Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಮಂಡ್ಯ / ಅನರ್ಹ ಶಾಸಕ ನಾರಾಯಣಗೌಡರ ಸಾಕುನಾಯಿ ಸ್ವೀಟಿ ಸಾವು.

ಅನರ್ಹ ಶಾಸಕ ನಾರಾಯಣಗೌಡರ ಸಾಕುನಾಯಿ ಸ್ವೀಟಿ ಸಾವು.

ಮಂಡ್ಯ: ಅನರ್ಹ ಶಾಸಕ ಡಾ. ನಾರಾಯಣಗೌಡರ ಸಾಕು ನಾಯಿ ಸ್ವೀಟಿ ಇಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದು, ನಾಯಿಯ ಅಂತ್ಯಕ್ರಿಯೆ ಹಾಗೂ ಉತ್ತರ ಕ್ರಿಯೆಯನ್ನು ನಾರಾಯಣಗೌಡರ ಸಾಧುಗೋನಹಳ್ಳಿ ಹೊರವಲಯದ ತೋಟದಲ್ಲಿ ಶಾಸ್ತ್ರೋಕ್ತವಾಗಿ ವಿಧಿ ಬದ್ಧವಾಗಿ ನಡೆಸಲಾಯಿತು.
ನಾರಾಯಣಗೌಡರನ್ನು ಅತಿಯಾಗಿ ಹಚ್ಚಿಕೊಂಡಿದ್ದ ಪಗ್ ಜಾತಿಯ ನಾಯಿ ಸ್ವೀಟಿಯ ಸಾವು ಭಾರೀ ನೋವು ತಂದಿದೆ ಎಂದು ಶಾಸಕರ ಆಪ್ತಮಿತ್ರ ಕೊಮ್ಮೇನಹಳ್ಳಿ ಜಗಧೀಶ್ ಹೇಳಿದರು.
ಅನರ್ಹಶಾಸಕ ಡಾ. ನಾರಾಯಣಗೌಡರ ಪತ್ನಿ ದೇವಕಿ ನಾರಾಯಣಗೌಡ, ಪುತ್ರಿ ಲೀನಾಕರಣ್, ಉತ್ತರಕ್ರಿಯಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಮನೆಯ ಸಾಕು ನಾಯಿ ಸ್ವೀಟಿಗೆ ಅಂತಿಮ‌ ನಮನ ಸಲ್ಲಿಸಿದರು.

Share

About Vijayalakshmi

Check Also

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಶುಭಸುದ್ದಿ

ಮಂಡ್ಯ : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೆ ತರಲು ಚಿಂತನೆ …

Leave a Reply

Your email address will not be published. Required fields are marked *

error: Content is protected !!