Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೆಳಗಾವಿ / ಮುಂದಿನ ನಡೆ ಬಗ್ಗೆ ಅನರ್ಹರ ಸಭೆ.

ಮುಂದಿನ ನಡೆ ಬಗ್ಗೆ ಅನರ್ಹರ ಸಭೆ.

 

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿಢೀರ್ ಸಭೆ ನಡೆಸಿದ ರೆಬೆಲ್ ಅನರ್ಹ ಶಾಸಕ ರಮೇಶ್ ಜಾರಕಿಹೋಳಿ ತಮ್ಮ ಬೆಂಬಲಿಗರ ಸಲಹೆ ಪಡೆದರು..
ಅಥಣಿ ಮತಕ್ಷೇತ್ರದಲ್ಲಿ ಸದ್ಯ ಡಿ ಸಿ ಎಮ್ ಆಗಿರುವ ಲಕ್ಷ್ಮಣ ಸವದಿ ಅವರ ಟಿಕೆಟ್ ವಿಚಾರ ಹೈ ಕಮಾಂಡ್ ಬಳಿ ಇದೆ ಇನ್ನುಳಿದಂತೆ ಮೂವತ್ಮೂರು ಸಾವಿರ ಮತಗಳ ಅಂತರದಿಂದ ಸೋತ ರಾಜು ಕಾಗೆಗೆ ಟಿಕೆಟ್ ಕೊಡುವಂತೆ ಹೇಳುತ್ತಿರುವದು ಎಷ್ಟು ಸರಿ ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ನಿನ್ನೆಯಷ್ಟೆ ಬಿ ಎಸ್ ವೈ ಉಪಚುನಾವಣೆ ಪೂರ್ವ ಭಾವಿ ಸಭೆಯಲ್ಲಿ ಹೇಳಿದ್ದಾರೆ..
ಇದರಿಂದಾಗಿ ಪರೋಕ್ಷವಾಗಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣವಾಗಿದ್ದ ಹದಿನೈದು ಜನ ಶಾಸಕರು ಸದ್ಯ ಅತಂತ್ರವಾಗುವ ಸ್ಥಿತಿ ನಿರ್ಮಾಣವಾಗಿದ್ದು ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆ ತಕ್ಕಡಿಯಲ್ಲಿ ವಾಲುತ್ತಿದ್ದು ಅನಿರೀಕ್ಷಿತ ಏಟುಗಳು ಬಿಳುತ್ತಿದ್ದಂತೆ ಮತ್ತೆ ಅನರ್ಹ ಶಾಸಕರ ಎದೆ ಬಡಿತ ಹೆಚ್ಚಾಗಿದೆ..
ಇದರಿಂದಾಗಿ ಅಥಣಿ ಮತಕ್ಷೇತ್ರದಲ್ಲಿ ಸದ್ಯ ಡಿ ಸಿ‌ಎಮ್ ಲಕ್ಷ್ಮಣ ಸವದಿಗೆ ಪರ್ಯಾಯವಾಗಿ ಮಹೆಶ್ ಕುಮಠಳ್ಳಿ ಅವರನ್ನು ಅಖಾಡಕ್ಕೆ ಇಳಿಸುವ ಕುರಿತು ಕೂಡ ಗೌಪ್ಯ ಸಭೆ ನಡೆಸಿದ್ದು ರಮೆಶ್ ಜಾರಕಿಹೋಳಿ ಸಹೋದರ ಸತೀಶ್ ಜಾರಕಿಹೋಳಿ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ದವೂ ಗುಡುಗಿದ್ದಾರೆ…
ಇನ್ನೂ ತಮ್ಮ ಸಹೋದರ ಸತೀಶ್ ನಾನು ಆಸ್ತಿ ಮಾಡಿದ್ದೆನೆ ಎಂದು ಒಮ್ಮೆ ಹೇಳಿದರೆ ಇನ್ನೊಮ್ಮೆ ಸಾಲಗಾರನಾಗಿದ್ದೆನೆ ಎನ್ನುತ್ತಿದ್ದಾರೆ ಅವರ ಆರೋಪಗಳಿಗೆ ಬಹಿರಂಗ ಸಭೆಯಲ್ಲಿ ಉತ್ತರ ಕೊಡುತ್ತೆನೆ.
