Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಕರ್ನಾಟಕ / ಕವಿವಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಗಣಿತಶಾಸ್ತ್ರ ಸಮ್ಮೇಳನ ಪ್ರತಿಭಾ ಪಲಾಯನ ಸೂಕ್ತವಲ್ಲ : ಹೊರಟ್ಟಿ

ಕವಿವಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಗಣಿತಶಾಸ್ತ್ರ ಸಮ್ಮೇಳನ ಪ್ರತಿಭಾ ಪಲಾಯನ ಸೂಕ್ತವಲ್ಲ : ಹೊರಟ್ಟಿ

ಧಾರವಾಡ:-ಭಾರತದ ಮಟ್ಟಿಗೆ ಪ್ರತಿಭಾ ಪಲಾಯನ ಸೂಕ್ತವಲ್ಲ. ಪ್ರತಿಭಾನ್ವಿತರು ಅನಿವಾರ್ಯ ಕಾರಣಗಳಿದ್ದಾಗ ಮಾತ್ರ ವಿದೇಶಗಳಿಗೆ ಹೋಗಬೇಕೆಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಕವಿವಿಯ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಗಣಿತಶಾಸ್ತ್ರ ಮತ್ತು ಅದರ ಉಪಯುಕ್ತತೆಗಳು ವಿಷಯ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತಶಾಸ್ತ್ರ ಇಂದಿಗೂ‌ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯೇ ಆಗಿದೆ. ಹೀಗಾಗಿ ಶಿಕ್ಷಕರು ವಿನೂತನ ಶೈಲಿಯಲ್ಲಿ ಗಣಿತದ ಬೋಧನೆಗೆ ಮುಂದಾಗಬೇಕಿದೆ ಎಂದರು.
ಬೆಂಗಳೂರಿನಲ್ಲಿ ಸ್ಥಾಪಿಸಲ್ಪಟ್ಟ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ ರಾಷ್ಟ್ರದ ಪ್ರಥಮ ರಾಜ್ಯಮಟ್ಟದ ಸೈನ್ಸ್ ಅಕಾಡಮಿ ಆಗಿದ್ದು, ಇಂತಹ ಮತ್ತಷ್ಟು ಉತ್ತೇಜನಕಾರಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರಿನ ಟಿ.ಐ.ಎಫ್.ಆರ್- ಸಿ.ಎ.ಎಮ್ ಡೀನ್ ಪ್ರೊ. ಜಿ. ಡಿ. ವೀರಪ್ಪಗೌಡ, ಗಣಿತಶಾಸ್ತ್ರ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಜ್ಞಾನದ ಇತರೆಲ್ಲ ಕ್ಷೇತ್ರಗಳಲ್ಲಿ ಗಣಿತಶಾಸ್ತ್ರದ ಅನ್ವಯಿಕತೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಯಾವುದೇ ವಿಷಯದಲ್ಲಿ ನಿಖರತೆಯನ್ನು ಸಾಬೀತುಪಡಿಸಲು ಗಣಿತಶಾಸ್ತ್ರ ಅತ್ಯವಶ್ಯಕ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಸ್. ವ್ಹಿ. ಸಂಕನೂರ ಮಾತನಾಡಿ, ಸಮಾಜಕ್ಕೆ ಉಪಯುಕ್ತವಾಗದ ಯಾವುದೇ ಸಂಶೋಧನೆಯೂ ವ್ಯರ್ಥ, ಹೀಗಾಗಿ ವಿದ್ಯಾರ್ಥಿಗಳು ವಿಜ್ಞಾನದ ಇತರ ಕ್ಷೇತ್ರಗಳಲ್ಲಿ ಗಣಿತಶಾಸ್ತ್ರದ ಅನ್ವಯಿಕತೆಗೆ ಹೆಚ್ಚಿನ ಆದ್ಯತೆ ನೀಡಿ, ಅತ್ಯುತ್ತಮ ಸಂಶೋಧನೆಗಳತ್ತ ಗಮನಹರಿಸಬೇಕಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕವಿವಿ ಪ್ರಭಾರ ಕುಲಪತಿ ಪ್ರೊ. ಎ.ಎಸ್. ಶಿರಾಳಶೆಟ್ಟಿ ಮಾತನಾಡಿ, ಇಂದಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಣಿತ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಗಣಿತಶಾಸ್ತ್ರದ ಕಲಿಕೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಬೇಕಿದೆ. ರಾಷ್ಟ್ರಮಟ್ಟದ ಗಣಿತಶಾಸ್ರ್ತಜ್ಞರು ಪಾಲ್ಗೊಂಡಿರುವ ಸಮ್ಮೇಳನದ ಸದುಪಯೋಗ ಪಡೆದುಕೊಳ್ಳಬೇಕೆಂಬ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ ಮಾತನಾಡಿದರು, ಪ್ರಾಸ್ತಾವಿಕ ನುಡಿಗಳನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿಯ (ಕೆ.ಎಸ್.ಟಿ.ಎ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ. ಎಂ. ರಮೇಶ ಮಾತನಾಡಿದರು. ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಪ್ರೊ. ಪಿ. ಎಂ. ಪಾಟೀಲ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಪ್ರೊ. ಜಗದೀಶ ಟೊಣ್ಣನ್ನವರ ನಿರೂಪಿಸಿದರು. ಕೆ.ಎಸ್.ಟಿ.ಎ. ವೈಜ್ಞಾನಾಧಿಕಾರಿ ವಿ.ಕೆ. ಶ್ರೀನಿವಾಸು ವಂದಿಸಿದರು.

Share

About Shaikh BIG TV NEWS, Hubballi

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!