Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಹಾವು ಕಡಿದು ಇಬ್ಬರು ಪ್ರಗತಿಪರ ರೈತರ ಸಾವು.

ಹಾವು ಕಡಿದು ಇಬ್ಬರು ಪ್ರಗತಿಪರ ರೈತರ ಸಾವು.

 

ಮಂಡ್ಯ: ಹಾವು ಕಡಿದ ಪರಿಣಾಮ ರೈತರಿಬ್ಬರು ಸಾವನ್ನಪ್ಪಿರುವ ಘಟನೆ ಚೌಡಸಮುದ್ರ ಗ್ರಾಮದಲ್ಲಿ ನಡೆದಿದೆ.
ಯಲಾದಹಳ್ಳಿಯ ಮಂಜುನಾಥ್ ಮತ್ತು ಚೌಡಸಮುದ್ರದ ಮಹದೇವಪ್ಪ ಎಂ ಮೃತ ದುರ್ದೈವಿಗಳಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಂದ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಚೌಡಸಮುದ್ರ ಗ್ರಾಮದಲ್ಲಿ ಹುಲ್ಲು ಕೊಯ್ಯಲು ಜಮೀನಿಗೆ ಹೋಗಿದ್ದ ಮಹದೇವಪ್ಪ(45)ಅವರಿಗೆ ಹಾವು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ತಾಲ್ಲೂಕು ವೀರಶೈವ ಮಹಾಸಭಾದ ಅಧ್ಯಕ್ಷ ಧನಂಜಯ ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಸಂಬಂಧಿಗಳಿಗೆ ಸಾಂತ್ವನ ಹೇಳಿದರು.‌ಮೃತ ಮಹದೇವಪ್ಪ ಅವರ ಸಹೋದರ ಲೋಕೇಶ್ ಕೋಲಾರದ ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತಾಲ್ಲೂಕಿನ ಸಾಸಲು ಪಕ್ಕದ ಯಲಾದಹಳ್ಳಿ ಗ್ರಾಮದ ಮಂಜುನಾಥ್(40)ಅವರು ತಮ್ಮ ಜಮೀನಿನ ಬಳಿ ಹೋಗಿದ್ದಾಗ ಹಾವು ಕಡಿದು ಮೈಗೆ ವಿಷವೇರಿ ಚನ್ನರಾಯಪಟ್ಟಣ ನಾಗೇಶ್ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬೂಕಹಳ್ಳಿ ಮಂಜು, ಮುಖಂಡ ಎಸ್.ಸಿ.ಅರವಿಂದ್, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.

Share

About Bora nayak BIG TV NEWS, Mandya

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!