Hiring Reporter’s For more Information Contact Above Number 876 225 4007 . Program producer
Home / Breaking News / ಯೋಗಿ ಆಡಳಿತದ ಉತ್ತರ ಪ್ರದೇಶವು ಮಹಿಳೆಯರಿಗೆ ಒಂದು ದುಸ್ವಪ್ನವಾಗಿದೆ: ಮೊಹಮ್ಮದ ರಫೀಕ ಲಷ್ಕರ

ಯೋಗಿ ಆಡಳಿತದ ಉತ್ತರ ಪ್ರದೇಶವು ಮಹಿಳೆಯರಿಗೆ ಒಂದು ದುಸ್ವಪ್ನವಾಗಿದೆ: ಮೊಹಮ್ಮದ ರಫೀಕ ಲಷ್ಕರ

Spread the love

ಹುಬ್ಬಳ್ಳಿ;ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರ ಗೌರವವನ್ನು ಅಲ್ಲಿ ನಿರ್ಲಕ್ಷಿಸಲಾಗಿದೆ. ಯೋಗಿಯ ಆಳ್ವಿಕೆಯಲ್ಲಿ ಮಹಿಳೆಯರ ವಾಸಕ್ಕೆ ಉತ್ತರ ಪ್ರದೇಶ ಒಂದು ದುಃಸ್ವಪ್ನದ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಹುಬ್ಬಳ್ಳಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷರಾದ ಮೊಹಮ್ಮದ ರಫೀಕ ಲಷ್ಕರ ರವರು ಟೀಕಿಸಿದ್ದಾರೆ.

ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಪ್ರತಿಭಟನೆ ಮಾಡಿದ ವೇಳೆ ಮಾತನಾಡಿದ ಅವರು,
ಉತ್ತರ ಪ್ರದೇಶದಲ್ಲಿ ಮಾನವೀಯತೆ ಅಕ್ಷರಶಃ ಸತ್ತು ಹೋಗಿದೆ. ಮನುಷ್ಯನಿಂದ ಯಾವುದೇ ರೀತಿಯ ಮಾನವೀಯತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದುದರಿಂದ ಇತಂಹ ಮನುವಾದಿಗಳನ್ನು ಅಧಿಕಾರದಿಂದ ದೂರ ಇಡ ಬೇಕು. ಇದು ನಮ್ಮೆಲ್ಲರ ಸಾಮಾಜಿಕ ಜವಾಬ್ಧಾರಿಯಾಗಿರುತ್ತದೆ.

ಜಂಗಲ್ ರಾಜ್ ಎಂಬ ಪದವು ಉತ್ತರ ಪ್ರದೇಶಕ್ಕೆ ಹೆಚ್ಚು ಸೂಕ್ತವೆನಿಸುತ್ತದೆ. ಯಾವುದೇ ನೈತಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು ಅಥವಾ ಮಾನವೀಯತೆಗೆ ಅಲ್ಲಿ ಗೌರವವಿಲ್ಲದಂತಾಗಿದೆ. ಅಲ್ಲಿ ಮನುಷ್ಯರಿಗಿಂತ ಹಸುಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಅತ್ಯಾಚಾರಿಗಳು ಮತ್ತು ಕಿರುಕುಳ ನೀಡುವವರು ಅಲ್ಲಿ ಆಡಳಿತ ನಡೆಸುತ್ತಿದ್ದಾರೆ. ಈ ಅವಮಾನದ ಗಾಯಕ್ಕೆ ಮತ್ತಷ್ಟು ನೋವು ಉಂಟು ಮಾಡುತ್ತಾ, “ಸರ್ವರ್ಣ ಪರಿಷತ್” ಹೆಸರಿನ ತಂಡವು ಹತ್ರಾಸ್ ಅತ್ಯಾಚಾರಿಗಳನ್ನು ಬೆಂಬಲಿಸಿ ಮುನ್ನೆಲೆಗೆ ಬಂದಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಷಾದ ಅತ್ತಾರ, ಹಮೀದ ಬಂಗಾಲಿ, ಇರ್ಷಾದ ಅಹ್ಮದ ರಿತ್ತಿ, ರಫೀಕ್ ಬಿಸ್ತಿ, ಅಬ್ದುಲ್ಲಾ ಕುಂಬಳೂರು, ಸಮೀರ ಬೆಟಗೇರಿ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Check Also

ವಾಣಿಜ್ಯ ನಗರದಲ್ಲಿ ಹೆಚ್ಚಾಗುತ್ತಿರುವುದು ಬೈಕ್ ಕಳ್ಳತನ… ಸಾರ್ವಜನಿಕರೇ ಎಚ್ಚರ ಎಚ್ಚರ

Spread the loveಹುಬ್ಬಳ್ಳಿ: ನಗರದಲ್ಲಿ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರಗಳ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!