ಸತೀಶ್ ಹೇಳುತ್ತಿರುವ ವಸ್ತು ಮಂಗಳೂರು ಅಥವಾ ಮೈಸೂರಿನದ್ದಾಗಿರಬಹುದು ಆದರೆ ಯಾರೂ ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಬಾರದು ಎಂದು ಕುಟುಕಿದರಲ್ಲದೆ ಸಹೋದರ ಸತೀಶಗೆ ಮೈಂಡ್ ಔಟ್ ಆಗಿದ್ದು ಅವರನ್ನು ಧಾರವಾಡ ಆಸ್ಪತ್ರೆಗೆ ಸೇರಿಸಬೇಕಾಗಿದೆ ಎಂದಿದ್ದಾರೆ.. ಇಷ್ಟೇ ಅಲ್ಲದೆ ಯಡಿಯೂರಪ್ಪ ಮಾತಿಗೆ ಪ್ರತಿಕ್ರಿಯೆ ನಿಡಿದ ರಮೆಶ್ ಜಾರಕಿಹೋಳಿ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ನಮ್ಮಲ್ಲಿನ ವೈಮನಸ್ಸಿನಿಂದ ,ಬಿಜೆಪಿ ಸರ್ಕಾರ ಬರಲಿ ಅಂತಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದು ಬಿಜೆಪಿ ಸೇರ್ಪಡೆ ಕುರಿತು ಪ್ರತಿಕ್ರಿಯೆ ಮಾಧ್ಮದವರು ಒಂದು ಚಾನಲ್ ನಿಂದ ಮತ್ತೊಂದು ಚಾನಲ್ ಗೆ ಹೋಗುತ್ತಾರೆ ಹಾಗೆಯೇ ನಾವು ಪಕ್ಷದಿಂದ ಪಕ್ಷಕ್ಕೆ ಹೋಗುವದರಲ್ಲಿ ತಪ್ಪೆನಿದೆ ರಾಜಕಾರಣ ಒಂದು ಉದ್ದಿಮೆ‌ ಎನ್ನುವ ಮೂಲಕ‌ ಬಿಜೆಪಿ ಸೇರ್ಪಡೆಯ ಒಳ ಸುಳಿವನ್ನು ಕೂಡ ಬಿಟ್ಟುಕೊಟ್ಟಿದ್ದು ಒಟ್ಟಾರೆ ಆಗಿ ರಾಜ್ಯ ರಾಜಕಾರಣದಲ್ಲಿ ಆಗಲಿರುವ ಬದಲಾವಣೆ ಅನರ್ಹತೆಯ ಕುರಿತು ಸುಪ್ರೀಂ ತೀರ್ಪಿನ ಬಳಿಕ ಮತ್ತಷ್ಟು ಬದಲಾವಣೆಯ ಬಿರುಗಾಳಿಗೆ ಸಿಲುಕಲಿದೆ ಅನ್ನುವದರಲ್ಲಿ ಎರಡು ಮಾತಿಲ್ಲ..

ವರದಿ: ಪ್ರಕಾಶ Big Tv News Chikkodi.

Share

About Prakash s kamble BIG TV NEWS, Athani

Check Also

ಮಹಾರಾಷ್ಟ್ರದಲ್ಲಿ ತಗ್ಗಿದ ವರುಣನ ಆರ್ಭಟ.‌

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಧೋ ಎಂದು ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಇಂದು ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯಕ್ಕೆ ಹರಿದು …

Leave a Reply

Your email address will not be published. Required fields are marked *

error: Content is protected !!