Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಧಾರವಾಡ / ಇಬ್ಬರು ಗ್ರಾಮ ಲೆಕ್ಕಾಧಿಕಾರಿಳ ಅಮಾನತ್ : ಡಿಸಿ ಆದೇಶ

ಇಬ್ಬರು ಗ್ರಾಮ ಲೆಕ್ಕಾಧಿಕಾರಿಳ ಅಮಾನತ್ : ಡಿಸಿ ಆದೇಶ

 

ಹುಬ್ಬಳ್ಳಿ:- ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ  ಬೆಳೆಹಾನಿ ಸಮೀಕ್ಷೆಗೆ ನಿರ್ಲಕ್ಷ್ಯ  ತೋರಿದ ಆರೋಪದ ಹಿನ್ನೆಲೆಯಲ್ಲಿ ಕಲಘಟಗಿ ತಾಲೂಕಿನ ಒಬ್ಬರು ಹಾಗೂ ಕುಂದಗೋಳ ತಾಲೂಕಿನ ಬಿ. ಗುಡಿಹಾಳ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಒಬ್ಬರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

ಕಲಘಟಗಿ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿ ಯೋಗೇಂ ದ್ರಕುಮಾರ ಹಾಗೂ ಕುಂದಗೋಳ ತಾಲೂಕಿನ ಬಿ. ಗುಡಿಹಾಳ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಶಿವುಕುಮಾರ ಲಮಾಣಿ ಅಮಾನತುಗೊಂಡಿರುವ ಗ್ರಾಮ ಲೆಕ್ಕಾಧಿಕಾರಿಗಳು.

ಇವರು ತಾಲೂಕಿನ ಇತರೇ ಗ್ರಾಮಲೆಕ್ಕಾಧಿಕಾರಿಗಳನ್ನು ಒಂದುಗೂಡಿಸಿ, ಸರ್ಕಾರದ ಮಹತ್ವದ ಯೋಜನೆಯಾದ ಬೆಳೆಹಾನಿ ಪರಿಹಾರ ಡಾಟಾ ಎಂಟ್ರಿ ಕಾರ್ಯವನ್ನು ಮಾಡಬಾರದೆಂದು ತಮ್ಮ ಸಹೋದ್ಯೋಗಿಗಳಿಗೆ ಪ್ರಚೋದನೆ ನೀಡಿ,ಅವರ ದಾರಿ ತೋರಿಸುವ ಮೂಲಕ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಇದರೊಂದಿಗೆ ತಹಸೀಲ್ದಾರ ಕಲಘಟಗಿ ಅವರ ವಾಟ್ಸ್ ಆಫ್ ಗ್ರುಪ್‍ನಿಂದ ಕಡ್ಡಾಯವಾಗಿ ಹೊರ ಬರುವಂತೆ ಸಿಬ್ಬಂದಿಗೆ ಒತ್ತಾಯ ಮಾಡಿರುವುದು ಬೆಳಕಿಗೆ ಬಂದಿದೆ.

ಸರ್ಕಾರಿ ಕೆಲಸಕ್ಕೆ ಹಿನ್ನಡೆಯನ್ನುಂಟು ಮಾಡಿದ್ದರಿಂದ ಅವರನ್ನು ತಹಸೀಲ್ದಾರ ವರದಿ ಹಾಗೂ ಅಪರ ಜಿಲ್ಲಾಧಿಕಾರಿಗಳ ತನಿಖಾ ವರದಿ ಆದರಿಸಿ ತಕ್ಷಣವೇ ಅಮಾನತು ಗೊಳಿಸಲಾಗಿದೆ ಎಂದು ಡಿಸಿ ದೀಪಾ ಚೋಳನ್ ಅವರು ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಅಮಾನತುಗೊಂಡಿರುವ ಈ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳ ವರ್ತನೆಯಿಂದಾಗಿ 2019-20ರ ಮುಂಗಾರು ಬೆಳೆಹಾನಿ ಪರಿಹಾರ ಡಾಟಾ ಎಂಟ್ರಿ ಕಾರ್ಯವು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಕುಂಠಿತಗೊಂಡಿದ್ದು,

ರಾಜ್ಯದ ಸರ್ಕಾರಿ ನೌಕರರಾಗಿ ಸರ್ಕಾರದಿಂದ ವಹಿಸಿದ ಎಲ್ಲ ಕಾರ್ಯಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊ ಳಿಸುವುದು ಅವರ ಆದ್ಯ ಕರ್ತವ್ಯ ವಾಗಿದ್ದು, ಅದನ್ನು ಗಣನೆಗೆ ತೆಗೆದುಕೊಳ್ಳದೇ ಗ್ರಾಮಲೆಕ್ಕಾಧಿಕಾರಿಗಳು ತದ್ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಸರಕಾರದ ಕೆಲಸಕ್ಕೆ ಅಸೆಡ್ಡೆ ತೋರಿದ್ದಾರೆ.

ಆದರಿಂದ ಅವರ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ವಿವರಿಸಿದ್ದಾರೆ.

Share

About solaragoppa

Check Also

ವಿನಯ ಕುಲಕರ್ಣಿ ಬಂಧನ-ರಾಜಕೀಯ ಪ್ರೇರಿತ: ಬಿ.ಕೆ.ಹರಿಪ್ರಸಾದ

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನ ಸಿಬಿಐ ಬಂಧನ ಮಾಡಿದ್ದು ರಾಜಕೀಯ ದುರುದ್ದೇಶದಿಂದ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ ಹೇಳಿದರು. …

Leave a Reply

Your email address will not be published. Required fields are marked *

error: Content is protected !!