ್ಟಿದ್ದರು. ಹೀಗಾಗಿ ಇದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಯಲ್ಲಿ ಒಳಪಡುತ್ತದೆ.ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಖುದ್ದಾಗಿ ಯಡಿಯೂರಪ್ಪ ಅವರೇ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ 17 ಮಂದಿ ಶಾಸಕರ ರಾಜೀನಾಮೆ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಕಪಿಲ್ ಸಿಬಲ್ ಹೇಳಿದಾಗ, ನೀವು ಸಲ್ಲಿಸಿರುವ ಸಿಡಿಯಲ್ಲಿ ಯಡಿಯೂರಪ್ಪ ಅವರು ಏನು ಹೇಳಿದ್ದಾರೆ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.ಈಗಾಗಲೇ ವಾದ-ಪ್ರತಿವಾದ ಮುಕ್ತಾಯವಾಗಿದೆ. ತನಿಖೆಗಾಗಿ ಸಲ್ಲಿಸಿರುವ ಹೊಸ ಅರ್ಜಿಯನ್ನು ಪರಿಗಣಿಸುವುದಾದರೆ ಹೇಳಿಕೆ ನೀಡಿದ್ದಾರೆ ಎನ್ನಲಾದ ಯಡಿಯೂರಪ್ಪ ಅವರಿಗೆ ನೋಟೀಸ್ ಕೊಡಬೇಕಾಗುತ್ತದೆ. ಇದರಿಂದ ವಿಚಾರಣೆ ಮತ್ತಷ್ಟು ವಿಳಂಬವಾಗುತ್ತದೆ. ವಾದ-ಪ್ರತಿವಾದ ಮುಕ್ತಾಯ ವಾಗಿರುವುದರಿಂದ ತೀರ್ಪು ನೀಡಲು ಅವಕಾಶ ನೀಡಿ ಎಂದು ನ್ಯಾಯಮೂರ್ತಿಗಳು ಸಲಹೆ ನೀಡಿದರು. ಜೆಡಿಎಸ್‌ನ ಪರವಾದ ವಕೀಲ ರಾಜೀವ್ ಧವನ್ ಅವರು, ಕಾಂಗ್ರೆಸ್ ಪರ ವಕೀಲರ ವಾದವನ್ನು ಬೆಂಬಲಿಸಿದರು.ಅನರ್ಹ ಶಾಸಕರ ಪರವಾಗಿ ವಾದ ಮಂಡಿಸಿದ ವಕೀಲ ಸುಂದರಂ, ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರು ವಾದಿ ಅಥವಾ ಪ್ರತಿವಾದಿಯಾಗಿಲ್ಲ. ಅವರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ. ಸಂಬಂಧವಿಲ್ಲದ ವ್ಯಕ್ತಿಗಳು ಸಾರ್ವಜನಿಕರ ವೇದಿಕೆಯಲ್ಲಿ ಆಡಿದ ಮಾತುಗಳನ್ನು ಸಾಕ್ಷ್ಯಗಳೆಂದು ಪರಿಗಣಿಸಲಾಗುವುದಿಲ್ಲ. ಮೇಲಾಗಿ ವಕೀಲರು ಸಲ್ಲಿಸಿರುವ ಆಡಿಯೋಗೆ ಎವಿಡೆನ್ಸ್ ಆಕ್ಟ್ ೬೫(ಬಿ) ಅನುಸಾರ ಯಾವುದೇ ದೃಢೀಕರಣ ಇಲ್ಲ. ಹೀಗಾಗಿ ಆಡಿಯೋವನ್ನು ಪರಿಗಣಿಸಬಾರದು ಎಂದು ವಾದಿಸಿದರು.ಅಂತಿಮವಾಗಿ ಆಡಿಯೋದಲ್ಲಿರುವ ಅಂಶಗಳು ಈಗಾಗಲೇ ವಾದ ಮಂಡನೆ ವೇಳೆ ಪ್ರಸ್ತಾಪವಾಗಿರುವುದರಿಂದ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೊಸದಾಗಿ ಸಲ್ಲಿಕೆಯಾಗಿರುವ ಆಡಿಯೋ ಕುರಿತು ತನಿಖೆ ನಡೆಸಲು ಸಾಧ್ಯ ಇಲ್ಲ ಸ್ಪಷ್ಟವಾಗಿ ಹೇಳಿರುವ ಸುಪ್ರೀಂಕೋರ್ಟ್, ತೀರ್ಪು ನೀಡುವ ವೇಳೆ ಎಲ್ಲಾ ಅಂಶಗಳನ್ನು ಪರಿಗಣಿಸುವುದಾಗಿ ತಿಳಿಸಿ ವಿಚಾರಣೆಯನ್ನು ಮುಂದೂಡಿದೆ.

 

 

Share

About ramu BIG TV NEWS, Kolar

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!